Athiya Shetty Reaction : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಜೊತೆಗಿನ ವಿವಾಹದ ವದಂತಿಗಳ ಬಗ್ಗೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಅಥಿಯಾ ತನ್ನ ಮದುವೆಯ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟೋರಿಯಲ್ಲಿ, ಮದುವೆಗೆ ನನಗೂ ಆಹ್ವಾನ ಬರುವ ನಿರೀಕ್ಷೆ ಇದೆ ಎಂದು ಬರೆದುಕೊಂಡಿದ್ದಾರೆ.
ವದಂತಿಗಳನ್ನು ತಳ್ಳಿಹಾಕಿದ ಅಥಿಯಾ ಶೆಟ್ಟಿ
ಕಳೆದ ಕೆಲವು ದಿನಗಳಿಂದ ಆಥಿಯಾ, ಕೆಎಲ್ ರಾಹುಲ್ ನನ್ನು ಮುಂದಿನ ಮೂರು ತಿಂಗಳಲ್ಲಿ ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳಿವೆ. ಈ ಬಗ್ಗೆ ಆಥಿಯಾ ಶೆಟ್ಟಿ, ಇನ್ನು 3 ತಿಂಗಳಲ್ಲಿ ನಡೆಯಲಿರುವ ಈ ಮದುವೆಗೆ ನನಗು ಆಹ್ವಾನಿಸುತ್ತಾರೆ ಎಂದು ಬರೆದುಕೊಳ್ಳುವ ಮೂಲಕ ಈ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ಆಥಿಯಾ-ರಾಹುಲ್ ಮುಂಬೈನಲ್ಲಿ ಹೊಸ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಈ ಇಬ್ಬರು 'ಲಿವ್-ಇನ್ ರಿಲೇಷನ್ ಶಿಪ್'ನಲ್ಲಿರಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಅಥಿಯಾ ಈ ಹಿಂದೆ ತಳ್ಳಿಹಾಕಿದ್ದರು.
ಲವ್ ಬರ್ಡ್ಸ್ ಬಗ್ಗೆ ಹೇಳುವುದಾದರೆ, ಈ ಜೋಡಿ ಕಳೆದ ವರ್ಷ ತಮ್ಮ ರಿಲೇಷನ್ ಶಿಪ್ ಬಗ್ಗೆ ಅಧಿಕೃತಗೊಳಿಸಿದರು. ಅಥಿಯಾ ಹುಟ್ಟುಹಬ್ಬಕ್ಕೆ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ರಾಹುಲ್, ಅಥಿಯಾ ಜೊತೆಗಿನ ಫೋಟೋವನ್ನು ಶೇರ್ ಮಾಡುವ ಮೂಲಕ ತನ್ನ ಗರ್ಲ್ ಫ್ರೆಂಡ್ ಗೆ ವಿಶ್ ಮಾಡಿದ್ದರು.
ಅಥಿಯಾ ಸಹೋದರ ಅಹಾನ್ ಶೆಟ್ಟಿಯ ಚೊಚ್ಚಲ ಸಿನಿಮಾ ತಡಪ್ನ ಮೊದಲ ಶೋ ಕಾರ್ಯಕ್ರಮದಲ್ಲಿ ರಾಹುಲ್ ಕೂಡ ಭಾಗವಹಿಸಿದ್ದರು. ರಾಹುಲ್ ಮತ್ತು ಅಥಿಯಾ ಇತ್ತೀಚೆಗೆ ಜರ್ಮನಿಗೆ ಕೂಡ ಹೋಗಿದ್ದರು, ಅಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಇತ್ತೀಚೆಗೆ ಆಥಿಯಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದಾರೆ. ಅಥಿಯಾ 2015 ರಲ್ಲಿ ಬಾಲಿವುಡ್ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