Asian Games 2023 ಕ್ರಿಕೆಟ್ ಫೈನಲ್: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹಣಾಹಣಿ! ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

Asian Games 2023 Cricket Final: ಮಹಿಳಾ ಕ್ರಿಕೆಟ್ 2010 ಮತ್ತು 2014 ರಲ್ಲಿ ಏಷ್ಯನ್ ಗೇಮ್ಸ್‌’ನ ಭಾಗವಾಗಿತ್ತು. ಆದರೆ 2018 ರಲ್ಲಿ ಜಕಾರ್ತಾದಲ್ಲಿ ನಡೆದ ಪಂದ್ಯದಲ್ಲಿ  ಅಲಭ್ಯವಾಗಿತ್ತು. ಇನ್ನು ಪಾಕಿಸ್ತಾನವು 2010 ಮತ್ತು 2014ರಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.

Written by - Bhavishya Shetty | Last Updated : Sep 25, 2023, 09:15 AM IST
    • ಇಂದು ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆಯಲಿದೆ
    • ಈ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಮತ್ತು ಶ್ರೀಲಂಕಾ ಕಾದಾಡಲಿದೆ
    • ಏಷ್ಯನ್ ಗೇಮ್ಸ್ 2023 ಮಹಿಳಾ ಕ್ರಿಕೆಟ್ ಅಂತಿಮ ವೇಳಾಪಟ್ಟಿ ಮತ್ತು ಪಂದ್ಯದ ಸಮಯ ಹೀಗಿದೆ
Asian Games 2023 ಕ್ರಿಕೆಟ್ ಫೈನಲ್: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹಣಾಹಣಿ! ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ? title=
Asian Games 2023

Asian Games 2023 Cricket Final: ಸೆಪ್ಟೆಂಬರ್ 25 ರಂದು ಅಂದರೆ ಇಂದು ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಮತ್ತು ಶ್ರೀಲಂಕಾ ಕಾದಾಡಲಿದೆ,

ಇದನ್ನೂ ಓದಿ: ನಿರಂತರ ಕುಸಿತದ ಬಳಿಕ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ರೇಟ್

ಮಹಿಳಾ ಕ್ರಿಕೆಟ್ 2010 ಮತ್ತು 2014 ರಲ್ಲಿ ಏಷ್ಯನ್ ಗೇಮ್ಸ್‌’ನ ಭಾಗವಾಗಿತ್ತು. ಆದರೆ 2018 ರಲ್ಲಿ ಜಕಾರ್ತಾದಲ್ಲಿ ನಡೆದ ಪಂದ್ಯದಲ್ಲಿ  ಅಲಭ್ಯವಾಗಿತ್ತು. ಇನ್ನು ಪಾಕಿಸ್ತಾನವು 2010 ಮತ್ತು 2014ರಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.

ಇನ್ನು ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತದ ಪ್ರಯಾಣವು ಕ್ವಾರ್ಟರ್ ಫೈನಲ್‌’ಗೆ ನೇರ ಪ್ರವೇಶದೊಂದಿಗೆ ಪ್ರಾರಂಭವಾಗಿದೆ. ಸ್ಮೃತಿ ಮಂಧಾನ ನಾಯಕತ್ವ ವಹಿಸಿರುವ ಭಾರತದ ಮಹಿಳೆಯರ ತಂಡ ಇದೀಗ ಏಷ್ಯನ್ ಗೇಮ್ಸ್’ನಲ್ಲಿ ಎರಡನೇ ಚಿನ್ನಕ್ಕಾಗಿ ಕಾದಾಟ ನಡೆಸಲಿದೆ.

ಏಷ್ಯನ್ ಗೇಮ್ಸ್ 2023 ಮಹಿಳಾ ಕ್ರಿಕೆಟ್ ಅಂತಿಮ ವೇಳಾಪಟ್ಟಿ ಮತ್ತು ಪಂದ್ಯದ ಸಮಯ ಹೀಗಿದೆ:

ಸೆಪ್ಟೆಂಬರ್ 25 ಸೋಮವಾರ:

  • ಕಂಚಿನ ಪದಕದ ಪಂದ್ಯ: ಬಾಂಗ್ಲಾದೇಶ vs ಪಾಕಿಸ್ತಾನ - 6:30 AM
  • ಚಿನ್ನದ ಪದಕದ ಪಂದ್ಯ: ಭಾರತ vs ಶ್ರೀಲಂಕಾ - 11:30 AM

ಇದನ್ನೂ ಓದಿ: ಏಕದಿನ, ಟೆಸ್ಟ್, ಟಿ20… ಮೂರು ಸ್ವರೂಪದಲ್ಲೂ ಅಗ್ರ ‘ಭಾರತ’! ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ

ಇನ್ನು ಫೈನಲ್ ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ಸೋನಿ ಲೈವ್’ನಲ್ಲಿ  ವೀಕ್ಷಿಸಬಹುದು. ಸೋನಿ ಸ್ಪೋರ್ಟ್ಸ್ ಟೆನ್ 1 ಎಸ್‌ ಡಿ ಮತ್ತು ಎಚ್‌ ಡಿ (ಇಂಗ್ಲಿಷ್), ಸೋನಿ ಸ್ಪೋರ್ಟ್ಸ್ ಟೆನ್ 3 ಎಸ್‌ ಡಿ & ಎಚ್‌ ಡಿ (ಹಿಂದಿ) ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 4   & ಎಚ್‌ ಡಿ (ತಮಿಳು ಮತ್ತು ತೆಲುಗು) ಟಿವಿ ಚಾನೆಲ್‌’ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News