Vaishakh Amavasya 2023: ಇಂದು ವೈಶಾಖ ಮಾಸದ ಅಮಾವಾಸ್ಯೆ. ಇಂದು ಬೆಳಿಗ್ಗೆ 11.23 ರಿಂದ ನಾಳೆ ಬೆಳಿಗ್ಗೆ 9.41 ರವರೆಗೆ ವೈಶಾಖ ಅಮಾವಾಸ್ಯೆಯ ತಿಥಿ ಇರುತ್ತದೆ. ಹಿಂದೂ ಧರ್ಮದಲ್ಲಿ ವೈಶಾಖ ಅಮಾವಾಸ್ಯೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಈ ದಿನ ಪೂರ್ವಜನ ಹೆಸರಿನಲ್ಲಿ ಮಾಡುವ ಪೂಜೆಯಿಂದ ಪಿತೃ ದೋಷದಿಂದ ಪರಿಹಾರ ಪಡೆಯಬಹುದು. ಇದಲ್ಲದೆ, ವೈಶಾಖ ಅಮಾವಾಸ್ಯೆಯಲ್ಲಿ ಕೈಗೊಳ್ಳುವ ಪರಿಹಾರಗಳು ಜೀವನದಲ್ಲಿ ಹಲವು ಪ್ರಯೋಜನಗಳನ್ನು ತರುತ್ತದೆ ಎಂದು ನಂಬಿಕೆ ಇದೆ.
ಈ ದಿನ ಸಣ್ಣ ಪರಿಹಾರದಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ ಎಂದು ತಿಳಿಯಿರಿ...
* ಅಪಾರ ಸಂಪತ್ತಿನ ಒಡೆಯರು:
ಧರ್ಮಗ್ರಂಥಗಳ ಪ್ರಕಾರ, ವೈಶಾಖ ಅಮಾವಾಸ್ಯೆಯ ದಿನ ತೆಂಗಿನ ಕಾಯಿಯನ್ನು ತೆಗೆದುಕೊಂಡು ಶಿವನ ಮೂರ್ತಿಗೆ ನಿವಾಳಿಸಿ ಈಡುಗಾಯಿ ಒಡೆಯಿರಿ. ಇದರಿಂದ ಅಪಾರ ಸಂಪತ್ತಿನ ಒಡೆಯರಾಗಬಹುದು ಎಂಬ ನಂಬಿಕೆ ಇದೆ.
* ಇಷ್ಟಾರ್ಥ ಸಿದ್ಧಿಗಾಗಿ ಹೀಗೆ ಮಾಡಿ:
ನಿಮ್ಮ ದೀರ್ಘಕಾಲದ ಮನೋಕಾಮನೆಗಳ ಈಡೇರಿಕೆಗಾಗಿ, ಇಷ್ಟಾರ್ಥ ಸಿದ್ಧಿಗಾಗಿ ನಿಮ್ಮ ಮನೆಯ ಹೆಣ್ಣು ದೇವರ ಹೆಸರಿನಲ್ಲಿ ತೆಂಗಿನ ಕಾಯಿಯನ್ನು ಒಡೆಯಿರಿ. ಇದನ್ನು 42 ತುಂಡುಗಳಾಗಿ ಕತ್ತರಿಸಿ. ಇದರಲ್ಲಿ 3 ತುಂಡುಗಳನ್ನು ಭಗವಾನ್ ಶಿವಾನಿಗೆ, 9 ತುಂಡುಗಳನ್ನು ಕನ್ಯೆಯರಿಗೆ, 2 ತುಂಡುಗಳನ್ನು ಟೈಲರ್ಗೆ, 3 ತೋಟಗಾರನಿಗೆ, 2 ಕುಂಬಾರನಿಗೆ ಪ್ರಸಾದವಾಗಿ ನೀಡಿ. ಇನ್ನುಳಿದ 24 ತುಂಡುಗಳಲ್ಲಿ ನಿಮಗಾಗಿ 4 ಮತ್ತು ಉಳಿದ 20 ತುಂಡುಗಳನ್ನು ದೇವಸ್ಥಾನದಲ್ಲಿ ಪ್ರಸಾದವಾಗಿ ವಿತರಿಸಿ.
