Michael Bracewell Runout Viral Video: ಕ್ರಿಕೆಟ್‌ನಲ್ಲಿ ಪ್ರತಿದಿನ ವಿಶಿಷ್ಟ ಘಟನೆಗಳು ಕಂಡುಬರುತ್ತವೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲೂ ಇದೇ ರೀತಿಯ ಘಟನೆಯೊಂದು ಕಂಡುಬಂದಿದೆ. ವೀಡಿಯೊ ನೋಡಿದ ನಂತರ ನೀವೂ ಕೂಡ ಶಾಕ್ ಆಗೋದು ಖಂಡಿತ.
ಇದನ್ನೂ ಓದಿ: Virat Kohli:“ನನ್ನನ್ನು ಮದುವೆಯಾಗು ಕೊಹ್ಲಿ…!!”: ವಿರಾಟ್’ಗೆ ಪ್ರಪೋಸ್ ಮಾಡಿದ ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ
ಬ್ಯಾಟ್ಸ್‌ಮನ್ ಕ್ರೀಸ್ ತಲುಪಿದ ನಂತರವೂ ರನೌಟ್ ಹೇಗೆ ಆಗಲು ಸಾಧ್ಯ ಎಂದು ನೀವು ಆಶ್ಚರ್ಯ ಪಡಬಹುದು. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲೂ ಇದೇ ರೀತಿ ಕ್ರೀಸ್‌ಗೆ ಬಂದ ನಂತರವೂ ಬ್ಯಾಟ್ಸ್‌ಮನ್ ರನೌಟ್ ಆಗಿದ್ದಾರೆ.
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮೈಕಲ್ ಬ್ರೇಸ್‌ವೆಲ್ ಅವರೇ ಈ ರನೌಟ್ ನ ಬಲಿಪಶು. ಬ್ರೇಸ್‌ವೆಲ್ ಕ್ರೀಸ್‌ನಲ್ಲಿ ರನ್ ಕಲೆಹಾಕಲು ಓಡಿಬಂದಿದ್ದರು, ಆದರೆ ವಿಕೆಟ್‌ಕೀಪರ್ ಬೆನ್ ಫೋಕ್ಸ್ ಸ್ಟಂಪ್‌ನಲ್ಲಿ ಚೆಂಡನ್ನು ಹೊಡೆದ ಸಂದರ್ಭದಲ್ಲಿ ಅವರ ಒಂದು ಕಾಲು ಮತ್ತು ಬ್ಯಾಟ್ ಇನ್ನೂ ನೆಲಕ್ಕೆ ಟಚ್ ಆಗಿರಲಿಲ್ಲ. ಇದಾದ ನಂತರ ಸ್ಲೋ ಮೋಶನ್ ವಿಡಿಯೋದಲ್ಲಿ ಅವರು ರನ್ ಔಟ್ ಆಗಿರುವುದು ಗೊತ್ತಾಗಿದೆ. ಆದರೆ, ಬ್ರೇಸ್‌ವೆಲ್ ರನೌಟ್ ಆದ ನಂತರ ತುಂಬಾ ನಿರಾಶೆಗೊಂಡರು.
Michael Bracewell will not want to watch this one back 🙈#NZvENG pic.twitter.com/Nn3KtG3UgZ
— Wisden (@WisdenCricket) February 27, 2023
ಬ್ರೇಸ್‌ವೆಲ್ ಅವರ ರನೌಟ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌ಗಳ ಮಹಾಪೂರವೇ ಹರಿದುಬಂದಿದೆ. ಜನರು ಟ್ವಿಟರ್‌ನಲ್ಲಿ ಮೋಜು ಮಾಡಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್’ನಲ್ಲಿ 23 ಶತಕ, 2 ತ್ರಿಶತಕ: ಈ ದಾಖಲೆ ಬರೆದ ಟೀಂ ಇಂಡಿಯಾದ ಏಕೈಕ ಆಟಗಾರ ಯಾರು ಗೊತ್ತಾ?
ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 209 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 483 ರನ್ ಗಳಿಸಿತ್ತು. ಕೇನ್ ವಿಲಿಯಮ್ಸನ್ ಅದ್ಭುತ ಬ್ಯಾಟಿಂಗ್ ಮಾಡಿ ತಮ್ಮ ಟೆಸ್ಟ್ ವೃತ್ತಿಜೀವನದ 26ನೇ ಶತಕ ಬಾರಿಸಿದರು. ಇದಲ್ಲದೇ ಟಾಮ್ ಲ್ಯಾಥಮ್ ಕೂಡ 83 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಟಾಮ್ ಬ್ಲಂಡೆಲ್ ಪ್ರಮುಖ 90 ರನ್‌ಗಳ ಕೊಡುಗೆ ನೀಡಿದರು. ಈ ಬ್ಯಾಟ್ಸ್ ಮನ್ ಗಳಿಂದಾಗಿ ತಂಡ ಇಂಗ್ಲೆಂಡ್ ಗೆ 258 ರನ್ ಗಳ ಗುರಿ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.