ನವದೆಹಲಿ: ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳೆಯ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮಹಿಳೆಯರ ತಂಡವು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಇದನ್ನೂ ಓದಿ: ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್
ಆಸ್ಟ್ರೇಲಿಯಾ (Australia) ಮಹಿಳಾ ಕ್ರಿಕೆಟ್ ತಂಡವು ಏಕದಿನ ಪಂದ್ಯಗಳಲ್ಲಿ (ಏಕದಿನ) ಸತತ ಗೆಲುವು ಸಾಧಿಸಸುವ ಮೂಲಕ ರಿಕಿ ಪಾಂಟಿಂಗ್ ಅವರ 2003 ರ ಆಸ್ಟ್ರೇಲಿಯಾದ ಪುರುಷರ ತಂಡದ ದಾಖಲೆಯನ್ನು ಮುರಿದಿದೆ. ಇದು ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸಾಧಿಸಿರುವ 22 ನೆ ಗೆಲುವಾಗಿದೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಏಕದಿನ ಪಂದ್ಯಗಳಲ್ಲಿ ಕೊನೆಯ ಬಾರಿಗೆ ಸೋತದ್ದು 2017 ರ ಅಕ್ಟೋಬರ್ ನಲ್ಲಿ ಎನ್ನಲಾಗಿದೆ.2003 ರಲ್ಲಿ, ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ ಸತತ 21 ಪಂದ್ಯಗಳನ್ನು ಗೆಲ್ಲುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತ್ತು.
Can't stop, won't stop 🇦🇺
Congratulations on a new world record, @AusWomenCricket! 🥳 pic.twitter.com/Hx8obWYiUW
— ICC (@ICC) April 4, 2021
ಇದನ್ನು ಓದಿ- ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ
2018 ರ ಮಾರ್ಚ್‌ನಲ್ಲಿ ತಿಂಗಳಲ್ಲಿ ಆಸ್ಟ್ರೇಲಿಯಾದ ಗೆಲುವಿನ ನಾಗಾಲೋಟ ಆರಂಭವಾಯಿತು.ಭಾರತದಲ್ಲಿನ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಅಂದಿನಿಂದ ಅವರು ಪಾಕಿಸ್ತಾನ (3-0), ನ್ಯೂಜಿಲೆಂಡ್ (3-0), ಇಂಗ್ಲೆಂಡ್ (3-0), ವೆಸ್ಟ್ ಇಂಡೀಸ್ (3-0), ಶ್ರೀಲಂಕಾ (3-0), ನ್ಯೂಜಿಲೆಂಡ್ (3-0) ), ಮತ್ತು ಈಗ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.