IPL 2024 ರ ಈ ಸೀಸನ್ ತುಂಬಾ ರೋಚಕವಾಗಿ ಮುಂದುವರೆದಿದೆ. ಐಪಿಎಲ್ 2024ರಲ್ಲಿ ಹಲವು ರೋಚಕ ಪಂದ್ಯಗಳನ್ನು ವೀಕ್ಷಿಸಲಾಗಿದೆ. ಪ್ರತಿ ವರ್ಷ ಆಟಗಾರರು ಐಪಿಎಲ್‌ನಿಂದ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತಾರೆ. ಆದರೆ ಆಟಗಾರರ ಹೊರತಾಗಿ, ಐಪಿಎಲ್ ಪಂದ್ಯಗಳನ್ನು ಆಡದೆ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಮೂಲಕ ಉತ್ತಮ ಮೊತ್ತವನ್ನು ಗಳಿಸುವ ಅನೇಕ ಆಟಗಾರರು ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ?

ಭಾಗ್ಯವನ್ನೇ ಬದಲಿಸಿದ ಕ್ರಿಕೆಟ್ (Anurag Dwivedi Net Worth)
ಭಾರತದಲ್ಲಿ ಕ್ರಿಕೆಟ್ ವೀಕ್ಷಿಸುವವರ ಕೊರತೆಯಿಲ್ಲ. ಭಾರತದಲ್ಲಿ ಕ್ರಿಕೆಟ್ ಅನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಇಂದು ಕ್ರಿಕೆಟ್ ವ್ಯವಹಾರ ಕೋಟಿ-ಕೋಟಿ ರೂಗಳ ಗಡಿ ದಾಟಿದೆ. ಈ ಆಟದಿಂದ ಕ್ರಿಕೆಟಿಗರನ್ನು ಹೊರತುಪಡಿಸಿ, ಸಾಮಾನ್ಯ ಜನರು ಕೂಡ ಹೆಚ್ಚಿನ ಹಣವನ್ನು ಗಳಿಸುತ್ತಿದ್ದಾರೆ. ಇಂದು ನಾವು ನಿಮಗೆ ಯುವಕನೊಬ್ಬನ ಕುರಿತು ಮಾಹಿತಿ ನೀಡುತ್ತಿದ್ದು, ಈ ಯುವಕನ ಜೀವನದಲ್ಲಿ ಕ್ರಿಕೆಟ್ ಭಾಗ್ಯವನ್ನೇ ಬದಲಿಸಿದೆ. 

ತನ್ನ ಸ್ವಂತ ಛಾಪು ಮೂಡಿಸಿದ ಅನುರಾಗ್ (Indian Premier League Anurag Dwivedi)
ಕ್ರಿಕೆಟ್ ಫ್ಯಾಂಟಸಿ ಆಪ್ ನಲ್ಲಿ ಹಲವು ಬಾರಿ ಗೆದ್ದಿರುವ ಅನುರಾಗ್ ದ್ವಿವೇದಿ ಉತ್ತರ ಪ್ರದೇಶದ ನಿವಾಸಿ. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಕ್ರಿಕೆಟ್ ಫ್ಯಾಂಟಸಿ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಾರೆ. ಅನುರಾಗ್ ದ್ವಿವೇದಿ ಅವರು ಕ್ರಿಕೆಟ್ ಫ್ಯಾಂಟಸಿ ಅಪ್ಲಿಕೇಶನ್‌ನ ಅನೇಕ ಪ್ರಚಾರ ಕಾರ್ಯಕ್ರಮಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅನುರಾಗ್ ದ್ವಿವೇದಿ ಹಲವು ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಅನುರಾಗ್ ದ್ವಿವೇದಿ ಅವರ ಫೋಟೋವನ್ನು ಸಹ ಅವರ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೈಕಲ್‌ನಿಂದ ಪ್ರಯಾಣ ಆರಂಭ
ಕೆಲವು ತಿಂಗಳ ಹಿಂದೆ, ಅನುರಾಗ್ ದ್ವಿವೇದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು ಮತ್ತು ಬೈಸಿಕಲ್ನಿಂದ ಪ್ರಯಾಣ ಆರಂಭಿಸಿದೆ ಎಂದು ಹೇಳಿಕೊಂಡಿದ್ದಾರೆ. ವಾಸ್ತವವಾಗಿ, ಈ ಚಿತ್ರದಲ್ಲಿ ಅನುರಾಗ್ ದ್ವಿವೇದಿ ಬೈಸಿಕಲ್ ಮೇಲೆ ಕುಳಿತಿರುವುದನ್ನು ನೀವು ನೋಡಬಹುದು ಮತ್ತು ಅವರು ತಮ್ಮ ಜೀವನದಲ್ಲಿ ಮೊದಲ ವಾಹನ ಬೈಸಿಕಲ್ ಎಂದು ಜನರಿಗೆ ಹೇಳಲು ಯತ್ನಿಸುತ್ತಿದ್ದಾರೆ. ಇಂದು ಅವರು ಬಳಿ ಹಲವಾರು ವಾಹನಗಳಿವೆ.

