ನವದೆಹಲಿ : ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ಐಪಿಎಲ್ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 4 ಐಪಿಎಲ್ ಟ್ರೋಫಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings). ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಪಿಎಲ್ 2021 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಮಣಿಸುವ ಮೂಲಕ, ನಾಲ್ಕನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಮಧ್ಯೆ, ಇತ್ತೀಚೆಗೆ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ (N Srinivasan) ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದಂತೆ, ಬಹು ದೊಡ್ಡ ಹೇಳಿಕೆಯನ್ನೇ ನೀಡಿದ್ದಾರೆ. ಸಿಎಸ್‌ಕೆ ತನ್ನ ಮೇಲೆ ಹೆಚ್ಚು ಹಣವನ್ನು ಹೂಡುವುದು ಧೋನಿಗೆ ಇಷ್ಟವಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಶೀಘ್ರದಲ್ಲೇ ಐಪಿಎಲ್‌ನಿಂದಲೂ ನಿವೃತ್ತಿ ಹೊಂದುವ ನಿರೀಕ್ಷೆಯಿದೆ. ಧೋನಿ ನಿವೃತ್ತಿಯ ನಂತರ, ಚೆನ್ನೈ ಸೂಪರ್ ಕಿಂಗ್ಸ್‌ನ ಮುಂದಿನ ನಾಯಕ (Chennai Super Kings next captain) ಯಾರಾಗುತ್ತಾರೆ ಎನ್ನುವುದೇ ಕುತೂಹಲ. ಇದೀಗ ಈ ರೇಸ್ ನಲ್ಲಿ ಮೂವರು ಆಟಗಾರರ ಹೆಸರು ಕೇಳಿ ಬರುತ್ತಿದೆ.
1. ರುತುರಾಜ್ ಗಾಯಕ್ವಾಡ್ :
ರುತುರಾಜ್ ಗಾಯಕ್ವಾಡ್ (Ruturaj Gaikwad) ಐಪಿಎಲ್‌ನಲ್ಲಿ (IPL) ಅದ್ಭುತ ಪ್ರದರ್ಶನ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ರುತುರಾಜ್ ಗಾಯಕ್ವಾಡ್ 2020 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಧೋನಿ ನಂತರ ಈ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ನಾಯಕನ ಪ್ರಬಲ ಸ್ಪರ್ಧಿಯಾಗಿ ಹೊ ಹೊಮ್ಮಿದ್ದಾರೆ. ಐಪಿಎಲ್ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್. ಅವರಿಗೆ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕತ್ವವನ್ನು ನೀಡಲಾಗಿದೆ. ರುತುರಾಜ್ ಈ ಋತುವಿನ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 16 ಪಂದ್ಯಗಳಲ್ಲಿ, ರುತುರಾಜ್ ಗಾಯಕ್ವಾಡ್ 45.35 ರ ಸರಾಸರಿ ಮತ್ತು 136.26 ಸ್ಟ್ರೈಕ್ ರೇಟ್‌ನಲ್ಲಿ 635 ರನ್ ಗಳಿಸಿದ್ದಾರೆ.
ಇದನ್ನೂ ಓದಿ : T20 World Cup: ನ್ಯೂಜಿಲೆಂಡ್-ಅಫ್ಘಾನಿಸ್ತಾನ್ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ ನಿಗೂಢ ಸಾವು!
2. ರವೀಂದ್ರ ಜಡೇಜಾ :
ಎಂಎಸ್ ಧೋನಿ (MS Dhoni) ನಿವೃತ್ತಿಯ ನಂತರ ಸಿಎಸ್‌ಕೆ ನಾಯಕತ್ವಕ್ಕೆ ರವೀಂದ್ರ ಜಡೇಜಾ (Ravindra jadeja) ಕೂಡಾ ಅತಿ ದೊಡ್ಡ ಸ್ಪರ್ಧಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸ್ವತಃ ಧೋನಿ ಕೂಡ ಅವರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಲು ರವೀಂದ್ರ ಜಡೇಜಾ ಪ್ರಬಲ ಸ್ಪರ್ಧಿ ಆಗಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಪರಿಣತಿ ಹೊಂದಿರುವ ರವೀಂದ್ರ ಜಡೇಜಾ, ಸಿಎಸ್‌ಕೆಯಲ್ಲಿ (CSK) ಧೋನಿಯ ಉತ್ತರಾಧಿಕಾರಿಯಾಗಲು ಮುಂಚೂಣಿಯಲ್ಲಿದ್ದಾರೆ.
3. ಡೇವಿಡ್ ವಾರ್ನರ್ :
ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David warner) ಇದೀಗ ತಮ್ಮ ಹಳೆಯ ಐಪಿಎಲ್ ತಂಡ ಸನ್ ರೈಸರ್ಸ್ ಹೈದರಾಬಾದ್ ತೊರೆದು ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೇವಿಡ್ ವಾರ್ನರ್ ಮೇಲೆ ಬಾಜಿ ಕಟ್ಟಬಹುದು. ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) 2016 ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ : T20 World Cup 2021: ಇಂದು ಕೊನೆಗೊಳ್ಳಲಿದೆ ವಿರಾಟ್ ಕೊಹ್ಲಿಯ ಟಿ20 ನಾಯಕತ್ವ, ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.