ಇದನ್ನೂ ಓದಿ- ಸೂರ್ಯ ಗ್ರಹಣದ ಅಶುಭ ಫಲಗಳನ್ನು ತಪ್ಪಿಸಲು ಗ್ರಹಣ ಮುಗಿಯುತ್ತಿದ್ದಂತೆ ತಪ್ಪದೇ ಮಾಡಿ ಈ ಕೆಲಸ
* ಕಪ್ಪು ನಾಯಿಗೆ ಆಹಾರ:
ವೈಶಾಖ ಅಮಾವಾಸ್ಯೆಯ ದಿನ ಕಪ್ಪು ನಾಯಿಗೆ ಆಹಾರ ನೀಡಿ. ಇದರಿಂದ ಶನಿಯ ವಕ್ರ ದೃಷ್ಟಿಯಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
* ಸಾಸಿವೆ ಪರಿಹಾರ:
ವೈಶಾಖ ಅಮಾವಾಸ್ಯೆಯ ದಿನ ಮಧ್ಯರಾತ್ರಿ ಮನೆಯ ತಾರಸಿ ಮೇಲೆ ಹೋಗಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಪ್ರದಕ್ಷಿಣೆ ಹಾಕಿ ಸಾಸಿವೆಯನ್ನು ಎಲ್ಲಾ ದಿಕ್ಕುಗಳಲ್ಲಿ ಎಸೆಯಿರಿ. ಇದರಿಂದ ಸಾಲಬಾಧೆಯಿಂದ ಪರಿಹಾರ ಪಡೆಯಬಹುದು.
* ಉತ್ತಮ ಆರೋಗ್ಯಕ್ಕೆ ಪರಿಹಾರ:
ಉತ್ತಮ ಆರೋಗ್ಯಕ್ಕಾಗಿ ಇಂದು ವ್ಯಕ್ತಿ ತಾನು ಧರಿಸಿರುವ ಬಟ್ಟೆಯ ಒಂದು ಎಳೆ ದಾರವನ್ನು ತೆಗೆದು, ಅದನ್ನು ಹತ್ತಿಯೊಂದಿಗೆ ಒಸೆದು ಬತ್ತಿ ತಯಾರಿಸಿ. ಒಂದು ಮಣ್ಣಿನ ದೀಪದಲ್ಲಿ ಈ ಬತ್ತಿಯನ್ನು ಹಾಕಿ ಸಾಸಿವೆ ಎಣ್ಣೆಯನ್ನು ಬೆರೆಸಿ ಸಂಜೆ ದೇವಾಲಯದಲ್ಲಿ ಈ ದೀಪವನ್ನು ಬೆಳಗಿಸಿ.
ಇದನ್ನೂ ಓದಿ- ಇಂದು ವರ್ಷದ ಮೊದಲ ಸೂರ್ಯ ಗ್ರಹಣದಂದು 5 ಶುಭ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಬಂಪರ್ ಲಾಭ
* ಉದ್ಯೋಗ ಪ್ರಾಪ್ತಿಗಾಗಿ ಪರಿಹಾರ:
ವೈಶಾಖ ಅಮಾವಾಸ್ಯೆಯ ಈ ದಿನ ಸಂಜೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ. ನಾಲ್ಕು ದಿಕ್ಕುಗಳು ಸಂಧಿಸುವ ರಸ್ತೆಯ ಮಧ್ಯೆ ನಿಂತು ಮೌನವಾಗಿ ಈ ತುಂಡುಗಳನ್ನು ನಾಲ್ಕು ದಿಕ್ಕುಗಳ ಕಡೆ ಎಸೆಯಿರಿ. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.