Hanuman Ji Favourite Zodiac Sign : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹನುಮಾನ್ ಜಯಂತಿಯ ಹಬ್ಬವನ್ನು ದೇಶದಾದ್ಯಂತ ಏಪ್ರಿಲ್ 6 ರಂದು ಆಚರಿಸಲಾಗುತ್ತದೆ. ಈ ದಿನ ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡ ಪಠಿಸಿದರೆ ಭಜರಂಗಬಲಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಶುಕ್ರ ಗ್ರಹ ತನ್ನ ರಾಶಿಯನ್ನು ಬದಲಿಸಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮತ್ತೊಂದೆಡೆ ಗುರು ಮತ್ತು ಶುಕ್ರರ ಸ್ಥಾನದಿಂದಾಗಿ ಲಕ್ಷ್ಮೀ ಯೋಗವು ರೂಪುಗೊಳ್ಳುತ್ತದೆ. ಈ ಕಾರಣದಿಂದ ಈ ಬಾರಿಯ ಹನುಮ ಜಯಂತಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ಬಾರಿ ಹನುಮ ಜಯಂತಿ ಯಾವ ರಾಶಿಯವರಿಗೆ ಲಾಭದಾಯಕ :
ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಹನುಮ ಜಯಂತಿಯಂದು ಮೇಷ ರಾಶಿಯವರು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಈ ರಾಶಿಯವರ ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಮಂಗಳಕರ ಫಲಿತಾಂಶಗಳು ಸಿಗಲಿವೆ. ಈ ಸಮಯದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕಠಿಣ ಪರಿಶ್ರಮದ ಮೂಲಕ ಧನಾತ್ಮಕ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Money Tips: ಅಕ್ಕಿಯ ಕಾಳಿನ ಈ ಅದ್ಭುತ ಪರಿಹಾರ ಬಡವರನ್ನೂ ಶ್ರೀಮಂತರನ್ನಾಗಿಸುತ್ತದೆ!
ಮಿಥುನ ರಾಶಿ :
ಹನುಮ ಜಯಂತಿಯ ದಿನವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಆಂಜನೇಯನ ಕೃಪೆಯಿಂದ ಮಿಥುನ ರಾಶಿಯವರಿಗೆ ಧನ ಲಾಭವಾಗಲಿದೆ. ವೃತ್ತಿಗೆ ಸಂಬಂಧಿಸಿದ ಜನರು ಉದ್ಯೋಗ ಅಥವಾ ಬಡ್ತಿಗಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಹೊಸ ಉದ್ಯಮ ಆರಂಭಿಸಲಿರುವವರಿಗೂ ಲಾಭವಾಗಲಿದೆ.
ಸಿಂಹ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಆಂಜನೇಯನ ವಿಶೇಷ ಆಶೀರ್ವಾದ ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಸಿಗುವುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಈ ಅವಧಿಯಲ್ಲಿ, ಹೊಸ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಮಾಡುವ ಕೆಲಸಗಳಲ್ಲಿ ಕುಟುಂಬದ ಸಂಪೂರ್ಣ ಬೆಂಬಲ ಸಿಗಲಿದೆ.
ಇದನ್ನೂ ಓದಿ : Astro Tips: ಹಣಕಾಸಿನ ಮುಗ್ಗಟ್ಟು ನಿಮ್ಮನ್ನು ಕಾಡುತ್ತಿದೆಯೇ? ತುಳಸಿ ಎಲೆಯ ಈ ಪರಿಹಾರ ಮಾಡಿ
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರ ಹೊರಗಿರುವ ಹಣವನ್ನು ಹನುಮಂತನ ಕೃಪೆಯಿಂದ ಮರಳಿ ಪಡೆಯುತ್ತಾರೆ. ಈ ರಾಶಿಯ ಜನರು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಇಷ್ಟು ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಕಂಡುಬರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.