Saturn Rise 2023: ಸಂಪೂರ್ಣ ಅಸ್ತಮಿಸಿದ ಶನಿಯ ಉದಯ ಯಾವಾಗ? ಯಾವ ರಾಶಿಗಳಿಗೆ ಲಾಭ?

Shani Uday 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ಅಸ್ತಮಿಸಿದಾಗ ಅಥವಾ ಉದಯಿಸಿದಾಗ ಸಂಪೂರ್ಣ ಮಾನವ ಜೀವನದ ಮೇಲೆ ಅದರ ಪ್ರಭಾವ ಗೋಚರಿಸುತ್ತದೆ. ಇದರ ಜೊತೆಗೆ ಗ್ರಹಗಳ ರಾಶಿ ಪರಿವರ್ತನೆ ಕೂಡ ವಿಭಿನ್ನ ರಾಶಿಗಳ ಜನರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವ ಬೀರುತ್ತದೆ. ಕರ್ಮ ಫಲದಾತ ಶನಿ ಪ್ರಸ್ತುತ ಸಂಪೂರ್ಣ ಅಸ್ತ ಸ್ಥಿತಿಗೆ ಜಾರಿದ್ದಾನೆ. ಇದರಿಂದ ಕೆಲ ರಾಶಿಗಳ ಜನರು ಭಾರಿ ಎಚ್ಚರಿಕೆಯಿಂದ ಇರಬೇಕಾಗಲಿದೆ. ಇನ್ನೊಂದೆಡೆ ಮಾರ್ಚ್ ತಿಂಗಳ ಆರಂಭದಲ್ಲಿ ಶನಿಯು ಪುನಃ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ.  

Written by - Nitin Tabib | Last Updated : Feb 13, 2023, 05:39 PM IST
  • ಶನಿದೇವನು ಮಾರ್ಚ್ 5, 2023 ರಂದು ಮತ್ತೆ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದು,
  • ಇದರಿಂದ ಕೆಲ ರಾಶಿಗಳ ಜನರಿಗೆ ಮತ್ತೆ ಉತ್ತಮ ಫಲಿತಾಂಶಗಳನ್ನು ದಯಪಾಲಿಸಲಿದ್ದಾನೆ.
  • ಹೆಚ್ಚು ಅದೃಷ್ಟಶಾಲಿ ಮೂರು ರಾಶಿಗಳ ಜನರಿಗೆ ಅಪಾರ ಧನವೃಷ್ಟಿ ಜೊತೆಗೆ ಅದೃಷ್ಟ, ಗೌರವ ಮತ್ತು ಪ್ರತಿಷ್ಠೆಯನ್ನು ಕೂಡ ನೀಡಲಿದ್ದಾನೆ.
Saturn Rise 2023: ಸಂಪೂರ್ಣ ಅಸ್ತಮಿಸಿದ ಶನಿಯ ಉದಯ ಯಾವಾಗ? ಯಾವ ರಾಶಿಗಳಿಗೆ ಲಾಭ? title=
ಶೀಘ್ರದಲ್ಲಿಯೇ ಶನಿ ಉದಯ

Saturn Rise Impact 2023: ಯಾವುದೇ ವ್ಯಕ್ತಿಯ ಜೀವನದ ಯಶಸ್ಸು ಮತ್ತು ವೈಫಲ್ಯದ ಹಿಂದೆ ಗ್ರಹಗಳ ಪ್ರಮುಖ ಪಾತ್ರ ಇರುತ್ತದೆ. ಗ್ರಹಗಳ ಚಲನೆಯಿಂದ ಮಾತ್ರ ರಾಶಿಗಳು ಬದಲಾಗುತ್ತವೆ ಮತ್ತು ಈ ಬದಲಾವಣೆಯು ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಶನಿ ದೇವನನ್ನು ನ್ಯಾಯ ಫಲದಾತ ಎಂದು ಕರೆಯಲಾಗುತ್ತದೆ ಮತ್ತು ಆತ ಜನರಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿದೇವನು ಜನವರಿ ಮಧ್ಯದಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಾದ ಬಳಿಕ ಜನವರಿ ಅಂತ್ಯಕ್ಕೆ ಆತನ ಅಸ್ತ ಆರಂಭಗೊಂಡು, ಇದೀಗ ಆತ ಸಂಪೂರ್ಣ ಅಸ್ತ ಸ್ಥಿತಿಗೆ ಜಾರಿದ್ದಾನೆ. ಶನಿಯ ಸಂಪೂರ್ಣ ಅಸ್ತ ಕೆಲವು ರಾಶಿಗಳ ಜನರಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ತೊಂದರೆಗಳನ್ನು ನೀಡಲಿದೆ, ಆದರೆ ಇದರಿಂದ ಹೆಚ್ಚು ಕಾಲ ಚಿಂತಿಸಬೇಕಾಗಿಲ್ಲ. ಏಕೆಂದರೆ ಶನಿದೇವನು ಮಾರ್ಚ್ 5, 2023 ರಂದು ಮತ್ತೆ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಮತ್ತೆ ಉತ್ತಮ ಫಲಿತಾಂಶಗಳನ್ನು ದಯಪಾಲಿಸಲಿದ್ದಾನೆ. ಹೆಚ್ಚು ಅದೃಷ್ಟಶಾಲಿ ಮೂರು ರಾಶಿಗಳ ಜನರಿಗೆ ಅಪಾರ ಧನವೃಷ್ಟಿ ಜೊತೆಗೆ ಅದೃಷ್ಟ, ಗೌರವ ಮತ್ತು ಪ್ರತಿಷ್ಠೆಯನ್ನು ಕೂಡ ನೀಡಲಿದ್ದಾನೆ.

