ಸಂಕ್ರಮಣದ ಮೂಲಕ ಐದು ರಾಶಿಯವರ ಅದೃಷ್ಟ ಬೆಳಗುವ ಶುಕ್ರ ಮೂರು ರಾಶಿಯವರನ್ನು ಅತಿಯಾಗಿ ಕಾಡುತ್ತಾನೆ

ಜನ್ಮ ಜಾತಕದಲ್ಲಿ ಶುಕ್ರಣ ಸ್ಥಾನ ಉತ್ತಮವಾಗಿದ್ದರೆ ಅವರ ಭವಿಷ್ಯ ಕೂಡಾ ಪ್ರಕಾಶಮಾನವಾಗಿ ಬೆಳಗುತ್ತದೆ. ಶುಕ್ರ ದೆಸೆ ನಡೆಯುತ್ತಿದ್ದರೆ ಆ ವ್ಯಕ್ತಿ ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ವ್ಯಕ್ತಿಯ  ಜಾತಕದಲ್ಲಿ ಶುಕ್ರ ದೆಸೆ ನಡೆಯುತ್ತಿರುವಾಗಲೇ ಒಳ್ಳೆಯ ಕೆಲಸಗಳನ್ನು ಮಾಡುವಂತ ಸೂಚಿಸಲಾಗುತ್ತದೆ.  

Written by - Ranjitha R K | Last Updated : Dec 6, 2022, 05:12 PM IST
  • ಶುಕ್ರನನ್ನು ಅಸುರರ ಗುರು ಎಂದು ಹೇಳಲಾಗುತ್ತದೆ.
  • ಅಸುರ ಗುರುವಾಗಿದ್ದರೂ ಶುಕ್ರ ಮಂಗಳಕರ ಗ್ರಹ
  • ಡಿಸೆಂಬರ್ 29 ರವರೆಗೆ ಧನು ರಾಶಿಯಲ್ಲಿ ಇರಲಿದ್ದಾನೆ
ಸಂಕ್ರಮಣದ ಮೂಲಕ ಐದು ರಾಶಿಯವರ ಅದೃಷ್ಟ ಬೆಳಗುವ ಶುಕ್ರ ಮೂರು ರಾಶಿಯವರನ್ನು ಅತಿಯಾಗಿ ಕಾಡುತ್ತಾನೆ  title=
Venus Transit effect

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಅಸುರರ ಗುರು ಎಂದು ಹೇಳಲಾಗುತ್ತದೆ. ಅಸುರ ಗುರುವಾಗಿದ್ದರೂ ಶುಕ್ರನನ್ನು ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ಅದೃಷ್ಟ, ಸಂತೋಷ, ಸೌಂದರ್ಯ, ಸಂಪತ್ತಿನ ಅಧಿಪತಿಯಾಗಿರುವ  ಶುಕ್ರ  ನಿನ್ನೆ ಸಂಜೆ  5. 56 ಕ್ಕೆ ತನ್ನ ರಾಶಿಯನ್ನು ಬದಲಿಸಿದ್ದಾನೆ. ರಾಶಿ ಬದಲಿಸಿರುವ ಶುಕ್ರ ಇನ್ನು ಡಿಸೆಂಬರ್ 29 ರವರೆಗೆ ಧನು ರಾಶಿಯಲ್ಲಿ ಇರಲಿದ್ದಾನೆ. ಧನು ರಾಶಿಯಲ್ಲಿ ಶುಕ್ರನ ಸಂಕ್ರಮಣವಾಗಿರುವುದು ಜ್ಯೋತಿಷ್ಯದ ಪ್ರಕಾರ ಪ್ರಾಮುಖ್ಯತೆ ಹೊಂದಿದೆ. 

