Abhishek Sharma Fastest Fifty: ಐಪಿಎಲ್ 2024ರ 8ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದೆ. ಅಂದಹಾಗೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ, ಫೀಲ್ಡಿಂಗ್ ಆಯ್ದುಕೊಂಡಿದೆ.
ಇದನ್ನೂ ಓದಿ: ಇದು ಅನ್ನವೋ…? ಚಿನ್ನವೋ…? ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ 1 ಕೆಜಿಗೆ ಎಷ್ಟು ಗೊತ್ತಾ? ತಿಳಿದರೆ ಹೌಹಾರೋದು ಗ್ಯಾರಂಟಿ
ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಮುಂಬೈ ಮೇಲೆ ಪ್ರಾಬಲ್ಯ ಸಾಧಿಸುತ್ತಿದ್ದು ಕಂಡುಬಂತು. ಅಷ್ಟೇ ಅಲ್ಲದೆ, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಋತುವಿನ ವೇಗದ ಅರ್ಧಶತಕ ಕೂಡ ಕಲೆ ಹಾಕಿದರು. ಆದರೆ ದಾಖಲೆ ಬರೆದ ಕೆಲವೇ ನಿಮಿಷಗಳಲ್ಲಿ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಹೆಡ್ ಅವರ ಆ ದಾಖಲೆಯನ್ನು ಮುರಿದಿದ್ದಾರೆ.
ಅಭಿಷೇಕ್ ಭರ್ಜರಿ ಬ್ಯಾಟಿಂಗ್:
ಇಲ್ಲಿಯವರೆಗೆ, ಐಪಿಎಲ್ 2024 ರಲ್ಲಿ ವೇಗದ ಅರ್ಧಶತಕದ ದಾಖಲೆಯು ಕೆಕೆಆರ್’ನ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಹೆಸರಿನಲ್ಲಿತ್ತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ ಇದೀಗ ರಸೆಲ್ ಹಿಂದಿಕ್ಕಿ, ಟ್ರಾವಿಸ್ ಹೆಡ್ ಕೇವಲ 24 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ 62 ರನ್ ಗಳಿಸಿದರು. ಇದಾದ ಬಳಿಕ ಅಭಿಷೇಕ್ ಶರ್ಮಾ ಹವಾ ಸೃಷ್ಟಿಸಿ, ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅದ್ಭುತ ಇನ್ನಿಂಗ್ಸ್’ನಿಂದ ಹೈದರಾಬಾದ್ ತಂಡ ಕೇವಲ 7 ಓವರ್‌ಗಳಲ್ಲಿ 100ರ ಗಡಿ ಮುಟ್ಟಿತ್ತು.
ಇದನ್ನೂ ಓದಿ: ಮದ್ವೆಗೂ ಮುನ್ನ 34 ಮಕ್ಕಳಿಗೆ ತಾಯಿಯಾದ ಈಕೆ ಇಂದು ಶ್ರೀಮಂತ IPL ತಂಡವೊಂದರ ಒಡತಿ! 49 ವರ್ಷ ವಯಸ್ಸಿನ ಆ ಬ್ಯೂಟಿ ಯಾರು ಗೊತ್ತಾ?
ಅಭಿಷೇಕ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. SRH ಪರ ಅರ್ಧಶತಕ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್’ನಲ್ಲಿ ಅತಿ ವೇಗವಾಗಿ ಫಿಫ್ಟಿ ಕಲೆ ಹಾಕಿದ ಕ್ರಿಕೆಟಿಗರಲ್ಲಿ ಒಬ್ಬರು ಎಂದೆನಿಸಿಕೊಂಡಿದ್ದಾರೆ. ಅಂದರೆ, 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿರುವ ಅಭಿಷೇಕ್, ಕ್ರಿಸ್ ಗೇಲ್ (17 ಎಸೆತಕ್ಕೆ ಅರ್ಧಶತಕ) ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿದ್ದು 13 ಎಸೆತದಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