Weekly Horoscope: ಈ ವಾರ ಎರಡು ರಾಶಿಯವರಿಗೆ ಲಕ್ಷ್ಮಿ ಕೃಪಾಕಟಾಕ್ಷ

Weekly Horoscope From November 20th to November 26th: ಈ ವಾರಾ ದ್ವಿತೀಯಾರ್ಧದಲ್ಲಿ ಕೆಲವು ಶುಭ ಕಾರ್ಯಗಳನ್ನು ಮಾಡಲು ತುಂಬಾ ಪ್ರಾಶಸ್ತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಈ ವಾರ ಯಾವ ರಾಶಿಯವರ ಫಲ ಹೇಗಿದೆ ಎಂದು ತಿಳಿಯಿರಿ. 

Written by - Yashaswini V | Last Updated : Nov 20, 2023, 06:56 AM IST
  • ಮೇಷ ರಾಶಿಯವರಿಗೆ ಈ ವಾರ ಮಣ್ಣಿಡಿದರೂ ಚಿನ್ನವಾಗುವ ಸಮಯ
  • ಕರ್ಕಾಟಕ ರಾಶಿಯವರು ಸೋಮವಾರದಂದು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಬಿಲ್ವಾರ್ಚನೆ ಮಾಡಿಸುವುದರಿಂದ ಶುಭ
  • ಕನ್ಯಾ ರಾಶಿಯವರೇ ತಾಳಿದವನು ಬಾಳಿಯಾನು ಎಂಬುದನ್ನು ನೆನಪಿನಲ್ಲಿಡಿ.
Weekly Horoscope: ಈ ವಾರ ಎರಡು ರಾಶಿಯವರಿಗೆ ಲಕ್ಷ್ಮಿ ಕೃಪಾಕಟಾಕ್ಷ  title=

Weekly Horoscope in  Kannada From November 20th to November 26th: ಇಂದು ಈ ವರ್ಷದ ಮೊದಲ ಕಾರ್ತಿಕ ಸೋಮವಾರ. ಈ ವಾರ ಉತ್ಥಾನ ದ್ವಾದಶಿ ಎಂದರೆ ತುಳಸಿ ಹಬ್ಬದ ಆಚರಣೆಯೂ ಇರಲಿದೆ. ಈ ವಾರದ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯೋಣ... 
 
ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರಿಗೆ ಈಗ ಧನಾತ್ಮಕ ಸಮಯ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ, ನಮ್ಮ ರೈತರಿಗೆ ಅತ್ಯುತ್ತಮ ಸಮಯ. ನೀವು ಉನ್ನತ ವಿದ್ಯಾಭ್ಯಾಸಕ್ಕಾಗಿ ಇಲ್ಲವೇ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ವಾರ ಒಳ್ಳೆಯ ಅವಕಾಶಗಳು ಲಭ್ಯವಾಗಲಿವೆ. ಆದಾಗ್ಯೂ, ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಈ ಕುರಿತಂತೆ ನಿಮ್ಮ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದರೆ ಉತ್ತಮ. ನಿದ್ರೆಯ ಕಡೆ ಸರಿಯಾಗಿ ಗಮನಕೊಡಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರಿಗೆ ಈ ವಾರ ಗ್ರಹಗಳು ನಿಮ್ಮ ಪರವಾಗಿ ಇರುವುದಿಲ್ಲ. ಇದು ನಿಮ್ಮ ನಿರ್ಧಾರಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಹಿರಿಯರು, ಸಹೋದರರೊಂದಿಗೆ ಚರ್ಚಿಸಿ ನಿರ್ಧರಿಸಿ. ಇದಲ್ಲದೆ, ನಿಮ್ಮ ಆರೋಗ್ಯ ಸ್ಥಿತಿಯೂ ಅಷ್ಟು ಉತ್ತಮವಾಗಿರುವುದಿಲ್ಲ. ಆದರೆ, ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಕೆಲಸದ ವಿಷಯದಲ್ಲಿ ಆಲಸ್ಯವನ್ನು ತಪ್ಪಿಸಿ. ನಿಮ್ಮ ಗುರಿಯ ಮೇಲೆ ಗಮನ ಕೇಂದ್ರೀಕರಿಸಿ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ಬೇರೆಯವರ ತಪ್ಪಿಗೆ ನೀವು ದಂಡಕಟ್ಟಬೇಕಾಗಬಹುದು. ವ್ಯಾಪಾರಸ್ಥರು, ಉದ್ಯಮಿಗಳಿಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳಾಗಬಹುದು. ಆದರೆ, ಕಷ್ಟವಾದರೂ ಪರಿಶ್ರಮಕ್ಕೆ ಫಲ ದೊರೆಯುತ್ತದೆ. ನಿಮ್ಮ ಪಿತೃ ಸಮಾನರ ಆರೋಗ್ಯದ ಬಗ್ಗೆ ನಿಗಾವಹಿಸಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವೂ ಇದೆ. ಯಾವಾಗಲೂ ಸಮಯ ಒಂದೇ ರೀತಿ ಇರುವುದಿಲ್ಲ, ಇದನ್ನರಿತು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಿರಿ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರು ಈ ವಾರ ಬಿಸಿನೆಸ್ ನಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು. ಆದರೂ, ಹಿಂಜರಿಯಬೇಡಿ. ನಿಮ್ಮ ಗುರಿಗಳತ್ತ ಮಾತ್ರ ಲಕ್ಷವಿಡಿ, ಪ್ರಯತ್ನವನ್ನು ಮುಂದುವರೆಸಿದರೆ ಭವಿಷ್ಯದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ. ಈ ಸಮಯದಲ್ಲಿ ನಿಮ್ಮ ನಿಜವಾದ ಸ್ನೇಹಿತರು ಯಾರೆಂದು ನಿಮಗೆ ತಿಳಿಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಒಳ್ಳೆಯದಾಗಲಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. 

