Weekly Horoscope: ಈ ರಾಶಿಯವರು ನಿಮ್ಮ ಬಜೆಟ್‌ನಲ್ಲಿ ಏರುಪೇರಾಗದಂತೆ ನಿಗಾವಹಿಸಿ

Weekly Horoscope From December 04th to December 10th: ಈ ವಾರದ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರು ಎಚ್ಚರಿಕೆಯ ಹೆಜ್ಜೆಗಳಿಡುವುದು ಅವಶ್ಯಕ ಎಂದು ತಿಳಿಯಿರಿ.   

Written by - Yashaswini V | Last Updated : Dec 4, 2023, 06:34 AM IST
  • ವೃಷಭ ರಾಶಿಯವರು ಈ ವಾರ ಯಾವುದೇ ವಿಷಯದ ಬಗ್ಗೆ ಯೋಚಿಸಿ ನಿರ್ಧರಿಸಿ.
  • ಧನು ರಾಶಿಯವರು ಅಪಾಯವನ್ನು ತೆಗೆದುಕೊಳ್ಳುವ ಬದಲು ನೀವು ಯಾವುದೇ ವಿಚಾರದಲ್ಲಿ ಪರೀಕ್ಷಿಸಿ ಮುಂದುವರೆಯಿರಿ.
  • ಮೀನ ರಾಶಿಯವರು ಮನಃ ಶಾಂತಿಗಾಗಿ ಕೆಲ ಸಮಯವನ್ನು ಏಕಾಂಗಿಯಾಗಿ ಕಳೆಯಲು ಪ್ರಯತ್ನಿಸಿ.
Weekly Horoscope: ಈ ರಾಶಿಯವರು ನಿಮ್ಮ ಬಜೆಟ್‌ನಲ್ಲಿ ಏರುಪೇರಾಗದಂತೆ ನಿಗಾವಹಿಸಿ title=

Weekly Horoscope in Kannada From December 04th to December 10th: 2023ರ ಕೊನೆಯ ತಿಂಗಳಿಗೆ ನಾವು ಕಾಲಿಟ್ಟಿದ್ದೇವೆ. ಡಿಸೆಂಬರ್ ತಿಂಗಳ ಮೊದಲ ವಾರ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಹೇಗಿದೆ ತಿಳಿಯಿರಿ. 
 
ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರು ಈ ವಾರ ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗಗಳತ್ತ ಗಮನಹರಿಸಿ. ದೀರ್ಘಾವಧಿಯಲ್ಲಿ ಲಾಭದಾಯಕವಾಗಿರುವ ಹೊಸ ಯೋಜನೆಗಳಲ್ಲಿ ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. ಮನೆಗೆ ಬದಲಾಯಿಸಲು ಯೋಜಿಸುತ್ತಿರುವವರು ಎಲ್ಲಾ ವಿಷಯವನ್ನು ಸರಳವಾಗಿ ಮರುಸಂಘಟಿಸುವುದರತ್ತ ಗಮನಹರಿಸಿ. ಹಠಾತ್ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು, ಎಚ್ಚರಿಕೆಯಿಂದ ಇರಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರು ಈ ವಾರ ಯಾವುದೇ ವಿಷಯದ ಬಗ್ಗೆ ಯೋಚಿಸಿ ನಿರ್ಧರಿಸಿ. ವಿಷಯ ಯಾವುದೇ ಇರಲಿ ಒಂದು ಆ ವಿಚಾರವನ್ನು ಕೈಬಿಡಿ, ಒಂದಿಮ್ಮೆ ನೀವು ಆ ವಿಷಯಕ್ಕೆ ಅಂಟಿಕೊಳ್ಳಲು ಬಯಸಿದರೆ ಬೇರೆಯವರು ಆಡುವ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಸಂಬಂಧದಲ್ಲಿ ಯಾವುದೇ ವಿಚಾರದಲ್ಲಿ ಒಂದೇ ಕಡೆಯಿಂದ ಮಾತ್ರ ಪ್ರೀತಿ-ಕಾಳಜಿ ಇದ್ದಾಗ ಅಂತಹ ಸಂಬಂಧಗಳಿಂದ ದೂರ ಸರಿಯಬೇಕು ಎಂದೆನಿಸುವುದು ಸರ್ವೇ ಸಾಮಾನ್ಯ. ಈ ಬಗ್ಗೆ ನಿಮ್ಮ ಮನೆಯ ಹಿರಿಯರ ಜೊತೆಗೆ ಮುಕ್ತವಾಗಿ ಚರ್ಚಿಸಿ. ಆದರೆ, ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಿ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರೇ ಈ ವಾರ ಬಹುತೇಕ ವಿಷಯಗಳಲ್ಲಿ ಸವಾಲಿನ ಸಮಯವನ್ನು ಎದುರಿಸಬೇಕಾಗಬಹುದು. ಆದರೆ, ಯಾವುದೇ ಕಾರಣಕ್ಕೂ ಹಠಾತ್ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇದು ನಿಮ್ಮ ಮನೆಯ ಶಾಂತಿಗೆ ಮಾರಕವಾಗಬಹುದು. ಈ ಹಂತದಲ್ಲಿ ನಿಮ್ಮ ಕೌಶಲ್ಯವನ್ನು ನೀವು ಪರಿಗಣಿಸಬಹುದು.  ನಿಮ್ಮ ಹಾದಿಯಲ್ಲಿ ನಿಮಗೆ ಸಹಾಯ ಮಾಡಲು ನಿಮ್ಮ ಆಪ್ತರು ಖಂಡಿತವಾಗಿಯೂ ನಿಮ್ಮ ಮಾರ್ಗದರ್ಶಿಯಾಗಿ ಬೆನ್ನಿಗಿರುತ್ತಾರೆ. ಹಣಕಾಸು ವಿಷಯಕ್ಕೆ ಸಂಬಂಧಿಸಿದ್ಸಂತೆ ಈ ವಾರ ಸ್ವಲ್ಪ ಸಮಯ ಅಷ್ಟು ಉತ್ತಮವಾಗಿಲ್ಲ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೆ ಈ ವಾರ ನಿಮ್ಮ ಹಳೆಯ ದಿನಗಳು, ಹಿಂದಿನ ಸಿಹಿಯಾದ ನೆನಪುಗಳು ಮನಸ್ಸಿಗೆ ಆನಂದವನ್ನು ತರಲಿವೆ. ದಂಪತಿಗಳಿಗೆ ಮಕ್ಕಳಿಂದ ಆನಂದ. ಹಳೆಯ ಸ್ನೇಹಿತರೊಂದಿಗೆ ಅದ್ಭುತ ಪುನರ್ಮಿಲನವನ್ನು ಆನಂದಿಸಬಹುದು. ಸೃಜನಾತ್ಮಕ ಯೋಜನೆಯು ಬಹಳಷ್ಟು ಉತ್ಸಾಹ ಮತ್ತು ನಗುವನ್ನು ತರುತ್ತದೆ.  ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಗಮನ ಮತ್ತು ಫಲಿತಾಂಶಗಳಿಗಾಗಿ ಇದು ಉತ್ತಮ ಹಂತವಾಗಿದೆ. 

