Surya Grahan 2023: ಸೂರ್ಯ ಗ್ರಹಣದಂದು 5 ಶುಭ ಯೋಗ ನಿರ್ಮಾಣ, ಈ ರಾಶಿಯವರಿಗೆ ಭಾರೀ ಲಾಭ

Auspicious Yoga on Surya Grahan: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಗಳನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಈ ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಮಂಗಳಕರ ಶುಭ ಯೋಗಗಳು ನಿರ್ಮಾಣಗೊಳ್ಳಲಿದ್ದು, ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Apr 14, 2023, 04:03 PM IST
  • ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, 20 ಏಪ್ರಿಲ್ 2023ರಂದು ಸಂಭವಿಸಲಿರುವ ಸೂರ್ಯ ಗ್ರಹಣದಂದು ಕೆಲವು ಮಹಾನ್ ಯೋಗಗಳು ರೂಪುಗೊಳ್ಳಲಿವೆ.
  • ಇದರ ಶುಭ- ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ.
  • ಆದಾಗ್ಯೂ, ಸೂರ್ಯ ಗ್ರಹಣದಂದು ನಿರ್ಮಾಣಗೊಳ್ಳಲಿರುವ ಈ ಶುಭ ಯೋಗಗಳು ಕೆಲವು ರಾಶಿಯವರಿಗೆ ಬಂಗಾರದ ಸಮಯ ಎಂದು ಸಾಬೀತುಪಡಿಸಲಿವೆ.
Surya Grahan 2023: ಸೂರ್ಯ ಗ್ರಹಣದಂದು 5 ಶುಭ ಯೋಗ ನಿರ್ಮಾಣ, ಈ ರಾಶಿಯವರಿಗೆ ಭಾರೀ ಲಾಭ  title=
Yogas On Surya Grahan

Solar Eclipse Effect: ಖಗೋಳ ಲೆಕ್ಕಾಚಾರಗಳ ಪ್ರಕಾರ, ಇನ್ನ್ದು ಕೆಲವೇ ದಿನಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣಗಳು ಖಗೋಳದ ಹೊರತಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಬಹಳ ಮಹತ್ವವನ್ನು ಪಡೆದಿವೆ. ವಾಸ್ತವವಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹಣವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಈ ವರ್ಷದ  ಮೊದಲ ಸೂರ್ಯ ಗ್ರಹಣ 20 ಏಪ್ರಿಲ್ 2023 ರಂದು ಸಂಭವಿಸಲಿದ್ದು ಈ ಸಂದರ್ಭದಲ್ಲಿ ಮಹಾನ್ ಯೋಗಗಳು ರೂಪುಗೊಳ್ಳಲಿವೆ. 

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, 20 ಏಪ್ರಿಲ್ 2023ರಂದು ಸಂಭವಿಸಲಿರುವ ಸೂರ್ಯ ಗ್ರಹಣದಂದು ಸರ್ವಾರ್ಥ ಸಿದ್ಧಿ ಯೋಗ, ಬುಧಾದಿತ್ಯ ಯೋಗ, ಹಂಸ ಯೋಗ ಸೇರಿದಂತೆ ಹಲವು ಶುಭ ಯೋಗಗಳು ನಿರ್ಮಾಣಗೊಳ್ಳಲಿವೆ. ಇದರ ಶುಭ- ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಸೂರ್ಯ ಗ್ರಹಣದಂದು ನಿರ್ಮಾಣಗೊಳ್ಳಲಿರುವ ಈ ಶುಭ ಯೋಗಗಳು ಕೆಲವು ರಾಶಿಯವರಿಗೆ ಬಂಗಾರದ ಸಮಯ ಎಂದು ಸಾಬೀತುಪಡಿಸಲಿವೆ ಎಂದು ಹೇಳಲಾಗುತ್ತಿದೆ. 

