ಟೆಸ್ಟ್’ನಲ್ಲಿ ಶತಕ ಸಿಡಿಸಿದ್ದ ಈ ಸ್ಫೋಟಕ ಬ್ಯಾಟ್ಸ್’ಮನ್ Team Indiaಗೆ ಕೈಕೊಟ್ಟು ವಿದೇಶಿ ತಂಡಕ್ಕೆ ಸೇರ್ಪಡೆ…!

Prithvi Shaw: ಟೀಂ ಇಂಡಿಯಾದಲ್ಲಿ ಸಾಕಷ್ಟು ದಿನಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಪೃಥ್ವಿ ಶಾ ಭರ್ಜರಿ ಹೆಜ್ಜೆ ಇಟ್ಟಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಆಡಿದ ನಂತರ ಅವರು ಕೌಂಟಿ ಚಾಂಪಿಯನ್‌ಶಿಪ್‌ ಗೆ ತೆರಳಲು ನಿರ್ಧರಿಸಿದ್ದಾರೆ.

Written by - Bhavishya Shetty | Last Updated : Jul 2, 2023, 07:20 AM IST
    • ಕೆಲವು ಕ್ರಿಕೆಟಿಗರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ
    • ಟೀಂ ಇಂಡಿಯಾದ ಆಟಗಾರನೊಬ್ಬ ಭಾರತ ಬಿಟ್ಟು ಬೇರೆ ತಂಡದೊಂದಿಗೆ ಆಡಲು ವಿದೇಶಕ್ಕೆ ತೆರಳಲು ನಿರ್ಧರಿಸಿದ್ದಾರೆ
    • 23ರ ಹರೆಯದ ಪೃಥ್ವಿ ಶಾ ಕೌಂಟಿಯಲ್ಲಿ ನಾರ್ಥಾಂಪ್ಟನ್‌ ಶೈರ್ ತಂಡದ ಪರ ಆಡಲಿದ್ದಾರೆ
ಟೆಸ್ಟ್’ನಲ್ಲಿ ಶತಕ ಸಿಡಿಸಿದ್ದ ಈ ಸ್ಫೋಟಕ ಬ್ಯಾಟ್ಸ್’ಮನ್ Team Indiaಗೆ ಕೈಕೊಟ್ಟು ವಿದೇಶಿ ತಂಡಕ್ಕೆ ಸೇರ್ಪಡೆ…!  title=
Prithvi Shaw

Prithvi Shaw Joins Northamptonshire County Cricket Club: ಮುಂಬರುವ ತಿಂಗಳುಗಳಲ್ಲಿ ಭಾರತೀಯ ಕ್ರಿಕೆಟ್ ತಂಡವು ಅನೇಕ ನಿರ್ಣಾಯಕ ಪಂದ್ಯಗಳಲ್ಲಿ ಆಡಬೇಕಿದೆ. ಇದೇ ಕಾರಣದಿಂದ ಅನೇಕ ಕ್ರಿಕೆಟಿಗರು ಮೈದಾನದಲ್ಲಿ ನಿರಂತರವಾಗಿ ಬೆವರು ಸುರಿಸುವುದನ್ನು ಕಾಣಬಹುದು. ಆದರೆ, ಇನ್ನೂ ಕೆಲವು ಕ್ರಿಕೆಟಿಗರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ಇದೀಗ ಆಯ್ಕೆಗಾರರು ನಿರಂತರವಾಗಿ ನಿರ್ಲಕ್ಷಿಸುತ್ತಿದ್ದ ಕಾರಣ ಟೀಂ ಇಂಡಿಯಾದ ಆಟಗಾರನೊಬ್ಬ ಭಾರತ ಬಿಟ್ಟು ಬೇರೆ ತಂಡದೊಂದಿಗೆ ಆಡಲು ವಿದೇಶಕ್ಕೆ ತೆರಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಜಾತಕದಲ್ಲಿ ಗಜಕೇಸರಿ ಯೋಗ: ಈ ಜನರಿಗೆ ಐಷಾರಾಮಿ ಬದುಕು ಪ್ರಾಪ್ತಿ-ರಾಜರಂತೆ ಜೀವನ ನಡೆಸುವರು..!

