ಏಷ್ಯನ್ ಗೇಮ್ಸ್: ಸ್ಕ್ವಾಶ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಮಹಿಳಾ ತಂಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು ಈಗ ಮಹಿಳಾ ಸ್ಕ್ವಾಶ್ ವಿಭಾಗದಲ್ಲಿ  ಭಾರತದ ತಂಡವು ಫೈನಲ್ ಗೆ ಲಗ್ಗೆ  ಇಟ್ಟಿದೆ. 

Last Updated : Aug 31, 2018, 04:01 PM IST
ಏಷ್ಯನ್ ಗೇಮ್ಸ್: ಸ್ಕ್ವಾಶ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಮಹಿಳಾ ತಂಡ title=

ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು ಈಗ ಮಹಿಳಾ ಸ್ಕ್ವಾಶ್ ವಿಭಾಗದಲ್ಲಿ  ಭಾರತದ ತಂಡವು ಫೈನಲ್ ಗೆ ಲಗ್ಗೆ  ಇಟ್ಟಿದೆ. 

ಭಾರತದ ಜೋಶ್ನಾ ಚಿನ್ನಪ್ಪ ಅವರು ಎಂಟು ಬಾರಿ ವಿಶ್ವಚಾಂಪಿಯನ್ ಆಗಿದ್ದ  ಮಲೇಷ್ಯಾದ ನಿಕೊಲ್ ಡೇವಿಡ್ ಅವರನ್ನು ಮಣಿಸಿ ಫೈನಲ್ ತಲುಪಲು ನೆರವಾದರು.

ಮಲೇಷ್ಯಾ ವಿರುದ್ದ ಶುಕ್ರವಾರದಂದು ನಡೆದ  ಪಂದ್ಯದಲ್ಲಿ 2-0 ಅಂತರದಿಂದ  ಮಣಿಸಿದ  ಭಾರತದ ತಂಡವು ಎರಡನೇ ಬಾರಿಗೆ ಈ ಸಾಧನೆ ಮಾಡಿದೆ. ಆ ಮೂಲಕ ಈಗ ಚಿನ್ನದ ಪದಕವನ್ನು ಗೆಲ್ಲುವತ್ತ ದೃಷ್ಟಿ ನೆಟ್ಟಿದೆ.

ಜೋಶ್ನಾ ಚಿನ್ನಪ್ಪ, ದೀಪಿಕಾ ಪಲ್ಲೀಕಲ್ ಕಾರ್ತಿಕ್, ಸುನಯ್ನ ಕುರುವಿಲ್ಲ ಹಾಗೂ ತವ್ನಿ ಖನ್ನ ಅವರನ್ನು ಒಳಗೊಂಡಿರುವ ಭಾರತದ ತಂಡ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಸಾದ್ಯತೆ ಇದೆ.
 

Trending News