ಇದನ್ನೂ ಓದಿ-Wolf Man ಹೆಸರಿನಿಂದ ಗಿನ್ನಿಸ್ ಬುಕ್ ನಲ್ಲಿ ಹೆಸರು, ಶೇ 98 ರಷ್ಟು ಮುಖ-ಶರೀರದ ಮೇಲೆ ಕೂದಲು!

ಕೋಟ್ಯಾಂತರ ಆಸ್ತಿಗೆ ಒಡೆಯ
ಮಾಧ್ಯಮ ವರದಿಗಳ ಪ್ರಕಾರ, ಅನುರಾಗ್ ದ್ವಿವೇದಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಫ್ಯಾಂಟಸಿ ಕ್ರಿಕೆಟ್ ಅವರ ಜೀವನವನ್ನೇ ಬದಲಾಯಿಸಿದೆ. ಅನುರಾಗ್ ತನ್ಮೂಲಕ ಹಣ ಗಳಿಸುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೂ ಹೇಳಿಕೊಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅನುರಾಗ್ ದ್ವಿವೇದಿ ಅವರ ಪ್ರಸ್ತುತ ನಿವ್ವಳ ಆಸ್ತಿ ಮೌಲ್ಯ 20 ರಿಂದ 30 ಕೋಟಿ ರೂ.ಗಳಾಗಿದೆ.

ಇದನ್ನೂ ಓದಿ-Delusionship ಅಂದ್ರೆ ಏನು?ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?

ಫ್ಯಾಂಟಸಿ ಆಪ್ ಎಚ್ಚರಿಕೆ!
ಈ ಲೇಖನದಲ್ಲಿ ನಾವು ಕೇವಲ ನಿಮಗೆ ಅನುರಾಗ್ ದ್ವಿವೇದಿ ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ನಾವು ಯಾವುದೇ ಆಪ್ ಕುರಿತು ಪ್ರಚಾರ ಮಾಡುತ್ತಿಲ್ಲ. ಫ್ಯಾಂಟಸಿ ಕ್ರಿಕೆಟ್ ಆ್ಯಪ್‌ಗಳ ಮೂಲಕ ಜನರು ಪ್ರತಿ ವರ್ಷ ಭಾರಿ ನಷ್ಟವನ್ನು ಅನುಭವಿಸಿದ ಜನರೂ ಇದ್ದಾರೆ. ಹೇಗಿರುವಾಗ ಈ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ನೀವು ಬಯಸಿದರೆ, ದಯವಿಟ್ಟು ಈ ಆಟವನ್ನು ಜವಾಬ್ದಾರಿಯುತವಾಗಿ ಆಡಿ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
anurag dwivedi earns in crores with out playing singal ipl 2024
News Source: 
Home Title: 

ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!

ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!
Yes
Is Blog?: 
No
Facebook Instant Article: 
Yes
Highlights: 

ಮಾಧ್ಯಮ ವರದಿಗಳ ಪ್ರಕಾರ, ಅನುರಾಗ್ ದ್ವಿವೇದಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಆದರೆ ಫ್ಯಾಂಟಸಿ ಕ್ರಿಕೆಟ್ ಅವರ ಜೀವನವನ್ನೇ ಬದಲಾಯಿಸಿದೆ.

ಅನುರಾಗ್ ತನ್ಮೂಲಕ ಹಣ ಗಳಿಸುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೂ ಹೇಳಿಕೊಡುತ್ತಿದ್ದಾರೆ.

Mobile Title: 
ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!
Nitin Tabib
Publish Later: 
No
Publish At: 
Sunday, May 5, 2024 - 16:04
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No
Word Count: 
356

Trending News