IND vs AUS 1st Test, Todd Murphy Performance: ಭಾರತ ತಂಡದ ಒಬ್ಬರಲ್ಲ, ಮೂವರು ಸ್ಟಾರ್ ಬ್ಯಾಟ್ಸ್ ಮನ್ ಗಳು ಈ 22ರ ಹರೆಯದ ಆಟಗಾರನಿಗೆ ಶರಣಾಗಿದ್ದಾರೆ. ಇದು ಖಂಡಿತಾ ಆಶ್ಚರ್ಯಕರ ಸಂಗತಿಯಾದರೂ ಸತ್ಯ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಆಫ್ ಸ್ಪಿನ್ನರ್ ಟಾಡ್ ಮರ್ಫಿ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಕೆಎಲ್ ರಾಹುಲ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದ್ದಾರೆ.
ಇದನ್ನೂ ಓದಿ: Ravindra Jadeja Records: ಮೋಸಗಾರ ಎಂದಿದ್ದ ಆಸೀಸ್ ಮಾಧ್ಯಮಕ್ಕೆ ಬ್ಯಾಟ್ ನಿಂದಲೇ ಚಚ್ಚಿ, ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಸೇರಿದಂತೆ 5 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಯುವ ಆಫ್ ಸ್ಪಿನ್ನರ್ ಟಾಡ್ ಮರ್ಫಿ, “ಭಾರತದ ವಿರುದ್ಧದ ಈ ಸಾಧನೆಯನ್ನು ಜೀವನ ಪರ್ಯಂತ ಸ್ಮರಿಸುತ್ತೇನೆ. ಅದರ ಬಗ್ಗೆ ಹೆಮ್ಮೆಯೂ ಆಗುತ್ತದೆ” ಎಂದು ಹೇಳಿದ್ದಾರೆ. ಮರ್ಫಿ ಇದುವರೆಗೆ 36 ಓವರ್‌ಗಳಲ್ಲಿ 82 ರನ್ ನೀಡಿ ಐದು ವಿಕೆಟ್ ಉರುಳಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ನಂತರ ಅವರು ಮಾತನಾಡಿದರು.
ಮರ್ಫಿ ಭಾರತೀಯ ಬ್ಯಾಟಿಂಗ್‌ನ ಅಭಿಮಾನಿ:
'ಕಳೆದ ಎರಡು ದಿನಗಳು ಬಹಳ ವಿಶೇಷವಾದವು ಮತ್ತು ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್ ಗಳಿಕೆಯೊಂದಿಗೆ ಅಗ್ರಸ್ಥಾನವನ್ನು ತಲುಪಿರುವುದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು. ಇದು ನನ್ನ ಜೀವನದುದ್ದಕ್ಕೂ ನಾನು ಹೆಮ್ಮೆಪಡುವ ವಿಷಯ” ಎಂದರು. ಇದೇ ಸಂದರ್ಭದಲ್ಲಿ ಸ್ಪಿನ್ನರ್‌ಗಳ ವಿರುದ್ಧ ತಮ್ಮ ಕೈಗಳನ್ನು ಬಳಸುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಮರ್ಥ್ಯವನ್ನು ಮರ್ಫಿ ಶ್ಲಾಘಿಸಿದರು. “ನಾನು ವಿಶ್ವದಾದ್ಯಂತ ಅನೇಕ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡಿಲ್ಲ. ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಕೈಗಳನ್ನು ಚೆನ್ನಾಗಿ ಬಳಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: Rishab Pant Health: ರಿಷಬ್ ಪಂತ್ ಹೇಗಿದ್ದಾರೆ? ಅವರ ಆರೋಗ್ಯದ ಬಗ್ಗೆ ಪಕ್ಕಾ ಮಾಹಿತಿ ನೀಡುತ್ತದೆ ಈ ಒಂದು ಫೋಟೋ
ಈ ಆಫ್-ಸ್ಪಿನ್ ಬೌಲರ್ ಮಧ್ಯಮ ವೇಗಿಯಾಗಿ ಪ್ರಾರಂಭಿಸಿದರು. ಭಾರತದ ಬ್ಯಾಟ್ಸ್‌ಮನ್‌ಗಳ ಮುಂದೆ ಆಡುವುದು ನಿಜಕ್ಕೂ ಕಷ್ಟ. ನಿಜ ಹೇಳಬೇಕೆಂದರೆ, ನನ್ನ ಮಧ್ಯಮ ವೇಗದ ಬೌಲಿಂಗ್ ಉತ್ತಮವಾಗಿಲ್ಲ, ಆದ್ದರಿಂದ ನಾನು ನೆಟ್ಸ್‌ನಲ್ಲಿ ಆಫ್-ಸ್ಪಿನ್ ಬೌಲಿಂಗ್‌ನೊಂದಿಗೆ ಅಭ್ಯಾಸ ಮಾಡುತ್ತಿದ್ದೆ. ಇದರ ಬಗ್ಗೆ ನನಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಎಲ್ಲವೂ ಅಲ್ಲಿಂದ ಪ್ರಾರಂಭವಾಯಿತು. ನಾನು ಈ ಬಗ್ಗೆ ಹೆಚ್ಚು ಶ್ರಮಿಸಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