ICC Cricket World Cup 2019: ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 224 / 8

2019 ರ ವಿಶ್ವಕಪ್ ಟೂರ್ನಿ ಅಂಗವಾಗಿ ಸೌತಾಮ್ಪ್ತೊನ್ ನ ದಿ ರೌಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.

Last Updated : Jun 22, 2019, 07:15 PM IST
ICC Cricket World Cup 2019: ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 224 / 8  title=

ನವದೆಹಲಿ: 2019 ರ ವಿಶ್ವಕಪ್ ಟೂರ್ನಿ ಅಂಗವಾಗಿ ಸೌತಾಮ್ಪ್ತೊನ್ ನ ದಿ ರೌಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು 4.2 ಓವರ್ ಗಳಾಗಿದ್ದಾಗ 7 ರನ್ ಗೆ ರೋಹಿತ್ ಶರ್ಮಾ ಅವರ ವಿಕೆಟ್ ನ್ನು ಕಳೆದುಕೊಂಡಿತು. ತದನಂತರ ಬಂದಂತಹ ಆಟಗಾರರಲ್ಲಿ ವಿರಾಟ್ ಕೊಹ್ಲಿ, ಹಾಗೂ ಕೇದಾರ್ ಜಾದವ್ ಕ್ರಮವಾಗಿ 67, 52 ರನ್ ಗಳಿಸುವ ಮೂಲಕ ತಂಡ ಮೊತ್ತ 200 ರ ಗಡಿ ದಾಟಲು ನೆರವಾದರು.ಇವರಿಬ್ಬರನ್ನು ಹೊರತು ಪಡಿಸಿದರೆ ಉಳಿದ ಯಾವ ಆಟಗಾರನು ಕೂಡ 30 ರ ಗಡಿ ದಾಟಲಿಲ್ಲ.

ಅಚ್ಚರಿ ಎಂದರೆ ಅಫ್ಘಾನಿಸ್ತಾನ ತಂಡವು ಇಂದು ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವುದು, ಆಫ್ಘಾನ್ ತಂಡದ ನಾಯಕ ಗುಲ್ ಬಾದೀನ್ ನೈಬ್  ಹಾಗೂ ಮೊಹಮ್ಮದ್ ನಬಿ ತಲಾ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರನ್ನು ಹೊರತು ಪಡಿಸಿದರೆ ಎಲ್ಲಾ ಬೌಲರ್ ಗಳು ತಲಾ ಒಂದೊಂದು ವಿಕೆಟ್ ಗಳನ್ನು ಪಡೆದುಕೊಂಡರು.

ವಿಶ್ವಕಪ್ ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರುವ ಅಫ್ಘಾನಿಸ್ತಾನ ತಂಡವು ಈಗ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ ಟಕ್ಕರ್ ನೀಡಿದೆ ಎನ್ನಬಹುದು. ಭಾರತ ತಂಡವು ಇದುವರೆಗೆ ಅಜೇಯ ಗೆಲುವಿನಯಾನ ವನ್ನು ಮುಂದುವರೆಸಿದೆ. ಈಗ ಆಫ್ಘಾನಿಸ್ತಾನ್ ತಂಡದ ವಿರುದ್ಧ ಕಡಿಮೆ ಮೊತ್ತ ಗಳಿಸಿರುವುದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.

Trending News