Railway recruitment 2023: ರೈಲ್ವೆ ಇಲಾಖೆಯಲ್ಲಿ 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Southern Railway Recruitment 2023: ಈ ನೇಮಕಾತಿ ಮೂಲಕ 234 ಸಹಾಯಕ ಲೋಕೋ ಪೈಲಟ್, 361 ತಂತ್ರಜ್ಞರು, 168 ಜೂನಿಯರ್ ಇಂಜಿನಿಯರ್, 27 ಗಾರ್ಡ್/ಟ್ರೇನ್ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

Written by - Puttaraj K Alur | Last Updated : Aug 12, 2023, 07:10 PM IST
  • ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಕೋಶದಲ್ಲಿ 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಸಹಾಯಕ ಲೋಕೋ ಪೈಲಟ್, ತಂತ್ರಜ್ಞರು, ಜೂನಿಯರ್ ಇಂಜಿನಿಯರ್ & ಗಾರ್ಡ್/ಟ್ರೇನ್ ಮ್ಯಾನೇಜರ್ ಹುದ್ದೆಗಳ ಭರ್ತಿ
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ
Railway recruitment 2023: ರೈಲ್ವೆ ಇಲಾಖೆಯಲ್ಲಿ 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ title=
790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನವದೆಹಲಿ: ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಕೋಶ(RRC)ದಲ್ಲಿ ಖಾಲಿ ಇರುವ 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಮೂಲಕ ಸಹಾಯಕ ಲೋಕೋ ಪೈಲಟ್, ತಂತ್ರಜ್ಞರು, ಜೂನಿಯರ್ ಇಂಜಿನಿಯರ್ ಮತ್ತು ಗಾರ್ಡ್/ಟ್ರೇನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ (RPF/RPSF ಹೊರತುಪಡಿಸಿ) ಆನ್‌ಲೈನ್ ಮೋಡ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:ನೇಮಕಾತಿ ಮೂಲಕ 234 ಸಹಾಯಕ ಲೋಕೋ ಪೈಲಟ್, 361 ತಂತ್ರಜ್ಞರು, 168 ಜೂನಿಯರ್ ಇಂಜಿನಿಯರ್, 27 ಗಾರ್ಡ್/ಟ್ರೇನ್ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 10ನೇ/ಐಟಿಐ/ಡಿಪ್ಲೊಮಾ/ಪದವಿ ಉತ್ತೀರ್ಣರಾಗಿರಬೇಕು.  

ವಯೋಮಿತಿ: UR: 18 - 42 ವರ್ಷಗಳು, OBC: 18 - 45 ವರ್ಷಗಳು ಮತ್ತು SC/ST: 18 ರಿಂದ 47 ವರ್ಷಗಳು

ಇದನ್ನೂ ಓದಿ: ದೆಹಲಿ ಶಾಲೆಯ ಬಳಿ ಅನಿಲ ಸೋರಿಕೆ ಶಂಕೆ, 28 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಆಯ್ಕೆ ವಿಧಾನ: ರೈಲ್ವೇ ನೇಮಕಾತಿ ಸೆಲ್ ದಕ್ಷಿಣ ರೈಲ್ವೆ ನೇಮಕಾತಿ ಪ್ರಕ್ರಿಯೆಯನ್ನು CBT, ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‍ಸೈಟ್‍ sr.indianrailways.gov.inಗೆ ಭೇಟಿ ನೀಡಬಹುದು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ - 30.07.2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 30.08.2023

ಅರ್ಜಿ ಸಲ್ಲಿಸುವುದು ಹೇಗೆ?

  • sr.indianrailways.gov.in ವೆಬ್‌ಸೈಟ್‌ಗೆ ಹೋಗಿ
  • ‘GDCE for Southern Railway’ ಅಧಿಸೂಚನೆಯನ್ನು ಹುಡುಕಿ
  • ಅಧಿಸೂಚನೆಯು ತೆರೆಯುತ್ತದೆ ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ನೀವು ಅರ್ಹ ಅಭ್ಯರ್ಥಿಯಾಗಿದ್ದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮುಂದುವರೆಯಿರಿ  
  • ಮೇಲೆ ಹೇಳಿದ ಪೋಸ್ಟ್‌ಗಳಿಗೆ ಆನ್‌ಲೈನ್‌ನಲ್ಲಿ Apply ಲಿಂಕ್ ಹುಡುಕಿ ಮತ್ತು ಕ್ಲಿಕ್ ಮಾಡಿ
  • ನೀವು ಹೊಸ ಬಳಕೆದಾರರಾಗಿದ್ದರೆ, ನೀವು ನೋಂದಣಿ ಮಾಡಿಕೊಳ್ಳಬೇಕು ಇಲ್ಲದಿದ್ದರೆ ನೀವು ನಿಮ್ಮ ಖಾತೆಗೆ ಲಾಗಿನ್ ಆಗಬಹುದು ನಂತರ Apply ಮಾಡಿ
  • ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ.
  • ಅಂತಿಮವಾಗಿ submit ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಳ್ಳಿರಿ

ಇದನ್ನೂ ಓದಿ: Snake Bite Death: ಹಾವು ಕಡಿತದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News