ಶುಕ್ರ ಗ್ರಹದ ಪ್ರಾಮುಖ್ಯತೆ : 
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ, ಕಾವ್ಯ, ಸೌಂದರ್ಯ, ಕಲೆ ಮತ್ತು ಸೃಜನಶೀಲತೆಯ ಗ್ರಹವೆಂದು ಪರಿಗಣಿಸಲಾಗುತ್ತದೆ.  ಶುಕ್ರ  ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಪ್ರತಿಯೊಬ್ಬ ವ್ಯಕ್ತಿಯ ಜಾತಕದ ಮೇಲೆ ಶುಕ್ರನ ಪ್ರಭಾವ ಅಧಿಕವಾಗಿರುತ್ತದೆ. ಜನ್ಮ ಜಾತಕದಲ್ಲಿ ಶುಕ್ರಣ ಸ್ಥಾನ ಉತ್ತಮವಾಗಿದ್ದರೆ ಅವರ ಭವಿಷ್ಯ ಕೂಡಾ ಪ್ರಕಾಶಮಾನವಾಗಿ ಬೆಳಗುತ್ತದೆ. ಶುಕ್ರ ದೆಸೆ ನಡೆಯುತ್ತಿದ್ದರೆ ಆ ವ್ಯಕ್ತಿ ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ವ್ಯಕ್ತಿಯ  ಜಾತಕದಲ್ಲಿ ಶುಕ್ರ ದೆಸೆ ನಡೆಯುತ್ತಿರುವಾಗಲೇ ಒಳ್ಳೆಯ ಕೆಲಸಗಳನ್ನು ಮಾಡುವಂತ ಸೂಚಿಸಲಾಗುತ್ತದೆ.  

ಇದನ್ನೂ ಓದಿ : Chanakya Niti: ಈ ನಾಲ್ಕು ನೀತಿಗಳನ್ನು ಅನುಸರಿಸಿದರೆ ಬೆಟ್ಟದಂತಹ ಸಮಸ್ಯೆಯೂ ಮಂಜಿನಂತೆ ಕರಗುತ್ತೆ

ಶುಕ್ರ ಸಂಕ್ರಮಣದಿಂದ ಈ ರಾಶಿಯವರಿಗೆ ಲಾಭ : 
ಮೇಷ ರಾಶಿ :
ಮೇಷ ರಾಶಿಯವರಿಗೆ ಶುಕ್ರ ಸಂಚಾರವು ತುಂಬಾ ಅನುಕೂಲಕರವಾಗಿರುತ್ತದೆ . ಶುಕ್ರನ ಈ ನಡೆ ಅವರ ಅದೃಷ್ಟವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. 

ಸಿಂಹ ರಾಶಿ :
ಶುಕ್ರ ಸಂಚಾರವು ಸಿಂಹ ರಾಶಿಯವರ ಪಾಲಿಗೂ ಅದೃಷ್ಟವನ್ನೇ ನೀಡಲಿದೆ. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.  ವಿದ್ಯಾರ್ಥಿಗಳು ತಾವು ಮಾಡುವ ಕೆಲಸಕ್ಕೆ ಮೆಚ್ಚುಗೆ ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿರಲಿದೆ. 

ಕನ್ಯಾರಾಶಿ:
ಕನ್ಯಾ ರಾಶಿಯವರು ಶುಕ್ರ ಸಂಚಾರದ ಸಮಯದಲ್ಲಿ ಮನೆಗೆ ಐಷಾರಾಮಿ ವಸ್ತುಗಳನ್ನು ತರುವ ಸಲುವಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಸಮಯವನ್ನು  ಉತ್ತಮ ರೀತಿಯಲ್ಲಿ ಆನಂದಿಸುವ ಭಾಗ್ಯ ಸಿಗುವುದು. ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಸಿಕ್ಕಿ, ಸಂತೋಷ ನೆಮ್ಮದಿ ಹೆಚ್ಚಾಗುವುದು.  

ಇದನ್ನೂ ಓದಿ : Vastu Plant: ಮನೆಯ ಸರಿಯಾದ ದಿಕ್ಕಿನಲ್ಲಿ ಈ ಚಿಕ್ಕ ಗಿಡ ನೆಟ್ಟರೆ ಹಣದ ಸುರಿಮಳೆಯಾಗಲಿದೆ!