ಇದನ್ನೂ ಓದಿ- Shani Gochar 2024: ಶನಿ ಸಂಚಾರದಲ್ಲಿ ಬದಲಾವಣೆಯಿಂದ 5 ರಾಶಿಯವರ ಜೀವನದಲ್ಲಿ ಭಾಗ್ಯೋದಯ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ಈ ವಾರ ಸ್ವಲ್ಪ ಕೌಟುಂಬಿಕ ಘರ್ಷಣೆ ನಿಮ್ಮನ್ನು ಬಾಧಿಸಬಹುದು. ಹಣ, ಅಧಿಕಾರ ಗಳಿಸುವುದರ ಜೊತೆಗೆ ಅರಿವು ಮೂಡಿಸಿಕೊಳ್ಳುವುದು ಕೂಡ ಅತ್ಯಗತ್ಯ. ನೀವು ಏನೇ ಕೆಲಸ ಮಾಡಿದರೂ ಕೂಡ ನಿಮ್ಮ ಕುಟುಂಬ ಮೆಚ್ಚುವ ರೀತಿ ಇರಿ. ನೀವಾಗಿಯೇ ಬದಲಾಗದಿದ್ದರೆ, ಶನಿ ದೇವನೇ ನಿಮ್ಮನ್ನು ಬದಲಾಯಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಿದ್ದರೂ ನಾನು, ನನ್ನದು ಎಂಬುದನ್ನು ಬಿಟ್ಟು ನಿಮ್ಮೊಂದಿಗಿರುವವರ ಬಗ್ಗೆಯೂ ಒಳ್ಳೆಯ ಭಾವನೆ ರೂಢಿಸಿಕೊಳ್ಳಿ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರೇ ತಾಳಿದವನು ಬಾಳಿಯಾನು ಎಂಬುದನ್ನು ನೆನಪಿನಲ್ಲಿಡಿ. ತಾಳ್ಮೆಯಿಂದ ಇರುವುದನ್ನು ಕಲಿಯಿರಿ. ಸಮಯ ಒಂದೇ ರೀತಿ ಇರುವುದಿಲ್ಲ. ನಿಮಗೆ ತೊಂದರೆ ಕೊಡುವವರನ್ನು ನಿರ್ಲಕ್ಷಿಸಿ. ನಿಮ್ಮ ಕೆಲಸವನ್ನು ಮುಂದುವರೆಸಿ. ಸಮಯ ಬಂದಾಗ ನಿಮಗೆ ಏನು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಅಷ್ಟೇ ಅಲ್ಲ, ನ್ಯಾಯ ಸಮ್ಮತವಾಗಿ ನಿಮಗೆ ಏನು ಸಿಗಬೇಕೋ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೇ ತಿಂಗಳಲ್ಲಿ ನಿಮ್ಮ ಅದೃಷ್ಟವೇ ಬದಲಾಗಲಿದೆ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರೇ ಸಾತ್ವಿಕವಾದ ಹಟ ಇದ್ದರೆ ಮಾತ್ರವೇ ಎಲ್ಲವೂ ನಿಮ್ಮ ಹಿಡಿತದಲ್ಲಿರುತ್ತದೆ. ಇಲ್ಲವೇ, ನಿಮ್ಮವರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಇದು ನಿಮಗೆ ಮಾನಸಿಕ ಕಿರುಕುಳವನ್ನು ನೀಡಬಹುದು. ಯೋಗ, ಧ್ಯಾನದತ್ತ ಗಮನವಹಿಸಿ. ದೈಹಿಕ ಆರೋಗ್ಯದ ದೃಷ್ಟಿಯಿಂದ ವ್ಯಾಯಾಮವನ್ನು ಮಾಡಿ. ಸಾಧ್ಯವಾದಷ್ಟು ನೀವು ಏನೇ ಮಾತನಾಡಬೇಕಾದರೂ ಬಹಳ ಯೋಚಿಸಿ ಮಾತನಾಡಿ. ಇಲ್ಲದಿದ್ದರೆ, ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೋವುಂಟಾಗಬಹುದು. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರಿಗೆ ರಕ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ. ನೀವು ನಿಮ್ಮ ತಂಡದ ಕಡೆ ಗಮನಹರಿಸಿ, ಇಲ್ಲವೇ ನೀವು ಮೋಸಹೋಗಬಹುದು. ಮನಸ್ಸು ಚಂಚಲವಾಗಿ ಲೌಕಿಕ ವಿಚಾರಗಳ ಕಡೆ ನಿಮ್ಮ ಗಮನ ಹೆಚ್ಚು ಹರಿಯಬಹುದು. ಆದರೆ, ಜಪ-ತಪದಲ್ಲಿ ತೊಡಗುವುದರಿಂದ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ನಿವಾರಿಸಬಹುದು. ಇಲ್ಲವೇ, ಇದು ನಿಮ್ಮ ಮನಸ್ಸಿನ ಶಾಂತಿಯನ್ನು ಹಾಳುಮಾಡಬಹುದು. 

ಇದನ್ನೂ ಓದಿ- 2025ರವೆರೆಗೆ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಮಳೆ ! ಇದುವರೆಗಿನ ಎಲ್ಲಾ ಕಷ್ಟಗಳಿಗೆ ಮುಕ್ತಿ ! ಇನ್ನು ನೆಮ್ಮದಿಯ ಬದುಕು

