Team India : ಟಿ20 ವಿಶ್ವಕಪ್ ಸೋಲಿನ ನಂತರ ಎಚ್ಚೆತ್ತಗೊಂಡ ಬಿಸಿಸಿಐ, ಈ ಅನುಭವಿ ಟೀಂನಿಂದ ಔಟ್! 

ಬಿಸಿಸಿಐ ಈಗಾಗಲೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ತೆಗೆದುಹಾಕಿದೆ, ಇದೀಗ ಮತ್ತೊಂದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಬಿಸಿಸಿಐ, ಟೀಂ ಇಂಡಿಯಾದಿಂದ ಅನುಭವಿ ಒಬ್ಬರನ್ನು ಕೈ ಬಿಟ್ಟಿದೆ.

Written by - Channabasava A Kashinakunti | Last Updated : Nov 26, 2022, 02:49 PM IST
  • ಟೀಂ ಇಂಡಿಯಾದಿಂದ ಈ ಅನುಭವಿ ಔಟ್
  • 2011ರ ODI ವಿಶ್ವಕಪ್‌ನ ಭಾಗವೂ ಆಗಿದ್ದರು
  • ಐಪಿಎಲ್‌ನಲ್ಲಿ ದ್ರಾವಿಡ್ ಜೊತೆ ಕೆಲಸ
Team India : ಟಿ20 ವಿಶ್ವಕಪ್ ಸೋಲಿನ ನಂತರ ಎಚ್ಚೆತ್ತಗೊಂಡ ಬಿಸಿಸಿಐ, ಈ ಅನುಭವಿ ಟೀಂನಿಂದ ಔಟ್!  title=

Board of Control for Cricket in India : 2022 ರ ಟಿ 20 ವಿಶ್ವಕಪ್ ಸೋಲಿನ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಲವು ದೊಡ್ಡ ದೊಡ್ಡ ನಿರ್ಧಾರಗಳನ್ನು  ತೆಗೆದುಕೊಳ್ಳುತ್ತಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಹೊರಬಿದ್ದಿತ್ತು. ಈ ಸೋಲಿನ ನಂತರ, ಬಿಸಿಸಿಐ ಈಗಾಗಲೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ತೆಗೆದುಹಾಕಿದೆ, ಇದೀಗ ಮತ್ತೊಂದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಬಿಸಿಸಿಐ, ಟೀಂ ಇಂಡಿಯಾದಿಂದ ಅನುಭವಿ ಒಬ್ಬರನ್ನು ಕೈ ಬಿಟ್ಟಿದೆ.

ಟೀಂ ಇಂಡಿಯಾದಿಂದ ಈ ಅನುಭವಿ ಆಟಗಾರ ಔಟ್

ಟಿ20 ವಿಶ್ವಕಪ್ 2022 ಸೋಲಿನ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾನಸಿಕ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರನ್ನು ಕೈ ಬಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಇನ್ನು ಮುಂದೆ ದಕ್ಷಿಣ ಆಫ್ರಿಕಾದ ನಿವಾಸಿ ಪ್ಯಾಡಿ ಆಪ್ಟನ್ ಅವರ ಒಪ್ಪಂದವನ್ನು ಅಪ್ಡೇಟ್ ಮಾಡಿಕೊಳ್ಳುತ್ತಿಲ್ಲ. 2022 ರ ಟಿ 20 ವಿಶ್ವಕಪ್‌ನೊಂದಿಗೆ, ಬಿಸಿಸಿಐ ಜೊತೆಗಿನ ಪ್ಯಾಡಿ ಅಪ್ಟನ್ ಅವರ ಒಪ್ಪಂದವು ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : BCCI vs PCB: ‘ನೀವು ಬರದಿದ್ದರೆ ನಾವೂ ಬರುವುದಿಲ್ಲ’; ಬಿಸಿಸಿಐ ವಿರುದ್ಧ ರಮೀಜ್ ರಾಜಾ ಗುಡುಗು!

2011ರ ODI ವಿಶ್ವಕಪ್‌ನ ಭಾಗವೂ ಆಗಿದ್ದರು

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಸಲಹೆಯ ಮೇರೆಗೆ 53 ವರ್ಷದ ಪ್ಯಾಡಿ ಆಪ್ಟನ್ ಅವರನ್ನು ಟೀಂ ಇಂಡಿಯಾದ ಮಾನಸಿಕ ಕಂಡೀಷನಿಂಗ್ ಕೋಚ್ ಆಗಿ ನೇಮಿಸಲಾಯಿತು. ಈ ವರ್ಷದ ಜುಲೈನಲ್ಲಿ ಅವರು ಟೀಂ ಇಂಡಿಯಾದೊಂದಿಗೆ ಸಂಬಂಧ ಹೊಂದಿದ್ದರು. ಇದಕ್ಕೂ ಮೊದಲು, ಪ್ಯಾಡಿ ಆಪ್ಟನ್ ತನ್ನ 2008-11 ಅವಧಿಯಲ್ಲಿ ಮಾನಸಿಕ ಕಂಡೀಷನಿಂಗ್ ಕೋಚ್ ಮತ್ತು ಸ್ಟ್ರಾಟೆಜಿಕ್ ಕೋಚ್‌ನ ದ್ವಿಪಾತ್ರದಲ್ಲಿ ಟೀಂ ಇಂಡಿಯಾದೊಂದಿಗೆ ಕೆಲಸ ಮಾಡಿದ್ದಾರೆ.

ಐಪಿಎಲ್‌ನಲ್ಲಿ ದ್ರಾವಿಡ್ ಜೊತೆ ಕೆಲಸ

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ರಾಹುಲ್ ದ್ರಾವಿಡ್ ಜೊತೆ ಪ್ಯಾಡಿ ಆಪ್ಟನ್ ಕೆಲಸ ಮಾಡಿದ್ದಾರೆ. ಪ್ಯಾಡಿ ಆಪ್ಟನ್ ಅವರು ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ, ಹಾಗೆಯೇ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಲಾಹೋರ್ ಖಲಂದರ್ಸ್ ಮತ್ತು ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್‌ಗೆ ತರಬೇತಿ ನೀಡಿದ್ದಾರೆ. ಅವರು ದಕ್ಷಿಣ ಆಫ್ರಿಕಾ ತಂಡದೊಂದಿಗೆ ಪ್ರದರ್ಶನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : IND vs NZ 2nd ODI: ಸರಣಿ ಕೈತಪ್ಪುವ ಭೀತಿಯಲ್ಲಿ ಟೀಂ ಇಂಡಿಯಾ: 2ನೇ ಪಂದ್ಯಕ್ಕೆ ಎದುರಾಯ್ತು ಈ ಸಮಸ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News