ಧನು ರಾಶಿ:
ಈ  ಸಮಯದಲ್ಲಿ ಧನು ರಾಶಿಯವರು ಯಾವುದೇ ಹೊಸ ಕಾರ್ಯ  ಆರಂಭಿಸಬೇಕು ಎಂದುಕೊಂಡರೆ ಅದರಲ್ಲಿ ಯಶಸ್ಸು ಕಾಣುತ್ತಾರೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ಖಂಡಿತಾ. ಜನರು ಈ ರಾಶಿಯವರ ವ್ಯಕ್ತಿತ್ವದತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಶುಕ್ರನ ಸಂಚಾರದಿಂದಾಗಿ  ಅನೇಕ ಹೊಸ ಸೌಕರ್ಯಗಳನ್ನು ಅನುಭವಿಸುವಿರಿ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ಶುಕ್ರ ಸಂಕ್ರಮಣದಿಂದ ಲಾಭವಾಗಲಿದೆ. ಶುಕ್ರ ಸಂಕ್ರಮಣದ ಸಮಯದಲ್ಲಿ, ಸಂತೋಷಗಳು ಹೆಚ್ಚಾಗುತ್ತವೆ.  ಆಸೆಗಳು ಈಡೇರುತ್ತವೆ. ದಾಂಪತ್ಯ ಜೀವನದಲ್ಲೂ ಸಂತೋಷ ಇರುತ್ತದೆ. ಪ್ರೇಮ ಜೀವನ ಸುಖಮಯವಾಗಿರುತ್ತದೆ. 

ಶುಕ್ರನ ಸಂಕ್ರಮಣದಿಂದ ಈ ರಾಶಿಯವರು ಎಚ್ಚರಿಕೆಯಿಂದಿರಬೇಕು :  
ಕಟಕ ರಾಶಿ : 
ಕರ್ಕಾಟಕ ರಾಶಿಯವರು ತಾಯಿಯ ಆರೋಗ್ಯದ ಕಡೆ ಗಮನ ಹರಿಸಬೇಕು. ತಾಯಿಯ ಆರೋಗ್ಯ ಸಮಸ್ಯೆಯಿಂದ ನೆಮ್ಮದಿ ಹಾಳಾಗಬಹುದು. ಪ್ರೇಮ ಜೀವನದಲ್ಲಿ ನಿರಾಶೆ ಉಂಟಾಗಬಹುದು. ದಂಪತಿಗಳು ಬೇರೆಯಾಗುವ ಸಾಧ್ಯತೆಗಳೂ ಇವೆ. 

ಇದನ್ನೂ ಓದಿ : ಇನ್ನು ಹತ್ತು ದಿನಗಳ ನಂತರ ತಪ್ಪಿಯೂ ಈ ಕೆಲಸ ಮಾಡಬೇಡಿ.! ಎದುರಾಗುವುದು ನಷ್ಟ

ತುಲಾ ರಾಶಿ :
ಈ ಸಮಯದಲ್ಲಿ, ತುಲಾ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೂ ಬರವಣಿಗೆ, ಸಂವಹನ, ಸಾಹಿತ್ಯ ಮತ್ತು ಲಲಿತಕಲೆಗಳಂತಹ ಕ್ಷೇತ್ರಗಳಲ್ಲಿರುವವರು ಉತ್ತಮ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಯಾವುದೇ ಕೆಲಸ ಮಾಡುವಾಗ ತಾಳ್ಮೆ ಕಳೆದುಕೊಳ್ಳದಿರುವುದು ಸೂಕ್ತ. ಕೋಪಗೊಂಡರೆ ಕೆಲಸ ಕೆಡಬಹುದು.

ಮಕರ ರಾಶಿ :
ಶುಕ್ರ ಸಂಕ್ರಮಣದ ಪರಿಣಾಮ ಮಕರ ರಾಶಿಯವರ ಮೇಲೆ ಕೂಡಾ ಬೀರುವುದು. ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಅನಗತ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಎಲ್ಲರೊಂದಿಗೆ ಸಾಮರಸ್ಯದಿಂದ ಇರುವುದು ಒಳ್ಳೆಯದು. ಇಲ್ಲವಾದರೆ ಅನಾಹುತ ಸಂಭವಿಸುವುದರಲ್ಲಿ ಅನುಮಾನವಿಲ್ಲ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News