Mary Kom: ವಿಶ್ವ ಚಾಂಪಿಯನ್‌ಶಿಪ್‌ನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಮೇರಿ ಕೋಮ್!

Mary Kom: ಮೇರಿ ಕೋಮ್ ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದು, ಯುವಜನತೆಗೆ ಅವಕಾಶ ಕಲ್ಪಿಸಲಾಗಿದೆ. ಮೇರಿ ಕೋಮ್ 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. 

Written by - Zee Kannada News Desk | Last Updated : Mar 6, 2022, 06:49 PM IST
  • ಮೇರಿ ಕೋಮ್ ಅವರ ಮಹತ್ವದ ನಿರ್ಧಾರ
  • ಏಷ್ಯನ್ ಗೇಮ್ಸ್‌ನಲ್ಲಿ ಆಡದಿರಲು ನಿರ್ಧಾರ
  • 6 ಬಾರಿ ವಿಶ್ವ ಚಾಂಪಿಯನ್ ಆದ ಮೇರಿ ಕೋಮ್
Mary Kom: ವಿಶ್ವ ಚಾಂಪಿಯನ್‌ಶಿಪ್‌ನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಮೇರಿ ಕೋಮ್! title=
ಮೇರಿ ಕೋಮ್

ನವದೆಹಲಿ: ಬಾಕ್ಸರ್ ಮೇರಿ ಕೋಮ್ (Mary Kom) ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ (Asian Games) ಆಡದಿರಲು ನಿರ್ಧರಿಸಿದ್ದು, ಯುವಜನತೆಗೆ ಅವಕಾಶ ಕಲ್ಪಿಸಿದ್ದಾರೆ. ಆರು ಬಾರಿಯ ವಿಶ್ವ ಚಾಂಪಿಯನ್ ಬರ್ಮಿಂಗ್ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತನ್ನ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಲು ಬಯಸಿದ್ದಾರೆ.

ಇದನ್ನೂ ಓದಿ: IND vs SL: ರವೀಂದ್ರ ಜಡೇಜಾ ಆಲ್ರೌಂಡ್ ಪರಾಕ್ರಮಕ್ಕೆ ಬೆಚ್ಚಿದ ಸಿಂಹಳಿಯರು...!

ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ (Boxing) ಚಾಂಪಿಯನ್‌ಶಿಪ್ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಮೇ 6 ರಿಂದ ಮೇ 21 ರವರೆಗೆ ನಡೆಯಲಿದೆ. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು 2022 ರ ಏಷ್ಯನ್ ಗೇಮ್ಸ್ ಜುಲೈ 28 ರಿಂದ ಸೆಪ್ಟೆಂಬರ್ 10 ರ ವರೆಗೆ ಪ್ರಾರಂಭವಾಗಲಿದೆ. 

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (BIF)ಗೆ ನೀಡಿದ ಸಂದೇಶದಲ್ಲಿ ಮೇರಿ ಕೋಮ್, "ಯುವ ಪೀಳಿಗೆಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಹೆಸರು ಮಾಡಲು ಮತ್ತು 'ಎಕ್ಸ್‌ಪೋಸರ್' ಪಡೆಯಲು ಅವಕಾಶವನ್ನು ನೀಡಲು ನಾನು ಈ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ. ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಗಳ ಮೇಲೆ ಮಾತ್ರ ನನ್ನ ಗಮನವನ್ನು ಕೇಂದ್ರೀಕರಿಸಲು ಬಯಸುತ್ತೇನೆ." ಎಂದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಎಲ್ಲಾ 12 ವಿಭಾಗಗಳ ಆಯ್ಕೆ ಟ್ರಯಲ್ಸ್ ಸೋಮವಾರ ಆರಂಭವಾಗಿ ಬುಧವಾರ ಕೊನೆಗೊಳ್ಳಲಿದೆ. ಪ್ರಯೋಗಗಳಲ್ಲಿ IBA ಯಂತೆಯೇ ಇರುವ ಏಷ್ಯನ್ ಗೇಮ್ಸ್ ತೂಕ ವಿಭಾಗಗಳೂ ಸೇರಿವೆ. 

BFI ಅಧ್ಯಕ್ಷ ಅಜಯ್ ಸಿಂಗ್ ಹೇಳಿಕೆಯಲ್ಲಿ, "ಮೇರಿ ಕೋಮ್ ಕಳೆದ ಎರಡು ದಶಕಗಳಿಂದ ಭಾರತೀಯ ಬಾಕ್ಸಿಂಗ್‌ನ ಮುಖ್ಯಸ್ಥರಾಗಿದ್ದಾರೆ ಮತ್ತು ಜಗತ್ತಿನಾದ್ಯಂತ ಅಸಂಖ್ಯಾತ ಬಾಕ್ಸರ್‌ಗಳು ಮತ್ತು ಕ್ರೀಡಾಪಟುಗಳಿಗೆ (Sportsmen) ಸ್ಫೂರ್ತಿ ನೀಡಿದ್ದಾರೆ. ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ ಮತ್ತು ಇತರ ಬಾಕ್ಸರ್‌ಗಳಿಗೆ ಅವಕಾಶ ನೀಡುವುದು ಅವರ ಚಾಂಪಿಯನ್ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ." ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್ ಟೂರ್ನಿಯ ಪೂರ್ಣ ವೇಳಾಪಟ್ಟಿ ಬಿಡುಗಡೆ...!

ಏಷ್ಯನ್ ಗೇಮ್ಸ್‌ಗಾಗಿ ಪುರುಷರ ಆಯ್ಕೆ ಟ್ರಯಲ್ಸ್ ಮೇ ತಿಂಗಳಲ್ಲಿ ನಡೆಯಲಿದ್ದು, ಜೂನ್‌ನಲ್ಲಿ ಪುರುಷ ಮತ್ತು ಮಹಿಳೆಯರ ಕಾಮನ್‌ವೆಲ್ತ್ ಗೇಮ್ಸ್ (Common wealth games) ಟ್ರಯಲ್ಸ್ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News