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯ ಉದ್ಯಮಿಗಳು ಈ ವಾರ ಉತ್ತಮ ಲಾಭವನ್ನು ಗಳಿಸಬಹುದು. ಧನು ರಾಶಿಯವರಲ್ಲಿ ಹೆಚ್ಚಿನವರು ತುಂಬಾ ನಂಬಿಕಸ್ಥರಾಗಿರುತ್ತಾರೆ. ಹಾಗಾಗಿ ನೀವು ಒಳ್ಳೆಯ ಮಾರ್ಗದರ್ಶಕರೂ ಹೌದು. ನಿಮ್ಮಿಂದ ಬೇರೆಯವರು ಒಳ್ಳೆಯ ದಾರಿಯನ್ನು ಕಂಡುಕೊಳ್ಳಬಹುದು. ಆದಾಗ್ಯೂ, ಉದ್ಯೋಗಸ್ಥರು ಬೆಂಕಿ, ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. ಇಲ್ಲವೇ, ಅಪಘಾತಗಳ ಸಂಭವವಿರುತ್ತದೆ. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರಿಗೆ ಈ ವಾರ ಜ್ಞಾನಕ್ಕಿಂತ ಅನುಭವ ತುಂಬಾ ಅಗತ್ಯ. ನಿಮ್ಮ ಬಹುದೊಡ್ಡ ಸಮಸ್ಯೆ ಎಂದರೆ ಕಮ್ಯೂನಿಕೇಶನ್. ಜೊತೆಗೆ ನಿಮ್ಮ ನಕಾರಾತ್ಮಕ ಆಲೋಚನೆಗಳಿಂದಲೇ ನೀವು ಹೆಚ್ಚು ಸಮಸ್ಯೆಯನ್ನು ಅನುಭವಿಸುವಿರಿ. ಈ ವಾರ ನೀವು ಔಷಧೀಯ ಸಸ್ಯಗಳನ್ನು ದಾನ ಮಾಡುವುದರಿಂದ ಶುಭ ಫಲವನ್ನು ನಿರೀಕ್ಷಿಸಬಹುದು. ಇದರೊಂದಿಗೆ ಹಿರಿಯರು, ವಯಸ್ಸಾದವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.  ಇದರಿಂದ ಶನಿಯ ಪ್ರಭಾವ ಕಡಿಮೆ ಆಗಲಿದೆ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರಿಗೆ ಈ ವಾರ ನಿಮ್ಮ ಸಮಸ್ಯೆಗಳು ಹಂತ-ಹಂತವಾಗಿ ಬಗೆಹರಿಯಲಿವೆ. ಇದಲ್ಲದೆ, ಮನೆ, ಉದ್ಯೋಗ ಸೇರಿದಂತೆ ನಿಮ್ಮ ಜೀವನದಲ್ಲಿ ಕೆಲವು ಮಹತ್ವದ ಬದಲಾವಣೆ ಸಾಧ್ಯತೆ ಇದೆ. ಎಲ್ಲದಕ್ಕೂ ತಲೆ ಹಾಕದೆ ನಿಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ ದೂರ ಉಳಿಯಲು ಪ್ರಯತ್ನಿಸಿ. ಇಲ್ಲದಿದ್ದರೆ, ಗೌರವಕ್ಕೆ ಧಕ್ಕೆ ಆಗಲಿದೆ. ಭವಿಷ್ಯದಲ್ಲಿ ಅವಕಾಶಕ್ಕಾಗಿ ಕಾಯಿರಿ, ಶೀಘ್ರದಲ್ಲೇ ನಿಮ್ಮ ಅದೃಷ್ಟ ಬದಲಾಗಲಿದೆ. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಹೊಸ ಉದ್ಯಮಕ್ಕೆ ಕಾಲಿಡಲು ಉತ್ತಮ ಸಮಯ. ನೀವು ಕೊಡುವುದನ್ನು ಕಲಿತರೆ ಮುಂದೆ ಪಡೆಯುವುದನ್ನು ಕಲಿಯಬಹುದು. ಓಡಾಡುವಾಗ ಎಚ್ಚರಿಕೆ, ಇಲ್ಲವೇ, ಕೈ-ಕಾಲುಗಳಿಗೆ ತೊಂದರೆಯಾಗಬಹುದು. ಈ ವಾರ ಸಾಧ್ಯವಾದಷ್ಟು ನಾಗದೇವರಿಗೆ ಪೂಜೆ ಮಾಡಿ, ನಾಗ ಶಾಂತಿಯನ್ನು ಮಾಡಿಕೊಳ್ಳುವುದರಿಂದ ಶುಭವಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News