ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಫುಟ್‌ಬಾಲ್‌ನಲ್ಲಿ ವಿಶೇಷ ಮಾಸ್ಟರ್‌ಕ್ಲಾಸ್ ಅನ್ನು ನಡೆಸಿಕೊಡಲಿರುವ ಬೈಚುಂಗ್ ಭುಟಿಯಾ

ಭಾರತದ ಪ್ರಮುಖ ಅಂತರರಾಷ್ಟ್ರೀಯ K12 ಶಾಲಾ ಸರಪಳಿಗಳಲ್ಲಿ ಒಂದಾದ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಇಂದು ಭಾರತೀಯ ಮಾಜಿ ವೃತ್ತಿಪರ ಫುಟ್‌ಬಾಲ್ ಆಟಗಾರ ಮತ್ತು ಪದ್ಮಶ್ರೀ ಭೈಚುಂಗ್ ಭುಟಿಯಾ ಅವರ 'ಭೈಚುಂಗ್ ಭುಟಿಯಾ ಫುಟ್‌ಬಾಲ್‌ ಅಕಾಡೆಮಿ ಯೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ.

Written by - Zee Kannada News Desk | Last Updated : Jan 13, 2024, 12:19 AM IST
  • ಆರ್ಕಿಡ್‌ನಲ್ಲಿ ಯಾವಾಗಲೂ ಕ್ರೀಡೆ ಮತ್ತು ದೈಹಿಕ ಶಿಕ್ಷಣವನ್ನು ಪ್ರೋತ್ಸಾಹಿಸುತ್ತೇವೆ
  • ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಅನುಭವವನ್ನು ಒದಗಿಸಲು ಸಾಮಾನ್ಯವಾಗಿರುವುದನ್ನು ಹೊರತುಪಡಿಸಿ ಅನನ್ಯವಾದ ಅವಕಾಶಗಳನ್ನು ಹುಡುಕುತ್ತೇವೆ
  • ಬೈಚುಂಗ್ ಭುಟಿಯಾ ಅವರ ಮಾಸ್ಟರ್‌ಕ್ಲಾಸ್ ಸಮಗ್ರ ಶಿಕ್ಷಣಕ್ಕೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ
 ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಫುಟ್‌ಬಾಲ್‌ನಲ್ಲಿ ವಿಶೇಷ ಮಾಸ್ಟರ್‌ಕ್ಲಾಸ್ ಅನ್ನು ನಡೆಸಿಕೊಡಲಿರುವ ಬೈಚುಂಗ್ ಭುಟಿಯಾ title=

ಬೆಂಗಳೂರು: ಭಾರತದ ಪ್ರಮುಖ ಅಂತರರಾಷ್ಟ್ರೀಯ K12 ಶಾಲಾ ಸರಪಳಿಗಳಲ್ಲಿ ಒಂದಾದ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಇಂದು ಭಾರತೀಯ ಮಾಜಿ ವೃತ್ತಿಪರ ಫುಟ್‌ಬಾಲ್ ಆಟಗಾರ ಮತ್ತು ಪದ್ಮಶ್ರೀ ಭೈಚುಂಗ್ ಭುಟಿಯಾ ಅವರ 'ಭೈಚುಂಗ್ ಭುಟಿಯಾ ಫುಟ್‌ಬಾಲ್‌ ಅಕಾಡೆಮಿ ಯೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ.

'ಪವರ್ ಅಪ್ ವಿತ್ ಲೆಜೆಂಡ್ಸ್' ಸರಣಿಯ ಭಾಗವಾಗಿ, ಜನವರಿ 11 ರಿಂದ ಆರ್ಕಿಡ್‌ನ ಹರಳೂರು ಮತ್ತು ಕಾಡುಗೋಡಿ ಕ್ಯಾಂಪಸ್‌ಗಳಲ್ಲಿ ಫುಟ್‌ಬಾಲ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಜನವರಿ 13 ರಂದು ಭಾರತೀಯ ಫುಟ್‌ಬಾಲ್‌ತಾರೆ ಭೈಚುಂಗ್ ಭುಟಿಯಾ ಆಟದ ಕೌಶಲಗಳ ಕುರಿತು ಮಾಸ್ಟರ್‌ ಕ್ಲಾಸ್‌ ನಡೆಸಿಕೊಡಲಿದ್ದಾರೆ. ‘ಪವರ್-ಅಪ್ ವಿತ್ ಲೆಜೆಂಡ್ಸ್' ಸರಣಿಯ ಭಾಗವಾಗಿ ಮಾಸ್ಟರ್‌ಕ್ಲಾಸ್. ಇಲ್ಲಿ ತನಕ ಕ್ರೀಡಾ ಐಕಾನ್‌ಗಳಾದ ಮೇರಿ ಕೋಮ್, ಶಿಖರ್ ಧವನ್ ಅವರ ಡಾ ಒನ್ ಸ್ಪೋರ್ಟ್ಸ್ ಅಕಾಡೆಮಿ, ಗೀತಾ ಫೋಗಟ್ ಮತ್ತು ಅಜಂತಾ ಮೆಂಡಿಸ್ ಅವರೊಂದಿಗೆ ಯಶಸ್ವಿ ಶಿಬಿರ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 5,151 ಸರ್ಕಾರಿ ಹುದ್ದೆಗಳ ಭರ್ತಿ