ವೃಷಭ ರಾಶಿ- ಶನಿ ದೇವನ ಉದಯ ವೃಷಭ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡಲಿದೆ. ಈ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಹೆಚ್ಚು ಲಾಭವಾಗಲಿದೆ. ಉದ್ಯೋಗಕ್ಕಾಗಿ ಎದುರು ನೋಡುತ್ತಿರುವವರು ಯಶಸ್ಸನ್ನು ಪಡೆಯಲಿದ್ದಾರೆ ಮತ್ತು ವ್ಯಾಪಾರವನ್ನು ಪ್ರಾರಂಭಿಸುವವರಿಗೆ ಸಮಯವು ಮಂಗಳಕರವಾಗಿರುತ್ತದೆ.

ಇದನ್ನೂ ಓದಿ-ನಾಲಿಗೆಯ ಆಕಾರ ಹಾಗೂ ಬಣ್ಣ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಹಾಗೂ ವೃತ್ತಿ ಜೀವನದ ಭವಿಷ್ಯ!

ಸಿಂಹ ರಾಶಿ- ಸಿಂಹ ರಾಶಿಯವರಿಗೆ ಶನಿಯ ಉದಯವು ಲಾಭದಾಯಕವಾಗಿರಲಿದೆ. ಇದರಿಂದ ಕುಂಭ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುವ ನಿರೀಕ್ಷೆ ಇದೆ ಮತ್ತು ಅವರು ಅನೇಕ ರೀತಿಯಲ್ಲಿ ಪ್ರಯೋಜನವನ್ನು ಪಡೆಯಲಿದ್ದಾರೆ. ಶನಿದೇವನ ಆಶೀರ್ವಾದದಿಂದ, ಇವರು ಬಹುನಿರೀಕ್ಷಿತ ಕೆಲ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇವರ ಜೀವನದಲ್ಲಿ ಸಂತೋಷವು ಹರಿದುಬರಲಿದೆ ಮತ್ತು ಈ ರೀತಿಯಲ್ಲಿ ಈ ಸಮಯವು ನಿಮ್ಮ ಪಾಲಿಗೆ ತುಂಬಾ ಒಳ್ಳೆಯ ಸಮಯ ಸಾಬೀತಾಗಲಿದೆ.

ಇದನ್ನೂ ಓದಿ-Valentine's Day 2023: ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನೀಡಿ ಈ ವಿಶಿಷ್ಟ ಉಡುಗೊರೆ

ಕುಂಭ ರಾಶಿ- ಶನಿ ದೇವನ ಉದಯ ಕುಂಭ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಇವರು ತಮ್ಮ ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗಲಿದೆ ಮತ್ತು ಹೊಸ ಉದ್ಯೋಗಾವಕಾಶಗಳು ಕೂಡ ಲಭಿಸಲಿವೆ. ಅಷ್ಟೇ ಅಲ್ಲ ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಕಷ್ಟು ಸುಮಧುರತೆ ಇರಲಿದೆ  ಮತ್ತು ಬಹಳ ಸಮಯದ ನಂತರ ನೀವು ಅವರೊಂದಿಗೆ ಒಳ್ಳೆಯ ಸಮಯವನ್ನು ಕಳೆಯಲು ಸಾಧ್ಯವಾಗಲಿದೆ. ಅವಿವಾಹಿತರ ವಿವಾಹಕ್ಕೆ ಉತ್ತಮ ಸಂಬಂಧಗಳು ಬರುವ ಸಾಧ್ಯತೆ ಇದೆ.

ಇದನ್ನೂ ಓದಿ-Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News