ವೃತ್ತಿ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಇಂದು ತಪ್ಪದೇ ಈ ವಿಶೇಷ ಕ್ರಮ ಕೈಗೊಳ್ಳಿ

Wednesday Remedies: ಜೀವನದಲ್ಲಿ ಕಷ್ಟ-ಸುಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಕೆಲವೊಮ್ಮೆ ಎಷ್ಟೇ ಪ್ರಯತ್ನ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅದರಲ್ಲೂ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬುಧವಾರದಂದು ಕೆಲವು ಪರಿಹಾರಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ.  

Written by - Yashaswini V | Last Updated : Aug 3, 2022, 10:39 AM IST
  • ಗಣೇಶನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ
  • ಗಣೇಶನನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ
  • ನಿಮ್ಮ ವೃತ್ತಿಜೀವನದಲ್ಲಿ ಏನಾದರೂ ಅಡೆತಡೆಗಳಿದ್ದರೆ ಬುಧವಾರ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಿ
ವೃತ್ತಿ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಇಂದು ತಪ್ಪದೇ ಈ ವಿಶೇಷ ಕ್ರಮ ಕೈಗೊಳ್ಳಿ  title=
Wednesday Remedies

ಬುಧವಾರದ ಪರಿಹಾರಗಳು: ವಾರದ ಪ್ರತಿ ದಿನವೂ ಒಂದು ದೇವರಿಗೆ ಮೀಸಲಿಡಲಾಗಿದೆ. ಅಂತೆಯೇ ಇಂದು ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಸಮರ್ಪಿಸಲಾಗಿದೆ. ಇಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಬಹುದು. ಮಾತ್ರವಲ್ಲ, ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬುಧವಾರದಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗುತ್ತದೆ. 

ಗಣೇಶನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ ಮತ್ತು ಗಣೇಶನನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ನಿಮ್ಮ ವೃತ್ತಿಜೀವನದಲ್ಲಿ ಏನಾದರೂ ಅಡೆತಡೆಗಳಿದ್ದರೆ ಬುಧವಾರ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಕ್ರಮಗಳನ್ನು ಕೈಗೊಳ್ಳುವುದರಿಂದ ವೃತ್ತಿಜೀವನದಲ್ಲಿ ಪ್ರಗತಿಗೆ ದಾರಿ ತೆರೆಯುತ್ತದೆ ಎಂಬ ನಂಬಿಕೆ ಇದೆ.

ಬುಧವಾರದಂದು ಈ ವಸ್ತುಗಳನ್ನು ದಾನ ಮಾಡಿ:
ಅಂದಹಾಗೆ, ದಾನ ಮಾಡುವುದು ಒಂದು ಪುಣ್ಯದ ಕೆಲಸ. ನೀವು ಯಾವಾಗ ಬೇಕಾದರೂ ದಾನ ಮಾಡಬಹುದು. ಆದರೆ ಬುಧವಾರದಂದು ದಾನ ಮಾಡುವುದು ವೃತ್ತಿಜೀವನಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ದಿನ ಹಸಿರು ವಸ್ತುಗಳನ್ನು ದಾನ ಮಾಡಬೇಕು. ಈ ದಿನದಂದು ವಿವಾಹಿತ ಮಹಿಳೆಯರಿಗೆ ಹಸಿರು ಕಾಳು, ಹಸಿರು ಬಣ್ಣದ ಬಟ್ಟೆ ಅಥವಾ ಬಳೆಗಳನ್ನು ದಾನ ಮಾಡುವುದು ತುಂಬಾ ಶ್ರೇಯಸ್ಕರ. ಇದನ್ನು ಮಾಡುವುದರಿಂದ ವೃತ್ತಿಯಲ್ಲಿ ಪ್ರಗತಿ ಕಂಡುಬರುತ್ತದೆ ಮತ್ತು ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ- ಈ ದಿನಗಳಲ್ಲಿ ತಪ್ಪಿಯೂ ತುಳಸಿ ಎಲೆ ಕೀಳಬಾರದು, ನೀರು ಅರ್ಪಿಸಬಾರದು ..!

ಗಣೇಶ ಮಂತ್ರ ಪಠಣ:
ದಾನದ ಹೊರತಾಗಿ, ಬುಧವಾರದಂದು ಗಣೇಶನನ್ನು ನೇಮ-ನಿಷ್ಠೆಯಿಂದ ಪೂಜಿಸಬೇಕು. ಪೂಜೆ ಮಾಡುವಾಗ 'ಓಂ ಗ್ಲೌಂ ಗಣಪತಾಯೈ ನಮಃ' ಎಂಬ ಮಂತ್ರವನ್ನು ಪಠಿಸಿ. ಇದರಿಂದ ಗಣೇಶ ಸಂತಸಗೊಂಡು ನಿಮ್ಮ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂದು ಹೇಳಲಾಗುತ್ತದೆ.

ಪಚ್ಚೆ ಧರಿಸಿ:
ಕೈಯ ಕಿರುಬೆರಳಿನಲ್ಲಿ ಪಚ್ಚೆಯನ್ನು ಧರಿಸುವುದರಿಂದ ಬುಧ ದೋಷವನ್ನು ನಿವಾರಿಸಬಹುದು ಎಂದು ಪರಿಗಣಿಸಲಾಗುತ್ತದೆ. ಆದರೆ ಇದಕ್ಕಾಗಿ ಪಂಡಿತ ಅಥವಾ ಜ್ಯೋತಿಷಿಗಳ ಸಲಹೆಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ- Lucky Gemstone: ಈ ರತ್ನ ಧರಿಸುವುದರಿಂದ ಅದ್ಭುತ ಲಾಭಗಳು ಸಿಗುತ್ತವೆ, ಮಲಗಿರುವ ಭಾಗ್ಯ ಕೂಡ ಬದಲಾಗುತ್ತದೆ

ಜಾತಕದಲ್ಲಿ ಬುಧ ದೋಷವಿದ್ದಾಗಲೂ ವೃತ್ತಿಯಲ್ಲಿ ಅಡಚಣೆಗಳು ಉಂಟಾಗುತ್ತದೆ. ಬುಧ ದೋಷವನ್ನು ತೊಡೆದುಹಾಕಲು, ಬುಧವಾರದಂದು ಚಿನ್ನದ ಆಭರಣಗಳನ್ನು ಧರಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News