ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು .! ಎದುರಿಗಿರುವವರನ್ನು ತಕ್ಷಣ ಆಕರ್ಷಿಸಿ ಬಿಡುತ್ತಾರೆ

ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ರಾಶಿಚಕ್ರ ಚಿಹ್ನೆಗಳ ಗುಣಲಕ್ಷಣಗಳ ಆಧಾರದ ಮೇಲೆ,  ಕೆಲವು ರಾಶಿಯವರು ಹೆಚ್ಚು ರೋಮ್ಯಾಂಟಿಕ್  ಎಂದು ಹೇಳಲಾಗಿದೆ. ಈ ಜನರು ತಮ್ಮ  ಸ್ವಭಾವದಿಂದಾಗಿ ತಮ್ಮ ಸಂಗಾತಿಯ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎನ್ನಲಾಗಿದೆ.  

Written by - Ranjitha R K | Last Updated : Aug 1, 2022, 12:43 PM IST
  • ಕೆಲವು ರಾಶಿಯವರು ಹೆಚ್ಚು ರೋಮ್ಯಾಂಟಿಕ್
  • ತಮ್ಮ ಸಂಗಾತಿಯ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ
  • ಯಾವ ರಾಶಿಯವರು ತುಂಬ ರೊಮ್ಯಾಂಟಿಕ್ ?
ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು .! ಎದುರಿಗಿರುವವರನ್ನು ತಕ್ಷಣ ಆಕರ್ಷಿಸಿ ಬಿಡುತ್ತಾರೆ  title=
Astro tips (file photo)

ಬೆಂಗಳೂರು : ವ್ಯಕ್ತಿ ಹುಟ್ಟಿದ ದಿನ, ಘಳಿಗೆಗೆ ಅನುಗುಣವಾಗಿ ಪ್ರತಿಯೊಬ್ಬನ ರಾಶಿ ನಕ್ಷತ್ರ ನಿಗದಿಯಾಗುತ್ತದೆ. ರಾಶಿ ನಕ್ಷತ್ರದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇರುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ರಾಶಿಚಕ್ರ ಚಿಹ್ನೆಗಳ ಗುಣಲಕ್ಷಣಗಳ ಆಧಾರದ ಮೇಲೆ,  ಕೆಲವು ರಾಶಿಯವರು ಹೆಚ್ಚು ರೋಮ್ಯಾಂಟಿಕ್  ಎಂದು ಹೇಳಲಾಗಿದೆ. ಈ ಜನರು ತಮ್ಮ  ಸ್ವಭಾವದಿಂದಾಗಿ ತಮ್ಮ ಸಂಗಾತಿಯ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಇವರ ಪ್ರೇಮ ಜೀವನ ಸದಾ ಸುಂದರವಾಗಿರುತ್ತದೆಯಂತೆ. 

ಮೇಷ ರಾಶಿ : ಮೇಷ ರಾಶಿಯ ಜನರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಮಾತ್ರವಲ್ಲ, ಪ್ರೀತಿಯನ್ನು ವ್ಯಕ್ತಪಡಿಸಲು ವಿಳಂಬ ಮಾಡುವುದಿಲ್ಲ. ಈ ರಾಶಿಯವರ  ಪ್ರೇಮ ಜೀವನವು ಯಾವಾಗಲೂ ಉತ್ತಮವಾಗಿರುತ್ತದೆ. ಅವರು ತಮ್ಮ ಸಂಗಾತಿಯನ್ನು ಸಂತೋಷಪಡಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. 

ಇದನ್ನೂ ಓದಿ : ಭಕ್ತರು ನೋಡ ನೋಡುತ್ತಿದ್ದಂತೆ ಕಣ್ಮರೆಯಾಗುತ್ತೆ ಈ ಶಿವಮಂದಿರ: ಪುರಾಣದಲ್ಲಿ ಹೇಳಿರೋದೇನು?

ಸಿಂಹ ರಾಶಿ : ಸಿಂಹ ರಾಶಿಯ ಜನರು ಖಡಕ್ ವ್ಯಕ್ತಿತ್ವದವರಾಗಿದ್ದರೂ  ಬಹಳ ರೊಮ್ಯಾಂಟಿಕ್  ಆಗಿರುತ್ತಾರೆ. ಅವರು ಸದಾ ತಮ್ಮ ಸಂಗಾತಿಯನ್ನು ಸಂತೋಷವಾಗಿರಿಸಿಕೊಳ್ಳುತ್ತಾರೆ. ಸಂಗಾತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುತ್ತಾರೆ.  ಈ ರಾಶಿಯವರು ತಮ್ಮ ಗುಣಗಳಿಂದ ಎದುರಿಗಿರುವವರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತಾರೆ. 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ.   ತಮ್ಮ ಸಂಗಾತಿಯೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯುತ್ತಾರೆ. ಈ ರಾಶಿಯವರು ಹೊರಗಿನ ಜಗತ್ತಿಗೆ ಹೇಗೆಯೇ ಇರಲಿ ಆದರೆ ತಮ್ಮ ಸಂಗಾತಿಯ ಪಾಲಿಗಂತೂ ವರದಾನದಂತೆ ಇರುತ್ತಾರೆ. ತಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. 

ಇದನ್ನೂ ಓದಿ : Shani Dev Ashubh Sanket: ನಿಮ್ಮ ಮೇಲೆ ಶನಿ ವಕ್ರದೃಷ್ಟಿ ಬೀರಿದ್ದಾನೆ ಎನ್ನುತ್ತವೆ ಈ 6 ಸಂಕೇತಗಳು, ಈ ಉಪಾಯ ಅನುಸರಿಸಿ

ಧನು ರಾಶಿ : ಪ್ರಣಯದ ವಿಚಾರದಲ್ಲಿ ಧನು ರಾಶಿಯವರು  ಕೂಡಾ ಸದಾ ಮುಂದು.  ಈ ರಾಶಿಯವರ ಕಡೆಗೆ ಜನರು ಸುಲಭವಾಗಿ ಆಕರ್ಷಿತರಾಗುತ್ತಾರೆ. ಈ ರಾಶಿಯವರು ಕೂಡಾ ತಮ್ಮ ಸಂಗಾತಿ ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ. 

 

ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News