Planet Transit: ಇಂದು ತುಲಾ ರಾಶಿಗೆ ಪ್ರವೇಶಿಸಿದೆ ಈ ಗ್ರಹ, 5 ರಾಶಿಗಳ ಜನರಿಗೆ ಭಾರಿ ಅದೃಷ್ಟ ಒಲಿದು ಬರಲಿದೆ

Budh Gochar 2022: ಬುಧನ ಈ ರಾಶಿ ಗೋಚರ ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಬುಧನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಯ ಜಾತಕದವರಿಗೆ ಲಾಭ ಸಿಗಲಿದೆ ನೋಡೋಣ ಬನ್ನಿ,

Written by - Nitin Tabib | Last Updated : Oct 26, 2022, 05:48 PM IST
  • ಇಂದು ಮಧ್ಯಾಹ್ನ 1 ಗಂಟೆ 47 ನಿಮಿಷಕ್ಕೆ ಬುಧ ತುಲಾ ರಾಶಿಯಲ್ಲಿ ಗೋಚರಿಸಿದ್ದಾನೆ.
  • ನವೆಂಬರ್ 13ರವರೆಗೆ ಬುಧ ತುಲಾ ರಾಶಿಯಲ್ಲಿಯೇ ಇರಲಿದ್ದಾನೆ.
  • ಇದರಿಂದ ಯಾವ ರಾಶಿಯ ಜನರಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ.
Planet Transit: ಇಂದು ತುಲಾ ರಾಶಿಗೆ ಪ್ರವೇಶಿಸಿದೆ ಈ ಗ್ರಹ, 5 ರಾಶಿಗಳ ಜನರಿಗೆ ಭಾರಿ ಅದೃಷ್ಟ ಒಲಿದು ಬರಲಿದೆ title=
Budh Rashi Parivartan 2022 Effects

Budh Rashi Parivartan 2022 Effects: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿ ಬೇರೆ ರಾಶಿಗೆ ಸಾಗಿದಾಗ, ಅದರ ನೇರ ಪ್ರಭಾವ ಮಾನವನ ಜೀವನದ ಮೇಲೆ ಗೋಚರಿಸುತ್ತದೆ. ಬುಧನನ್ನು ವ್ಯಾಪಾರ, ಬುದ್ಧಿ, ಸಂವಾದ ಇತ್ಯಾದಿಗಳ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದೂ ಕೂಡ ಭಾವಿಸಲಾಗಿದೆ. ಇಂದಿನ ಈ ಬುಧ ಗೋಚರ ಯಾವ ರಾಶಿಯ ಜಾತಕದವರಿಗೆ ಲಾಭ ನೀಡಲಿದೆ ತಿಳಿದುಕೊಳ್ಳೋಣ ಬನ್ನಿ,

ಬುಧನ ತುಲಾ ಗೋಚರ
ಇಂದು ಮಧ್ಯಾಹ್ನ 1 ಗಂಟೆ 47 ನಿಮಿಷಕ್ಕೆ ಬುಧ ತುಲಾ ರಾಶಿಯಲ್ಲಿ ಗೋಚರಿಸಿದ್ದಾನೆ. ನವೆಂಬರ್ 13ರವರೆಗೆ ಬುಧ ತುಲಾ ರಾಶಿಯಲ್ಲಿಯೇ ಇರಲಿದ್ದಾನೆ. ಇದರಿಂದ ಯಾವ ರಾಶಿಯ ಜನರಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ- ಬುಧನ ಈ ರಾಶಿ ಪರಿವರ್ತನೆಯ ಸಂಪೂರ್ಣ ಲಾಭ ಮೇಷ ರಾಶಿಯ ಜಾತಕದವರಿಗೆ ಸಿಗಲಿದೆ. ಈ ಅವಧಿಯಲ್ಲಿ ನೀವು ಕೈಗೊಳ್ಳುವ ನಿರ್ಣಯಗಳು ತುಂಬಾ ನಿಖರವಾಗಿರಲಿವೆ ಮತ್ತು ನಿಮಗೆ ಯಶಸ್ಸನ್ನು ಕೂಡ ನೀಡಲಿವೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಲಾಭ ಸಿಗಲಿದೆ. ಪ್ರವಾಸದ ಯೋಗ ನಿರ್ಮಾಣಗೊಳ್ಳುತ್ತಿದೆ. ಧನಲಾಭದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ.

ಮಿಥುನ ರಾಶಿ- ಮಿಥುನ ರಾಶಿಯ ಜಾತಕದವರ ಪಾಲಿಗೆ ಈ ಬುಧಗೋಚರ ಶುಭ ಫಲದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ವೃತ್ತಿ ಜೀವನದಲ್ಲಿ ಬಡ್ತಿ ಪ್ರಾಪ್ತಿಯಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಲಾಭ ಸಿಗಲಿದೆ, ಘನತೆ-ಗೌರವ ಹೆಚ್ಚಾಗಲಿದೆ.

ಕರ್ಕ ರಾಶಿ- ಬುಧನ ಈ ರಾಶಿ ಪರಿವರ್ತನೆ ಕರ್ಕ ಜಾತಕದ ಜನರ ಜೀವನದಲ್ಲಿ ಸಾಕಷ್ಟು ಶಾಂತಿಯನ್ನು ತರಲಿದೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ಆದಾಯ ಹೆಚ್ಚಾಗುವ ಯೋಗ ನಿರ್ಮಾಣಗೊಳ್ಳುತ್ತಿದೆ. ನೌಕರಿ ಮಾಡುವ ಜಾತಕದವರಿಗೆ ಬಡ್ತಿಯ ಅವಕಾಶ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಲಾಭ ಸಿಗಲಿದೆ.

ಸಿಂಹ ರಾಶಿ- ಸಿಂಹ ರಾಶಿಯ ಜಾತಕದವರ ಪಾಲಿಗೆ ಈ ಬುಧನ ಗೋಚರ ವರದಾನಕ್ಕೆ ಸಮನಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಸಂಬಂಧಗಳಲ್ಲಿ ಸುಧಾರಣೆ ಇರಲಿದೆ. ಸಹೋದರ-ಸಹೋದರಿಯರ ಮಧ್ಯೆ ಪ್ರೀತಿ ಹೆಚ್ಚಾಗಲಿದೆ. ಧರ್ಮ-ಕರ್ಮಗಳಲ್ಲಿ ಅಭಿರುಚಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.

ಇದನ್ನೂ ಓದಿ-Chanakya Niti: ಪ್ರತಿ ಹೆಂಡತಿಯೂ ತನ್ನ ಗಂಡನಿಂದ ಈ 5 ವಿಷಯಗಳನ್ನು ಮುಚ್ಚಿಡುತ್ತಾಳೆ.!

ಧನು ರಾಶಿ- ಧನು ರಾಶಿಯ ಜಾತಕದವರಿಗೆ ಬುಧನ ಈ ರಾಶಿ ಪರಿವರ್ತನೆ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಹಣಗಳಿಕೆಯ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ಕುಟುಂಬದಲ್ಲಿ ಸುಖ ಸಮೃದ್ಧಿಯ ವಾತಾವರಣ ಇರಲಿದೆ. ಹಳೆ ಗೆಳೆಯನ ಭೇಟಿ ಸಾಧ್ಯತೆ ಇದೆ.

ಇದನ್ನೂ ಓದಿ-Dream Meaning : ಈ ರೀತಿಯ ಕನಸುಗಳು ವ್ಯಕ್ತಿಯ ನಾಶವನ್ನು ಸೂಚಿಸುತ್ತವೆ, ಜಾಗರೂಕರಾಗಿರಿ.!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News