ನಿಮ್ಮನ್ನು ಮಹಾರಾಜ ಎಂದಿದ್ದಕ್ಕೆ ಸರಿಯಾಗಿ ಮಾಡಿದ್ರಿ!! ದಿಗ್ಗಜ ಕ್ರಿಕೆಟಿಗ ಸೌರವ್‌ ಗಂಗೂಲಿ ವಿರುದ್ಧ ಖ್ಯಾತ ನಟಿ ವಾಗ್ದಾಳಿ

Actress Srilekha slams Sourav Ganguly: ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಕೇಂದ್ರ ಸಂಸ್ಥೆ ತನಿಖೆ ಆರಂಭಿಸಿದೆ. ಇದಲ್ಲದೆ,  ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.  

Written by - Bhavishya Shetty | Last Updated : Aug 18, 2024, 06:15 PM IST
    • ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
    • ಮಾಜಿ ನಾಯಕ ಸೌರವ್ ಗಂಗೂಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ
    • ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಗೂಲಿ ಅವರ ಹೇಳಿಕೆಗೆ ಕಟುವಾಗಿ ಟೀಕಿಸಿದ್ದಾರೆ.
ನಿಮ್ಮನ್ನು ಮಹಾರಾಜ ಎಂದಿದ್ದಕ್ಕೆ ಸರಿಯಾಗಿ ಮಾಡಿದ್ರಿ!! ದಿಗ್ಗಜ ಕ್ರಿಕೆಟಿಗ ಸೌರವ್‌ ಗಂಗೂಲಿ ವಿರುದ್ಧ ಖ್ಯಾತ ನಟಿ ವಾಗ್ದಾಳಿ title=
File Photo

Actress Srilekha slams Sourav Ganguly: ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯೊಬ್ಬರನ್ನು ಬರ್ಬರವಾಗಿ ಅ**ಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಘೋರ ಅಪರಾಧದ ವಿರುದ್ಧ ಜನರು ದಂಗೆ ಎದ್ದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಕೇಂದ್ರ ಸಂಸ್ಥೆ ತನಿಖೆ ಆರಂಭಿಸಿದೆ. ಇದಲ್ಲದೆ,  ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದಿಢೀರ್‌ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮೋಹನ್‌ ಲಾಲ್!!‌ ಸ್ಟಾರ್‌ ನಟನ ಆರೋಗ್ಯಕ್ಕೆ ಆಗಿದ್ದೇನು?

ಈ ಮಧ್ಯೆ, ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಗೂಲಿ ಅವರ ಹೇಳಿಕೆಗೆ ಕಟುವಾಗಿ ಟೀಕಿಸಿದ್ದಾರೆ. "ಇದು ತುಂಬಾ ದುರದೃಷ್ಟಕರ ಮತ್ತು ಗಂಭೀರ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಮಹಿಳೆಯರ ಸುರಕ್ಷತೆಯ ಮೇಲೆ ನಿಗಾ ಇಡುವ ಅಗತ್ಯವಿದೆ. ಇಂತಹ ಘಟನೆಗಳು ಎಲ್ಲಿ ಬೇಕಾದರೂ ಆಗಬಹುದು. ನಾವು ಉತ್ತಮ ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ಭಾರತವು ಅದ್ಭುತ ದೇಶವಾಗಿದೆ. ದೊಡ್ಡ ನಗರ ಮತ್ತು ದೊಡ್ಡ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ. ಒಂದು ಸಾಮಾನ್ಯ ಘಟನೆಯಿಂದ ಎಲ್ಲವನ್ನೂ ನಿರ್ಣಯಿಸಲು ಸಾಧ್ಯವಿಲ್ಲ, ಆದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿ, ಮೈದಾನಗಳಲ್ಲಿ ಮತ್ತು ಬೀದಿಗಳಲ್ಲಿ ಸರಿಯಾದ ಭದ್ರತೆ ಇರಬೇಕು" ಎಂದು ಸೌರವ್ ಗಂಗೂಲಿ ಹೇಳಿದ್ದರು.

ಇನ್ನು ಗಂಗೂಲಿ ಈ ವಿಚಾರವನ್ನು ಸಾಮಾನ್ಯ ಘಟನೆ ಎಂದು ಹೇಳಿದರ ಬಗ್ಗೆ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್‌ ಮನೆಯನ್ನೂ ಮೀರಿಸುವಂತಿದೆ ಮೊಹಮ್ಮದ್ ಶಮಿ ಭವ್ಯಬಂಗಲೆ! ಕಣ್ಮನ ಸೆಳೆಯುವ ಈ ಫಾರ್ಮ್‌ ಹೌಸ್‌ ಒಳಾಂಗಣ ಫೋಟೋಸ್‌ ಇಲ್ಲಿದೆ

“ಜನರು ಕ್ರಿಕೆಟಿಗರಾಗಿ ನಿಮ್ಮನ್ನು ಪ್ರೀತಿಸಿದ್ದಾರೆ. ನಿಮ್ಮ ಟಿವಿ ಕಾರ್ಯಕ್ರಮಗಳನ್ನು ಮೆಚ್ಚಿದ್ದಾರೆ. ನಿನ್ನನ್ನು ಮಹಾರಾಜ ಎಂದು ಕರೆಯುತ್ತಾರೆ. ಆದರೆ ನೀವು ಈ ಘಟನೆಯನ್ನು ಸಾಮಾನ್ಯ ಎಂದು ಹೇಳಿರುವುದು ಬೇಸರವಾಗಿದೆ, ನಿಮ್ಮನ್ನು ಮಹಾರಾಜ ಎಂದು ಕರೆದಿದ್ದಕ್ಕೆ ಸರಿಯಾರಿ ಮಾಡಿದ್ದೀರಿ" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News