ಬೆಂಗಳೂರು : 2023ರಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರ ಗ್ರಹಣಗಳು ನಡೆಯುತ್ತಿವೆ. ಇದರಲ್ಲಿ ಮೊದಲ ಗ್ರಹಣವು ಏಪ್ರಿಲ್ 20 ರಂದು ಗುರುವಾರ ಸಂಭವಿಸಲಿದೆ. ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್‌ನಲ್ಲಿ ಸಂಭವಿಸುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸಂಭವಿಸುವ ಸೂರ್ಯಗ್ರಹಣದ ಈ ಖಗೋಳ ವಿದ್ಯಮಾನ ಧರ್ಮ ಮತ್ತು ಜ್ಯೋತಿಷ್ಯದಲ್ಲಿಯೂ ಬಹಳ ಪ್ರಾಮುಖ್ಯತೆ ಪಡೆದಿದೆ. ಗ್ರಹಣ ಕಲಾದಲ್ಲಿ ಸೂತಕ ಸಮಯ ಇರುವುದರಿಂದ ಈ ಹೊತ್ತಿನಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ಸಮಯದಲ್ಲಿ ಸಂಭವಿಸುತ್ತದೆ ನೋಡೋಣ.
ಭಾರತದಲ್ಲಿ ಸೂರ್ಯಗ್ರಹಣದ ದಿನಾಂಕ ಮತ್ತು ಸಮಯ :
2023ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ನಡೆಯಲಿದೆ. ಭಾರತದಲ್ಲಿ, ಈ ಸೂರ್ಯಗ್ರಹಣವು ಬೆಳಿಗ್ಗೆ 7.4 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.29 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತಿದ್ದು, ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Ramadan 2023 Date and time : ರಂಜಾನ್ ವೇಳೆಯ ಸೆಹ್ರಿ ಮತ್ತು ಇಫ್ತಾರ್ ಸಮಯ ಹೀಗಿದೆ..!
ಸೂರ್ಯಗ್ರಹಣವು ಈ ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ :
ಸೂರ್ಯಗ್ರಹಣದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಇರುತ್ತದೆ. ಗ್ರಹಣದ ಅಶುಭ ಪರಿಣಾಮಗಳ ಬಗ್ಗೆ ಹೇಳುವುದಾದರೆ ಈ ಸೂರ್ಯಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಮೇಷ ರಾಶಿಯ ಜನರು ಗ್ರಹಣದ ಸಮಯದಲ್ಲಿ ತಮ್ಮ ವೃತ್ತಿಜೀವನದಲ್ಲಿ ಗೊಂದಲವನ್ನು ಅನುಭವಿಸಬಹುದು. ಟೆನ್ಷನ್ ಇರುತ್ತದೆ. ಇದಲ್ಲದೆ, ಸಿಂಹ ಮತ್ತು ಕನ್ಯಾ ರಾಶಿಯವರು ಕೂಡಾ ತಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ. ಇಲ್ಲವಾದಲ್ಲಿ ಹಾನಿ ಸಂಭವಿಸಬಹುದು.
ಈ ರಾಶಿಯವರ ಮೇಲೆ ಸೂರ್ಯಗ್ರಹಣದ ಮಂಗಳಕರ ಪರಿಣಾಮ :
ಮತ್ತೊಂದೆಡೆ, ವರ್ಷದ ಮೊದಲ ಸೂರ್ಯಗ್ರಹಣವು ವೃಷಭ, ಮಿಥುನ ಮತ್ತು ಧನು ರಾಶಿಯವರಿಗೆ ಮಂಗಳಕರವಾಗಿರಲಿದೆ. ವೃಷಭ ರಾಶಿಯವರಿಗೆ ಹೊಸ ಕೆಲಸ ಸಿಗಬಹುದು. ಸಾಲ ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುವಿರಿ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮತ್ತೊಂದೆಡೆ, ಮಿಥುನ ರಾಶಿಯವರು ಕೆಲವು ದೊಡ್ಡ ಸಮಸ್ಯೆಗಳಿಂದ ಪರಿಹಾರ ಸಿಗಬಹುದು. ಈ ಸೂರ್ಯಗ್ರಹಣವು ಧನು ರಾಶಿಯವರ ಸಂಪತ್ತನ್ನು ಹೆಚ್ಚಿಸುತ್ತದೆ. ಸ್ಥಾನಮಾನ ಮತ್ತು ಪ್ರತಿಷ್ಠೆ ಸಿಗಲಿದೆ. ಆದಾಯ ಹೆಚ್ಚಲಿದೆ.
ಇದನ್ನೂ ಓದಿ : Astro Tips: ಈ 5 ವಸ್ತುಗಳು ಮನೆಯಲ್ಲಿ ಸುಖ-ಸಂತೋಷ, ಶಾಂತಿ ಮತ್ತು ಅಪಾರ ಹಣ ತರುತ್ತವೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.