Shukra Gochar 2022: ಶುಕ್ರ ಸಂಚಾರದಿಂದ 'ಮಾಲವ್ಯ ಯೋಗ', ಈ ರಾಶಿಯವರಿಗೆ ತುಂಬಾ ಶುಭ

Shukra Gochar 2022: ಅಕ್ಟೋಬರ್ 18 ರ ರಾತ್ರಿ 9.30 ಗಂಟೆಗೆ ಶುಕ್ರ ಗ್ರಹವು ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಿದೆ. ಶುಕ್ರನ ಸಂಚಾರದಿಂದ ಮಾಲವ್ಯ ಯೋಗವು ರೂಪುಗೊಳ್ಳುತ್ತಿದೆ, ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.

Written by - Yashaswini V | Last Updated : Oct 21, 2022, 07:10 AM IST
  • ಶುಕ್ರ ಸಂಚಾರದಿಂದ ಕೆಲವು ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲೂ ಅದೃಷ್ಟದ ಬೆಂಬಲ ಸಿಗುವುದರಿಂದ ಯಶಸ್ಸು ಸಿಗಲಿದೆ.
  • ಶುಕ್ರ ಸಂಕ್ರಮವು ಕೆಲವು ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸಲಿದೆ.
  • ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಅನಿರೀಕ್ಷಿತ ಹಣದ ಲಾಭವಾಗಬಹುದು.
Shukra Gochar 2022: ಶುಕ್ರ ಸಂಚಾರದಿಂದ 'ಮಾಲವ್ಯ ಯೋಗ', ಈ ರಾಶಿಯವರಿಗೆ ತುಂಬಾ ಶುಭ  title=
Shukra Gochar 2022

Shukra Gochar 2022: ಸಂಪತ್ತು, ಸಂತೋಷ, ವೈಭವ, ಐಷಾರಾಮಿ ಜೀವನ ಕಾರಕನಾದ ಶುಕ್ರನು ಅಕ್ಟೋಬರ್ 18 ರ ರಾತ್ರಿ 9.38 ಕ್ಕೆ ತನ್ನ ರಾಶಿಯನ್ನು ಬದಲಿಸಿ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ನವೆಂಬರ್ 11, 2022 ರವರೆಗೆ ಶುಕ್ರ ಗ್ರಹ ತುಲಾ ರಾಶಿಯಲ್ಲಿಯೇ ನೆಲೆಸಲಿದೆ.  ನಂತರ ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೆಶಿಸಲಿದ್ದಾನೆ.  ಅಂತಹ ಪರಿಸ್ಥಿತಿಯಲ್ಲಿ, ಯಾರ ಜನ್ಮ ಕುಂಡಲಿಯಲ್ಲಿ ಶುಕ್ರನು ಕೇಂದ್ರ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆಯೋ ಅವರೆಲ್ಲರಿಗೂ ಮಾಲವ್ಯ ಯೋಗವು ರೂಪುಗೊಳ್ಳುತ್ತದೆ. ಶುಕ್ರ ಸಂಚಾರದಿಂದ ಸೃಷ್ಟಿಯಾಗಿರುವ 'ಮಾಲವ್ಯ ಯೋಗ'ವು ಯಾರಿಗೆ ಅದೃಷ್ಟವನ್ನು ತರಲಿದೆ ಎಂದು ತಿಳಿಯೋಣ...

ಶುಕ್ರನ ಸಂಚಾರದಿಂದ 'ಮಾಲವ್ಯ ಯೋಗ': ಈ ರಾಶಿಯವರಿಗೆ ಶುಭ :
ವೃಷಭ ರಾಶಿ:
 ಶುಕ್ರನ ಸಂಚಾರದಿಂದ ಸೃಷ್ಟಿಯಾಗಿರುವ ಮಾಲವ್ಯ ಯೋಗದಿಂದ ನಿಮ್ಮ ರಹಸ್ಯ ಶತ್ರುಗಳ ನಾಶವಾಗಲಿದೆ. ನ್ಯಾಯಾಲಯದ ಯಾವುದೇ ಪ್ರಕರಣವು ನಿಮ್ಮ ಪರವಾಗಿ ಫಲಿತಾಂಶವನ್ನು ನೀಡುತ್ತದೆ. ಪ್ರವಾಸಕ್ಕೆ ಹೋಗಬಹುದು. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಕನಸು ನನಸಾಗಲಿದೆ. ಹೃದಯ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಇರಬಹುದು. ಹಾಗಾಗಿ ಆರೋಗ್ಯದ ಬಗ್ಗೆ ನಿಗಾವಹಿಸಿ.