ಸೂರ್ಯ ಗ್ರಹಣದಂದು ಪಂಚ ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಬಂಗಾರದಂತ ಸಮಯ: 
ಮಿಥುನ ರಾಶಿ: 

ಸೂರ್ಯ ಗ್ರಹಣದ ದಿನ ನಿರ್ಮಾಣಗೊಳ್ಳಲಿರುವ ಮಹಾ ಯೋಗಗಳಿಂದಾಗಿ ಮಿಥುನ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯವರು ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯುವರು. ಮಾತ್ರವಲ್ಲ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಗೌರವವೂ ಪ್ರಾಪ್ತಿಯಾಗುತ್ತದೆ. 

ಇದನ್ನೂ ಓದಿ- ಶೀಘ್ರದಲ್ಲೇ ಈ ರಾಶಿಯವರ ತಿಜೋರಿ ತುಂಬಲಿದ್ದಾನೆ ಕೇತು

ಕರ್ಕಾಟಕ ರಾಶಿ: 
ವರ್ಷದ ಮೊದಲ ಸೂರ್ಯ ಗ್ರಹಣದಂಡು ರೂಪುಗೊಳ್ಳಲಿರುವ ಮಂಗಳಕರ ಯೋಗಗಳು ಕರ್ಕಾಟಕ ರಾಶಿಯವರ ಜೀವನದಲ್ಲಿ ಉತ್ತಮ ಫಲಗಳನ್ನು ನೀಡುತ್ತದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರು ವೃತ್ತಿ ರಂಗದಲ್ಲಿ ಹೊಸ ಉತ್ತುಂಗವನ್ನು ತಲುಪುವಿರಿ. ಮಾತ್ರವಲ್ಲ, ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಉತ್ತಮ ಲಾಭವನ್ನೂ ಗಳಿಸುವಿರಿ. 

ಸಿಂಹ ರಾಶಿ: 
2023ರ ಮೊದಲ ಸೂರ್ಯ ಗ್ರಹಣವು ಸಿಂಹ ರಾಶಿಯವರ ಪ್ರೀತಿಯ ಜೀವನದಲ್ಲಿ ಧನಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಸಿಂಹ ರಾಶಿಯ ಉದ್ಯೋಗಸ್ಥರು ಪ್ರಮೋಷನ್ ಪಡೆಯಬಹುದು. ಮಾತ್ರವಲ್ಲ, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದ್ದು ಭೂಮಿ, ವಾಹನ ಖರೀದಿ ಯೋಗವೂ ಇದೆ. 

ಧನು ರಾಶಿ: 
ಸೂರ್ಯ ಗ್ರಹಣದಲ್ಲಿ ರೂಪುಗೊಳ್ಳಲಿರುವ ಶುಭ ಯೋಗಗಳು ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಧನು ರಾಶಿಯವರಿಗೆ ಹಠಾತ್ ಧನ ಯೋಗದ ಅವಕಾಶವಿದೆ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗಬಹುದು. 

ಇದನ್ನೂ ಓದಿ- ಈ ವರ್ಷ ಅಕ್ಷಯ ತೃತೀಯದಲ್ಲಿ ರೂಪುಗೊಳ್ಳಲಿದೆ 7 ಮಹಾನ್ ಯೋಗ

ಕುಂಭ ರಾಶಿ: 
ಸೂರ್ಯ ಗ್ರಹಣದಲ್ಲಿ ರೂಪುಗೊಳ್ಳಲಿರುವ ಶುಭ ಯೋಗಗಳು ಕುಂಭ ರಾಶಿಯವರ ಜೀವನದಲ್ಲೂ ಒಳ್ಳೆಯ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಸಮಾಜದಲ್ಲಿ ಕೀರ್ತಿ ಗಳಿಸುವಿರಿ. ಹಣಕಾಸಿಗೆ ಸಂಬಂಧಿಸಿದಂತೆಯೂ ಸಮಯ ಅದ್ಭುತವಾಗಿದ್ದು, ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News