ಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆ

India vs Pakistan: ಈ ಬಾರಿ ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಏಷ್ಯಾ ಕಪ್ 2024ರ ವೇಳಾಪಟ್ಟಿಯನ್ನು ಜುಲೈನಲ್ಲಿ ನಡೆಸಲಿದೆ ಎಂದು ಘೋಷಿಸಿದೆ.

Written by - Bhavishya Shetty | Last Updated : Jun 25, 2024, 09:31 PM IST
    • ಪುರುಷರ ತಂಡಗಳ ನಡುವೆ ಭಾರತ-ಪಾಕಿಸ್ತಾನ ಪಂದ್ಯ ನಡೆದಿತ್ತು.
    • ಇದರಲ್ಲಿ ಭಾರತ 5 ರನ್ ಅಂತರದಿಂದ ಭರ್ಜರಿ ಜಯ ಸಾಧಿಸಿದೆ
    • ಜುಲೈ 19ರಿಂದ ಪ್ರಾರಂಭವಾಗುವ ಮಹಿಳಾ ಏಷ್ಯಾ ಕಪ್ನ ವೇಳಾಪಟ್ಟಿಯನ್ನು ಘೋಷಿಸಿದೆ
ಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆ title=
India VS Pakistan

India vs Pakistan, Asia Cup 2024: ಇತ್ತೀಚೆಗೆ ಟಿ20 ವಿಶ್ವಕಪ್ 2024ರ ಅವಧಿಯಲ್ಲಿ, ಪುರುಷರ ತಂಡಗಳ ನಡುವೆ ಭಾರತ-ಪಾಕಿಸ್ತಾನ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ 5 ರನ್ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಇದೀಗ ಭಾರತ-ಪಾಕಿಸ್ತಾನ ಜುಲೈನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಇದನ್ನೂ ಓದಿ: ರುಕ್ಮಿಣಿ ವಸಂತ್ : ಬಾನ ದಾರಿಯಲಿ ನಟಿಯ ಸಿಂಪಲ್ ಲುಕ್ ..! 

ಆದರೆ ಈ ಬಾರಿ ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಏಷ್ಯಾ ಕಪ್ 2024ರ ವೇಳಾಪಟ್ಟಿಯನ್ನು ಜುಲೈನಲ್ಲಿ ನಡೆಸಲಿದೆ ಎಂದು ಘೋಷಿಸಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜುಲೈ 19ರಿಂದ ಪ್ರಾರಂಭವಾಗುವ ಮಹಿಳಾ ಏಷ್ಯಾ ಕಪ್ನ ವೇಳಾಪಟ್ಟಿಯನ್ನು ಘೋಷಿಸಿದೆ. ಭಾರತ, ಪಾಕಿಸ್ತಾನ ಸೇರಿದಂತೆ ಒಟ್ಟು 8 ತಂಡಗಳು ಶ್ರೀಲಂಕಾದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಗ್ರೂಪ್-ಎ ಸ್ಟಾರ್ಸ್ ಇಂಡಿಯಾ, ಪಾಕಿಸ್ತಾನ, ಯುಎಇ ಮತ್ತು ನೇಪಾಳ, ಗ್ರೂಪ್-ಬಿ ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌’ನ ತಂಡಗಳನ್ನು ಹೊಂದಿದೆ. ಅಂತಿಮ ಪಂದ್ಯವನ್ನು ಜುಲೈ 28 ರಂದು ನಡೆಸಲಾಗುತ್ತಿದೆ.

ಭಾರತ ಮತ್ತು ಪಾಕಿಸ್ತಾನದ ಪಂದ್ಯವು ಜುಲೈ 19 ರಂದು ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಟೀಮ್ ಇಂಡಿಯಾದ ಮುಂದಿನ ಪಂದ್ಯಗಳು ಯುಎಇ ಮತ್ತು ನೇಪಾಳದಿಂದ ಆಗಿದ್ದು, ಇದನ್ನು ಕ್ರಮವಾಗಿ ಜುಲೈ 21 ಮತ್ತು 23 ರಂದು ಆಡಲಾಗುವುದು. ಇವೆರಡೂ ಸಂಜೆ 7 ರಿಂದ ಪ್ರಾರಂಭವಾಗಲಿದ್ದು, ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ದಾಂಬುಲಾದಲ್ಲಿ ಆಡಲಾಗುತ್ತದೆ.

ಏಷ್ಯಾಕಪ್ ಪೂರ್ಣ ವೇಳಾಪಟ್ಟಿ

ಜುಲೈ 19: ಯುಎಇ Vs ನೇಪಾಳ - ಮಧ್ಯಾಹ್ನ 2 ಗಂಟೆಗೆ

ಜುಲೈ 19: ಭಾರತ Vs ಪಾಕಿಸ್ತಾನ - ಸಂಜೆ 7 ಗಂಟೆಗೆ

ಜುಲೈ 20: ಮಲೇಷ್ಯಾ Vs ಥೈಲ್ಯಾಂಡ್ - ಮಧ್ಯಾಹ್ನ 2 ಗಂಟೆಗೆ

20 ಜುಲೈ: ಶ್ರೀಲಂಕಾ Vs ಬಾಂಗ್ಲಾದೇಶ - ಸಂಜೆ 7 ಗಂಟೆಗೆ

ಜುಲೈ 21: ಭಾರತ Vs ಯುಎಇ - ಮಧ್ಯಾಹ್ನ 2 ಗಂಟೆಗೆ

ಜುಲೈ 21: ಪಾಕಿಸ್ತಾನ Vs ನೇಪಾಳ - ಸಂಜೆ 7 ಗಂಟೆಗೆ

ಜುಲೈ 22: ಶ್ರೀಲಂಕಾ Vs ಮಲೇಷ್ಯಾ - ಮಧ್ಯಾಹ್ನ 2 ಗಂಟೆಗೆ

ಜುಲೈ 22: ಬಾಂಗ್ಲಾದೇಶ vs ಥೈಲ್ಯಾಂಡ್ - ಸಂಜೆ 7 ಗಂಟೆಗೆ

ಜುಲೈ 23: ಪಾಕಿಸ್ತಾನ Vs ಯುಎಇ - ಮಧ್ಯಾಹ್ನ 2 ಗಂಟೆಗೆ

ಜುಲೈ 23: ಭಾರತ Vs ನೇಪಾಳ - ಸಂಜೆ 7 ಗಂಟೆಗೆ

ಜುಲೈ 24: ಬಾಂಗ್ಲಾದೇಶ vs ಮಲೇಷ್ಯಾ - ಮಧ್ಯಾಹ್ನ 2 ಗಂಟೆಗೆ

ಜುಲೈ 24: ಶ್ರೀಲಂಕಾ Vs ಥೈಲ್ಯಾಂಡ್ - 7 PM

ಜುಲೈ 26: ಸೆಮಿಫೈನಲ್

ಜುಲೈ 26: ಸೆಮಿಫೈನಲ್

ಜುಲೈ 28: ಫೈನಲ್ - 7 PM

ಇದನ್ನೂ ಓದಿ: ಸೆಮೀಸ್’ಗೆ ಶೇ.88ರಷ್ಟು ಮಳೆ ಭೀತಿ: ಮಳೆ ಬಂದರೆ ಯಾರ ಕನಸಿಗೆ ಬೀಳಲಿದೆ ಪೆಟ್ಟು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News