ಇದನ್ನೂ ಓದಿ- Shani Nakshatra Parivartan: 2024ರಲ್ಲಿ ಶನಿ ನಕ್ಷತ್ರ ಪರಿವರ್ತನೆಯಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರು ಹಿಂದೆ ಏನಾಯಿತು ಎಂಬುದನ್ನು ಅತಿಯಾಗಿ ಚಿಂತಿಸುವುದರಿಂದ ಫಲವಿಲ್ಲ, ತಪ್ಪಿಗೆ ಪಶ್ಚಾತ್ತಾಪ ಒಳ್ಳೆಯದೇ. ಆದರೆ, ಅದರಲ್ಲೇ ಮುಳುಗದೆ, ನಿಮ್ಮ ಕಠಿಣ ಸಮಯದಲ್ಲಿ ಕಲಿತ ಪಾಠದಿಂದ ಮುಂದುವರೆಯಿರಿ. ನಿಮ್ಮ ಮನಸ್ಸಿಗೆ ಹತ್ತಿರವಾದವರೊಂದಿಗೆ ಮನಸ್ಸಿನ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಿ. ವೃತ್ತಿಪರವಾಗಿ, ಈ ವಾರ ಉತ್ತಮವಾಗಿದ್ದು ನಿಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸೂಕ್ತ ಸಮಯವಾಗಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಯಾವುದೇ ವಿಚಾರವೂ ನೀವು ನೋಡುವುದಕ್ಕಿಂತ ಭಿನ್ನವಾಗಿರಬಹುದು. ಹಾಗಾಗಿ, ಮೇಲ್ನೋಟಕ್ಕೆ ಕಾಣುವುದನ್ನು ನಂಬಡೆ ಅದರ ಒಳಾರ್ಥ ತಿಳಿಯಲು ಪ್ರಯತ್ನಿಸಿ. ಕೆಲಸದ ಮುಂಭಾಗದಲ್ಲಿ ತಾತ್ಕಾಲಿಕ ವಿಳಂಬಗಳು ನೈತಿಕತೆಯನ್ನು ತಗ್ಗಿಸಬಹುದು. ಇದನ್ನು ತಪ್ಪಿಸಿ, ತಂಡವನ್ನು ಪ್ರೇರೇಪಿಸುವಂತೆ ನೀವು ಕೆಲಸ ಮಾಡಿ. ಇದರಿಂದ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರು ಸರಿ ತಪ್ಪುಗಳ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡಿ. ನಿಮ್ಮ ಬಜೆಟ್‌ನಲ್ಲಿ ಏರುಪೇರಾಗದಂತೆ ನಿಗಾವಹಿಸಿ. ಹಿಂದಿನ ವೈಫಲ್ಯಗಳಿಂದ ಕಲಿಯಿರಿ ಮತ್ತು ನಿಮ್ಮ ಒಳಗೆ ಮತ್ತು ಸುತ್ತಮುತ್ತ ಏನನ್ನು ಬದಲಾಯಿಸಬೇಕಾಗಿದೆ ಎಂಬುದನ್ನು ಮನಗಂಡು ಮುಂದುವರೆಯಿರಿ. ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿರುವ ನೀವು ಸ್ವಲ್ಪ ಬದಲಾವಣೆಗಳನ್ನು ತಂದರೂ ಸಹ ವೈಯಕ್ತಿಕ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರೇ ನೀವು ಏನು ಮಾಡಬೇಕು ಎಂಬ ಬಗ್ಗೆ ಗೊಂದಲದಲ್ಲಿರುವುದನ್ನು ತಪ್ಪಿಸಿ. ನಿಮ್ಮ ಮನಸ್ಸಿನ ಮಾತನ್ನು ಆಲಿಸಿ ಮುಂದುವರೆದರೆ ಶುಭ ಫಲ ಸಿಗಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ನಿಮ್ಮ ಆಪ್ತರಿಂದ ಸಲಹೆ ಸೂಚನೆಗಳನ್ನು ಪಡೆಯಿರಿ. ಆರೋಗ್ಯದ ಬಗ್ಗೆಯೂ ನಿರ್ಲಕ್ಷವಹಿಸದೆ ವೈದ್ಯರ ಸಲಹೆಯಂತೆ ಮುಂದುವರೆಯಿರಿ. ಧ್ಯಾನ ಮತ್ತು ಆಧ್ಯಾತ್ಮಿಕತೆಯು ಆಳವಾದ ಶಾಂತಿಯನ್ನು ತರುತ್ತದೆ. 

