ನವದೆಹಲಿ: ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಸಹಿತ 222 ರನ್‌ಗಳ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಮೊದಲ ಇನಿಂಗ್ಸ್ ನಲ್ಲಿ ರವಿಂದ್ರ ಜಡೇಜಾ (Ravindra jadeja) ಅವರ ಅಜೇಯ 175 ರನ್ ಹಾಗೂ ರಿಶಬ್ ಪಂತ್ ಅವರ 96 ರನ್ ಗಳ ನೆರವಿನಿಂದ ಭಾರತ ತಂಡವು ಎಂಟು ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಕೇವಲ 174 ರನ್ ಗಳಿಗೆ ಸರ್ವಪತನವನ್ನು ಕಂಡಿತು.ಭಾರತದ ಪರವಾಗಿ ರವಿಂದ್ರ ಜಡೇಜಾ ಐದು ವಿಕೆಟ್ ಹಾಗೂ ಬುಮ್ರಾ ಹಾಗೂ ಅಶ್ವಿನ್ ಅವರು ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಭಾರತದ ಪರ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ನಾಲ್ಕು ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣಕರ್ತರಾದರು. ಇದೇ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ (Ravichandran Ashwin) ಅವರು ಕಪಿಲ್ ದೇವ್ ಅವರ 434 ವಿಕೆಟ್ ಗಳ ದಾಖಲೆಯನ್ನು ಹಿಂದಿಕ್ಕುವ ಮೂಲಕ ಅನಿಲ್ ಕುಂಬ್ಳೆ ನಂತರ ಟೆಸ್ಟ್‌ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
Huge victory!
India win by an innings and 222 runs to take a 1-0 series lead against Sri Lanka 🎉#WTC23 | #INDvSL | https://t.co/mo5BSRmFq2 pic.twitter.com/76hsYd9yKF
— ICC (@ICC) March 6, 2022
ಇದನ್ನೂ ಓದಿ: India vs SL 1st Test: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ಆರ್.ಅಶ್ವಿನ್
The latest #WTC23 standings after India’s big win in the first #INDvSL Test 👀 pic.twitter.com/ECmTOqQNvl
— ICC (@ICC) March 6, 2022
ಇದನ್ನೂ ಓದಿ: Sachin ಇರುವ ಎಲೀಟ್ ಗ್ರೂಪ್ ಗೆ Mithali Raj, ಇಲ್ಲಿದೆ ಮಿಥಾಲಿಯ ವಿಶಿಷ್ಟ ವಿಶ್ವ ದಾಖಲೆ
ಫಾಲೋಆನ್ ತೆಗೆದುಕೊಂಡ ಶ್ರೀಲಂಕಾ ತಂಡವು ಎರಡನೇ ಇನಿಂಗ್ಸ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಮಾಡಲಿಲ್ಲ, ನಿರೋಶನ್ ದಿಕ್ವೆಲಾ ಅವರು 51 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಕೂಡ 30 ರ ಗಡಿಯನ್ನು ದಾಟಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡವು 178 ರನ್ ಗಳಿಗೆ ಆಲೌಟ್ ಆಯಿತು.ಈಗ ಭಾರತ ತಂಡವು ಇನಿಂಗ್ಸ್ ಸಹಿತ 222 ರನ್ ಗಳ ಅಂತರದಿಂದ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.