ನವದೆಹಲಿ: ವಾರದ ಎಲ್ಲಾ 7 ದಿನಗಳು ದೇವ-ದೇವತೆಗಳಿಗೆ ಸಮರ್ಪಿತವಾಗಿವೆ. ಸೋಮವಾರ ಭೋಲೆನಾಥನನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದೆ. ಈ ದಿನದಂದು ಶಿವನನ್ನು ಕ್ರಮಬದ್ಧವಾಗಿ ಮತ್ತು ಪರಿಶುದ್ಧ ಹೃದಯದಿಂದ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಶಿವನನ್ನು ಮೆಚ್ಚಿಸುವುದು ಬಹಳ ಸುಲಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೇವಲ ಒಂದು ಲೋಟ ನೀರು ಮತ್ತು ನಿಜವಾದ ಭಕ್ತಿಯಿಂದ ಶಿವ ಸಂತೋಷಪಡುತ್ತಾರೆ.
ಸೋಮವಾರ ಉಪವಾಸದ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಮಾಡಿದ್ರೆ ಭೋಲೇನಾಥನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಎಲ್ಲಾ ದುಃಖಗಳನ್ನು ನಿವಾರಿಸುತ್ತಾನೆ. ಅಲ್ಲದೆ ಸಿರಿಸಂಪತ್ತಿನಿಂದ ಮನೆ ತುಂಬಿ ತುಳುಕುತ್ತದೆ. ಮಹಾದೇವನು ಸೋಮವಾರದಂದು ಕೆಲವು ವಿಶೇಷ ಕ್ರಮಗಳಿಂದ ಸಂತುಷ್ಟನಾಗುವ ಮೂಲಕ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಶಿವನನ್ನು ಮೆಚ್ಚಿಸಲು ಈ ಸುಲಭ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಿರಿ.
ಇದನ್ನೂ ಓದಿ: Numerology: ಈ ದಿನಾಂಕದಂದು ಜನಿಸಿದವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗುತ್ತದೆ!
ಸೋಮವಾರ ಈ ಪರಿಹಾರಗಳನ್ನು ಮಾಡಿ
- ಸೋಮವಾರವನ್ನು ಜ್ಯೋತಿಷ್ಯದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮುಂದಿನ ವಾರದ ಮೊದಲ ದಿನವನ್ನು ಶಿವನ ಆರಾಧನೆಯೊಂದಿಗೆ ಪ್ರಾರಂಭಿಸಿದರೆ, 7 ದಿನಗಳಲ್ಲಿ ಭಕ್ತರಿಗೆ ಯಾವುದೇ ತೊಂದರೆ ಇಲ್ಲವೆಂದು ನಂಬಲಾಗಿದೆ. ಸೋಮವಾರ ಬೆಳಗ್ಗೆ ಸ್ನಾನ ಮಾಡಿದ ನಂತರ ಶಿವನನ್ನು ಭಕ್ತಿಯಿಂದ ಪೂಜಿಸಬೇಕು. ಪೂಜೆಯ ವೇಳೆ ಶಿವಲಿಂಗದ ಮೇಲೆ ಗಂಗಾಜಲ ಮಿಶ್ರಿತ ನೀರನ್ನು ಅರ್ಪಿಸಬೇಕು. ನಂತರ ಶಿವನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ, ಶ್ರೀಗಂಧಿಂದ ಪೂಜೆ ಮಾಡಬೇಕು.
- ಶಿವನ ಆರಾಧನೆಯ ಸಮಯದಲ್ಲಿ ಶಿವ ಚಾಲೀಸಾ ಮತ್ತು ಶಿವಾಷ್ಟಕವನ್ನು ಪಠಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ. ಇದರಿಂದ ಶಿವನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರಿಗೆ ವರವನ್ನು ನೀಡುತ್ತಾನೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೈವಾಹಿಕ ಜೀವನದಲ್ಲಿ ದುಃಖ ಮತ್ತು ಮದುವೆಯಲ್ಲಿ ಅಡಚಣೆ ಎದುರಿಸುತ್ತಿರುವ ಜನರು ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಗೌರಿ ಶಂಕರನಿಗೆ ರುದ್ರಾಕ್ಷಿಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಜೊತೆಗೆ ನಿಮ್ಮ ಜೀವನದಲ್ಲಿ ಹಣದ ಮಳೆಯಾಗುತ್ತದೆ.
- ಪೂಜೆಯ ವೇಳೆ ಶಿವನಿಗೆ ಬಿಳಿ ಚಂದನದ ಪೇಸ್ಟ್ ಅರ್ಪಿಸುವುದರಿಂದ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು ಖಂಡಿತ. ಅಲ್ಲದೆ ತಾಯಿ ಲಕ್ಷ್ಮಿದೇವಿ ಮನೆಯಲ್ಲಿ ಖಾಯಂ ನೆಲೆಸುತ್ತಾಳೆ.
- ಸೋಮವಾರದಂದು ಪೂಜೆ ಮಾಡುವಾಗ ಶಿವನ ‘ಓಂ ನಮಃ ಶಿವಾಯಃ’ ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಹಣದ ಮಳೆಯಾಗುತ್ತದೆ ಮತ್ತು ವ್ಯಕ್ತಿಯು ವ್ಯವಹಾರದಲ್ಲಿ ಬೆಳವಣಿಗೆ ಪಡೆಯುತ್ತಾನೆ.
ಇದನ್ನೂ ಓದಿ: Chanakya Niti: ಈ ಒಂದು ಕೆಲಸ ಮಾಡಿದರೆ ಸಾಕು ವರ್ಷಪೂರ್ತಿ ಆರ್ಥಿಕ ಸಮಸ್ಯೆ ಎದುರಾಗೋದೇ ಇಲ್ಲ
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.