ಬೆಂಗಳೂರು : ನಾವು ಮಾಡುವ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವಾತ ಶನಿದೇವ. ಆದ್ದರಿಂದಲೇ ಅವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಶನಿಯನ್ನು 8ರ ಅಧಿಪತಿ ಎಂದು ಕೂಡಾ ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, 1 ರಿಂದ 9 ರವರೆಗಿನ ಸಂಖ್ಯೆಗಳಿವೆ. ರಾಡಿಕ್ಸ್ ಎನ್ನುವುದು ವ್ಯಕ್ತಿಯ ಹುಟ್ಟಿದ ದಿನಾಂಕದ ಮೊತ್ತವಾಗಿದೆ. ಉದಾಹರಣೆಗೆ, ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ವ್ಯಕ್ತಿಯು ರಾಡಿಕ್ಸ್ 8 ಆಗಿರುತ್ತದೆ. ಯಾರ ಮೂಲಾಂಕ 8 ಆಗಿರುತ್ತದೆಯೋ ಅವರ ಮೇಲೆ ಶನಿ ದೇವನ ಆಶೀರ್ವಾದ ಹೆಚ್ಚೇ ಇರುತ್ತದೆ.
ಮೂಲಾಂಕ 8 ರ ಜನರು ಶ್ರಮಜೀವಿಗಳು :
ರಾಡಿಕ್ಸ್ 8 ಹೊಂದಿರುವವರು ತುಂಬಾ ಶ್ರಮಶೀಲರು, ಪ್ರಾಮಾಣಿಕರು ಮತ್ತು ತಾಳ್ಮೆಯಿಂದ ಇರುತ್ತಾರೆ. ತಪ್ಪನ್ನು ಇವರು ಸಹಿಸುವುದಿಲ್ಲ. ತಪ್ಪನ್ನು ಗಟ್ಟಿ ಸ್ವರದಲ್ಲಿ ಖಂಡಿಸುತ್ತಾರೆ. ಇವರು ಹಠ ಸ್ವಭಾವದಬ್ವರು. ತಾವು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಿದ ನಂತರವೇ ನಿಟ್ಟುಸಿರು ಬಿಡುತ್ತಾರೆ.
ಇದನ್ನೂ ಓದಿ : Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ
ಸರಳ ಜೀವನ, ಉನ್ನತ ಚಿಂತನೆ :
ರಾಡಿಕ್ಸ್ 8 ರ ಜನರು ಸರಳ ಜೀವನವನ್ನು ಅನುಸರಿಸುತ್ತಾರೆ. ಆದರೆ ಅವರು ಉನ್ನತ ಮಟ್ಟದ ಚಿಂತನೆಯನ್ನು ಹೊಂದಿರುತ್ತಾರೆ. ತೋರ್ಪಡಿಕೆಯ ಗುಣವನ್ನು ಒಪ್ಪುವುದಿಲ್ಲ. ಕೈತುಂಬಾ ದುಡ್ಡು ಗಳಿಸಿದರೂ ಅದನ್ನು ಯೋಚನೆ ಮಾಡಿ ಖರ್ಚು ಮಾಡುತ್ತಾರೆ.
ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ :
ರಾಡಿಕ್ಸ್ 8 ರ ಜನರು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಇವರು ದೊಡ್ಡ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾರೆ. ಉದಾಹರಣೆಗೆ, ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಂಕ ಸೆಪ್ಟೆಂಬರ್ 17, ಹೀಗಾಗಿ ಅವರ ಮೂ ಲಾಂಕ ಸಹ 8 ಆಗಿದೆ.
ಇದನ್ನೂ ಓದಿ : Budh Asta 2023: ಬುಧನ ಅಸ್ತದಿಂದ ಈ 4 ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ನಷ್ಟ!
ರಹಸ್ಯಮಯ ಸ್ವಭಾವ :
ರಾಡಿಕ್ಸ್ 8 ರ ಜನರು ತಮ್ಮ ವಿಷಯಗಳನ್ನು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅವರು ಸುಲಭವಾಗಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ಆದರೆ ಯಾರನ್ನಾದರೂ ಸ್ನೇಹಿತರನ್ನಾಗಿ ಒಪ್ಪಿಕೊಂಡರೆ ಕೊನೆ ಕ್ಷಣದವರೆಗೂ ಅವರ ಜೊತೆಯಲ್ಲಿ ನಿಂತಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.