ಈ ಫುಟ್‌ಬಾಲ್ ತರಬೇತಿ ಶಿಬಿರಗಳ ಪ್ರಾಥಮಿಕ ಗುರಿ ಆರ್ಕಿಡ್‌ನ ಯುವ ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡದ ಜವಬ್ದಾರಿ, ನಿರ್ಣಯ ತೆಗೆದುಕೊಳ್ಳುವಿಕೆ ಮುಂತಾದ ಕೌಶಲ ಹೆಚ್ಚಿಸುವುದು. ಮೂರು ದಿನಗಳ ಶಿಬಿರವು ಈ ತರಬೇತಿ, ಆಟದ ಒಳನೋಟ ಮತ್ತು ಆಟಕ್ಕೆ ಅಗತ್ಯವಾದ ಕೌಶಲ ವೃದ್ಧಿಯನ್ನು ಒಳಗೊಂಡಿತ್ತು. ಭೈಚುಂಗ್ ಭುಟಿಯಾ ಮಾತನಾಡಿ, ‘ಒಬ್ಬ ಫುಟ್‌ಬಾಲ್ ಆಟಗಾರನಾಗಿ, ಮೈದಾನದಲ್ಲಿ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ನಿಜವಾದ ಗೆಲುವು. ನಾನು ಮಾಸ್ಟರ್‌ಕ್ಲಾಸ್ ನಡೆಸಲು ಮತ್ತು ಫುಟ್‌ಬಾಲ್‌ನಲ್ಲಿ ನನ್ನ ಕಲಿಕೆಯ ಕೌಶಲಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಈ ಮಾಸ್ಟರ್‌ಕ್ಲಾಸ್ ಮತ್ತು ಕ್ಯಾಂಪ್‌ಗಳ ಮೂಲಕ, ಮೈದಾನದಲ್ಲಿ ಉತ್ತಮ ಸಾಧನೆ ಮಾಡುವುದಲ್ಲದೆ ತಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಕ್ರೀಡಾ ಮನೋಭಾವ ಮತ್ತು ಟೀಮ್‌ವರ್ಕ್‌ನ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನೋಡಲು ಆಶಿಸುತ್ತೇನೆ" ಎಂದರು.

ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್‌ನ ಅಕಾಡೆಮಿಕ್ಸ್‌ ವಿಪಿ ಡಾ ವೇದಾ ಬೈಸಾನಿ ಮಾತನಾಡಿ, ಆರ್ಕಿಡ್‌ನಲ್ಲಿ ಯಾವಾಗಲೂ ಕ್ರೀಡೆ ಮತ್ತು ದೈಹಿಕ ಶಿಕ್ಷಣವನ್ನು ಪ್ರೋತ್ಸಾಹಿಸುತ್ತೇವೆ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಅನುಭವವನ್ನು ಒದಗಿಸಲು ಸಾಮಾನ್ಯವಾಗಿರುವುದನ್ನು ಹೊರತುಪಡಿಸಿ ಅನನ್ಯವಾದ ಅವಕಾಶಗಳನ್ನು ಹುಡುಕುತ್ತೇವೆ.ಬೈಚುಂಗ್ ಭುಟಿಯಾ ಅವರ ಮಾಸ್ಟರ್‌ಕ್ಲಾಸ್ ಸಮಗ್ರ ಶಿಕ್ಷಣಕ್ಕೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ.  ಅವರ ಉಪಸ್ಥಿತಿಯು ನಮ್ಮ ವಿದ್ಯಾರ್ಥಿಗಳ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ” ಎಂದರು.

ಇದನ್ನೂ ಓದಿ: ಮೂರು ಡಿಸಿಎಂ ವಿಚಾರವಾಗಿ ಎಐಸಿಸಿ ಅಧ್ಯಕ್ಷರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಆರ್ಕಿಡ್‌ನ ಅಕಾಡೆಮಿಕ್ಸ್‌ ವಿಪಿ ಸಕಿನಾ ಸಕಿನ ಖಾಸಿಮಗ್‌ ಜೈದಿ ಮಾತನಾಡಿ ಈ ಕ್ರೀಡಾ ಸಹಭಾಗಿತ್ವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೇಗೆ ಸಹಕಾರಿ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.ದಿ ಆರ್ಕಿಸ್‌ನ ವಿದ್ಯಾರ್ಥಿ ಹಿತರಕ್ಷಣೆ ವಿಭಾಗದ ವಿಪಿ ಹರ್ಷ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿದ್ದನ್ನು ನೀಡಲು ಶಾಲೆಯ ಬದ್ಧತೆ ಮತ್ತು ಅದರ ಉಪಕ್ರಮಗಳ ಕುರಿತು ವಿವರಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News