KKR WINS IPL: ಗಂಭೀರ್ ಗುರುವಾದರೂ.. ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಮಾಸ್ಟರ್‌ಮೈಂಡ್ ಈ ಆಟಗಾರ !

IPL WINNER KKR: ಕೆಕೆಆರ್‌ ಐಪಿಎಲ್‌ 2024 ಟ್ರೋಪಿ ಗೆದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ಅನ್ನು 8 ವಿಕೆಟ್‌ಗಳಿಂದ ಕೆಕೆಆರ್‌ ಸೋಲಿಸಿತು. 

Written by - Chetana Devarmani | Last Updated : May 27, 2024, 09:29 AM IST
  • ಐಪಿಎಲ್‌ 2024 ಟ್ರೋಪಿ ಗೆದ್ದ ಕೆಕೆಆರ್‌
  • ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ ಕಾರಣ
  • ಶಾರುಖ್ ಖಾನ್‌ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್
KKR WINS IPL: ಗಂಭೀರ್ ಗುರುವಾದರೂ.. ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಮಾಸ್ಟರ್‌ಮೈಂಡ್ ಈ ಆಟಗಾರ !  title=

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್‌ ಆಗಿದೆ. ಹೊಸ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್‌ ಐಪಿಎಲ್‌ 2024 ಟ್ರೋಪಿ ಗೆದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ಅನ್ನು 8 ವಿಕೆಟ್‌ಗಳಿಂದ ಕೆಕೆಆರ್‌ ಸೋಲಿಸಿತು. 113 ರನ್‌ಗಳಿಗೆ ಆಲೌಟ್ ಆದ  ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ಇದು ತಂಡದ ಮೂರನೇ ಐಪಿಎಲ್ ಟ್ರೋಫಿಯಾಗಿದೆ.  

ಟೂರ್ನಿಯುದ್ದಕ್ಕೂ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೂಲಕ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು. ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಫೈನಲ್‌ಗೆ ತಮ್ಮ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿತು. ನಂತರ ಅದೇ ತಂಡವನ್ನು ಫೈನಲ್‌ನಲ್ಲೂ ಸೋಲಿಸುವ ಮೂಲಕ ತಮ್ಮ ಮೂರನೇ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ SRH

ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು  ಕೆಕೆಆರ್‌ ಬೌಲಿಂಗ್‌ ಬಿರುಗಾಳಿಯ ಮಧ್ಯೆ ಕೇವಲ 113 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಇದಾದ ಬಳಿಕ  ಕೆಕೆಆರ್‌ ಸ್ಟಾರ್‌ ಬ್ಯಾಟರ್ ವೆಂಕಟೇಶ್ ಅಯ್ಯರ್ ಬಿರುಸಿನ ಅರ್ಧಶತಕ ಗಳಿಸಿ 11 ಓವರ್ ಪೂರ್ಣಗೊಳ್ಳುವ ಮೊದಲೇ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು.

ಇಂದು ನಮ್ಮ ತಂಡ ದಾಖಲಿಸಿರುವ ಗೆಲುವಿನ ಹಿಂದೆ ಇವರೊಬ್ಬರ ಪಾತ್ರವಿದೆ. ನಾವೆಲ್ಲರೂ ಇಂದು ಈ ಟ್ರೋಫಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಅದರ ಹಿಂದೆ ಅಭಿಷೇಕ್ ನಾಯರ್ ಅವರ ಶ್ರಮ ಅಡಗಿದೆ ಎಂದು ವೆಂಕಟೇಶ್ ಅಯ್ಯರ್ ಹೇಳಿದರು. 

ನಮ್ಮ ತಂಡದ ಬ್ಯಾಟಿಂಗ್ ಬಲಗೊಳ್ಳಲು ಹಾಗೂ ಎಲ್ಲರಿಗೂ ಆತ್ಮವಿಶ್ವಾಸ ತುಂಬುವಲ್ಲಿ ಅಭಿಷೇಕ್ ನಾಯರ್ ಅವರ ಪಾತ್ರ ಬಹುದೊಡ್ಡದು ಎಂದರು. 

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ರೋಚಕತೆಯೊಂದಿಗೆ ಮೋಡಿ ಮಾಡಿದ 4 ಫೈನಲ್ ಪಂದ್ಯಗಳು...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News