ಟೀಂ ಇಂಡಿಯಾದಲ್ಲಿ ಸಾಕಷ್ಟು ದಿನಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಪೃಥ್ವಿ ಶಾ ಭರ್ಜರಿ ಹೆಜ್ಜೆ ಇಟ್ಟಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಆಡಿದ ನಂತರ ಅವರು ಕೌಂಟಿ ಚಾಂಪಿಯನ್‌ಶಿಪ್‌ ಗೆ ತೆರಳಲು ನಿರ್ಧರಿಸಿದ್ದಾರೆ. ಆದರೆ, ಸದ್ಯಕ್ಕೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

23ರ ಹರೆಯದ ಪೃಥ್ವಿ ಶಾ ಕೌಂಟಿಯಲ್ಲಿ ನಾರ್ಥಾಂಪ್ಟನ್‌ ಶೈರ್ ತಂಡದ ಪರ ಆಡಲಿದ್ದಾರೆ. ಅವರು ಈ ತಂಡದೊಂದಿಗೆ ಟೈ ಅಪ್ ಮಾಡಿಕೊಂಡಿದ್ದಾರೆ. ಅವರ ಅಧಿಕೃತ ಘೋಷಣೆ ಕೂಡ ಶೀಘ್ರದಲ್ಲೇ ನಡೆಯಲಿದೆ. ಕೌಂಟಿಯ ಪ್ರಸಕ್ತ ಋತುವಿನ ಉಳಿದ ಪಂದ್ಯಗಳಲ್ಲಿ ಅವರು ಈ ಕ್ಲಬ್‌ ಗಾಗಿ ಆಡುವುದನ್ನು ಕಾಣಬಹುದು. ಕುತೂಹಲಕಾರಿಯಾಗಿ, ಕೌಂಟಿಯಲ್ಲಿ ಪೃಥ್ವಿ ಶಾ ಆಡಲಿರುವ ಕ್ಲಬ್, ಅನುಭವಿ ಸ್ಪಿನ್ನರ್‌ ಗಳಾದ ಬಿಷನ್ ಸಿಂಗ್ ಬೇಡಿ, ಅನಿಲ್ ಕುಂಬ್ಳೆ ಮತ್ತು ಸೌರವ್ ಗಂಗೂಲಿ ಕೂಡ ಅದರ ಭಾಗವಾಗಿದ್ದಾರೆ.

ಪೃಥ್ವಿ ಕೌಂಟಿ ಕ್ರಿಕೆಟ್‌ ನಲ್ಲಿ ಮತ್ತು ರಾಯಲ್ ಲಂಡನ್ ಏಕದಿನ ಕಪ್‌ ನಲ್ಲಿ 4 ದಿನಗಳ ಪಂದ್ಯಗಳನ್ನು ಆಡಲಿದ್ದಾರೆ. ಇದಕ್ಕೂ ಮುನ್ನ ಅವರು ದುಲೀಪ್ ಟ್ರೋಫಿ ಪಂದ್ಯದಲ್ಲಿ ಕೇಂದ್ರ ವಲಯದ ವಿರುದ್ಧ ಪಶ್ಚಿಮ ವಲಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಜುಲೈ 12 ರಿಂದ ದುಲೀಪ್ ಟ್ರೋಫಿಯ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಮನಿ ಪ್ಲಾಂಟ್ ಬೇರಿಗೆ ಈ ವಸ್ತುವನ್ನು ಕಟ್ಟಿದರೆ ಮನೆಯಲ್ಲಿ ತುಂಬಿ ತುಳುಕುವುದು ಸಂಪತ್ತು!

ಪೃಥ್ವಿ ಇದುವರೆಗೆ 5 ಟೆಸ್ಟ್, 6 ODI ಮತ್ತು ಒಂದು T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ಶತಕ ಸೇರಿದಂತೆ 339 ರನ್ ಸೇರಿಸಿದ್ದಾರೆ. ODIಗಳಲ್ಲಿ ಅವರು 31.50 ಸರಾಸರಿಯಲ್ಲಿ 189 ರನ್ ಗಳಿಸಿದ್ದಾರೆ. ಅವರು ಕೊನೆಯ ಬಾರಿಗೆ 2021 ರಲ್ಲಿ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ ಗಳ ಸರಣಿಯಲ್ಲಿ ಭಾಗವಹಿಸಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News