ಕನ್ಯಾ ರಾಶಿ: ಶುಕ್ರ ಸಂಕ್ರಮಣವು ಕನ್ಯಾ ರಾಶಿಯವರಿಗೆ ಆರ್ಥಿಕ ಬಲವನ್ನು ನೀಡುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ವ್ಯಾಪಾರಿಗಳು ವ್ಯಾಪಾರದಲ್ಲಿ ದೊಡ್ಡ ಲಾಭವನ್ನು ಗಳಿಸಬಹುದು. ನೀವು ಮನೆ-ಕಾರು ಅಥವಾ ಸೌಕರ್ಯಗಳಿಗೆ ಸಂಬಂಧಿಸಿದ ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಜೀವನ ಸಂಗಾತಿ ಚೆನ್ನಾಗಿರುತ್ತಾರೆ. ಪ್ರೀತಿಯ ಜೀವನವೂ ಚೆನ್ನಾಗಿರುತ್ತದೆ. ಪ್ರವಾಸಕ್ಕೆ ಹೋಗಬಹುದು. 

ಇದನ್ನೂ ಓದಿ-  Solar Eclipse 2022: ಈ ರಾಶಿಯವರಿಗೆ ಬಂಪರ್ ಲಾಭ ನೀಡಲಿದೆ ಸೂರ್ಯಗ್ರಹಣ

ತುಲಾ ರಾಶಿ: ಶುಕ್ರ ರಾಶಿ ಪರಿವರ್ತನೆಯಿಂದ ಈ ಸಮಯದಲ್ಲಿ ನಿಮ್ಮ ಬಹು ನಿರೀಕ್ಷಿತ ಕೆಲಸ ಪೂರ್ಣಗೊಳ್ಳಲಿದೆ. ಹೊಸ ಉದ್ಯೋಗ ದೊರೆಯಲಿದೆ. ನೀವು ಬಡ್ತಿ, ಗೌರವ, ಹಣ ಪಡೆಯುತ್ತೀರಿ. ಮದುವೆ ನಿಶ್ಚಯವಾಗಬಹುದು. ನೀವು ಹೊಸ ಒಪ್ಪಂದಕ್ಕೆ ಸಹಿ ಹಾಕಬಹುದು. ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಲು ಪ್ರಯತ್ನಿಸಿ. 

ಮಕರ ರಾಶಿ: ಶುಕ್ರನ ರಾಶಿ ಬದಲಾವಣೆಯು ಮಕರ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಬಲವಾದ ಅವಕಾಶಗಳಿವೆ. ಹೊಸ ವ್ಯಾಪಾರ ಆರಂಭಿಸಬಹುದು. ಬಡ್ತಿ ಪಡೆಯಬಹುದು. ಹಣವು ಪ್ರಯೋಜನಕಾರಿಯಾಗಲಿದೆ. ಹೆಚ್ಚಿದ ಆದಾಯವು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.  ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಇದನ್ನೂ ಓದಿ-  Budh Gochar: ದೀಪಾವಳಿ ನಂತರ ಈ ರಾಶಿಯವರಿಗೆ ನಷ್ಟ

ಕುಂಭ ರಾಶಿ: ಶುಕ್ರ ಸಂಕ್ರಮವು ಕುಂಭ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳು ಶುಭ ಫಲಿತಾಂಶಗಳನ್ನು ಪಡೆಯಲಿವೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಅನಿರೀಕ್ಷಿತ ಹಣದ ಲಾಭವಾಗಬಹುದು. ಉದ್ಯೋಗ-ವ್ಯವಹಾರದಲ್ಲಿ ಲಾಭವಿರುತ್ತದೆ ಮತ್ತು ಗೌರವವೂ ಹೆಚ್ಚಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಲಾಭ ದೊರೆಯಲಿದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News