ಇದನ್ನೂ ಓದಿ- Graha Dosh: ನಿಮ್ಮ ಆರೋಗ್ಯಕ್ಕೂ ನವಗ್ರಹಗಳಿಗೂ ಇದೆ ಸಂಬಂಧ! ಆರೋಗ್ಯಕ್ಕಾಗಿ ಗ್ರಹ ದೋಷ ಪರಿಹಾರ

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರು ಅಪಾಯವನ್ನು ತೆಗೆದುಕೊಳ್ಳುವ ಬದಲು ನೀವು ಯಾವುದೇ ವಿಚಾರದಲ್ಲಿ ಪರೀಕ್ಷಿಸಿ ಮುಂದುವರೆಯಿರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅದರ ಸಾಧಕ-ಬಾಧಕಗಳನ್ನು ಆಲೋಚಿಸಿ ಮುಂದಿನ ಹೆಜ್ಜೆ ಇಡಿ. ಉದ್ಯೋಗ ರಂಗದಲ್ಲಿ ಬೇಸರದ ವಾತಾವರಣವಿದ್ದರೂ ಸಹ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಖಂಡಿತ ಪಡೆಯುವಿರಿ. ಹಣದ ವಿಷಯಗಳು ಸ್ಥಿರವಾದ ಪ್ರಗತಿಯನ್ನು ಕಾಣಲಿವೆ.  

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರಿಗೆ ಈ ವಾರ ಮನೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡಗಳು ಹೆಚ್ಚಾಗಬಹುದು. ಇದರಿಂದಾಗಿ ಏಕಾಗ್ರತೆಯ ಕೊರತೆ ಉಂಟಾಗಬಹುದಾದರೂ, ನಿಮ್ಮ ಶಕ್ತಿ ಚದುರಲು ಬಿಡದೆ ನಿಧಾನವಾಗಿ ನಿಮ್ಮ ಗಮನವನ್ನು ಮರಳಿ ತನ್ನಿ. ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನಿಮ್ಮ ಕೋಪ ಉಲ್ಬಣಗೊಳ್ಳಬಹುದು.  ಆದರೂ, ಕೋಪವನ್ನು ನಿಯಂತ್ರಿಸಿ, ಶಾಂತತೆಯಿಂದ ಇರಲು ಪ್ರಯತ್ನಿಸಿ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರು ನಿಮ್ಮ ಜೀವನದ ಹಿಂದಿನ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡಿ ನೀವು ಜೀವನದಲ್ಲಿ ಏನು ಸಾಧಿಸಿದ್ದೀರಿ ಎಂಬುದನ್ನು ಕಂಡುಕೊಳ್ಳುತ್ತೀರಿ. ಸಮಾಜದಲ್ಲಿ ಇಂದು ನೀವು ಏನು ಗಳಿಸಿದ್ದೀರೋ ಅದು ನಿಮ್ಮ ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಪಡೆದಿರುವ ಫಲ. ಆದಾಗ್ಯೂ, ನಿಮಗೆ ಯಾವುದೇ ಸಂತೋಷ ಅಥವಾ ಶಾಂತಿಯನ್ನು ತರದ ಸ್ನೇಹ- ಸಂಪರ್ಕಗಳಿಂದ ದೂರ ಉಳಿದರೆ ಒಳಿತು. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರು ಮನಃ ಶಾಂತಿಗಾಗಿ ಕೆಲ ಸಮಯವನ್ನು ಏಕಾಂಗಿಯಾಗಿ ಕಳೆಯಲು ಪ್ರಯತ್ನಿಸಿ. ಭವಿಷ್ಯದ ಗುರಿಗಳ ಬಗ್ಗೆ ನಿರ್ಧರಿಸಲು ನಿಮ್ಮ ಅಮೂಲ್ಯವಾದ ಸಮಯವನ್ನು ಬಳಸಿ. ಅದು ವೃತ್ತಿ ಯೋಜನೆಯಾಗಿರಲಿ ಅಥವಾ ನಿಮ್ಮ ಸಂಬಂಧವಾಗಿರಲಿ ಬುದ್ದಿವಂತಿಕೆಯಿಂದ ಮುಂದುವರೆಯಿರಿ. ಕಾನೂನಾತ್ಮಕ ವಿಚಾರಗಳಲ್ಲಿ ನ್ಯಾಯಾಲದ ತೀರ್ಪು ನಿಮ್ಮ ಪರವಾಗಿರಲಿದ್ದು ಸ್ಥಿರಾಸ್ತಿಗೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿವೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News