ಕ್ರಿಸ್ ಲಿನ್ ಭರ್ಜರಿ ಅರ್ಧಶತಕ, ಕೊಲ್ಕತ್ತಾ 161-8

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕ್ರಿಸ್ ಲೀನ್ ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ.

Last Updated : Apr 14, 2019, 05:57 PM IST
ಕ್ರಿಸ್ ಲಿನ್ ಭರ್ಜರಿ ಅರ್ಧಶತಕ, ಕೊಲ್ಕತ್ತಾ 161-8 title=
Photo courtesy: Twitter

ನವದೆಹಲಿ: ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕ್ರಿಸ್ ಲೀನ್ ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ.

ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಇಳಿದ ಕ್ರೀಸ್ ಲೈನ್ ಕೇವಲ 51 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಆರು ಸಿಕ್ಸರ್ ಗಳ ನೆರವಿನಿಂದ 82 ರನ್ ಗಳಿಸಿದರು.ಇನ್ನೊಂದೆಡೆಗೆ ಸುನಿಲ್ ನರೈನ್ ಕೇವಲ 2 ರನ್ ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದರು.ಇದಾದ ನಂತರ ಬಂದಂತಹ ನಿತೀಶ್ ರಾಣಾ 21 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರು ಕೂಡ 20 ರ ಗಡಿ ದಾಟಲಿಲ್ಲ.

ಇನ್ನೊಂದೆಡೆಗೆ ಇಮ್ರಾನ್ ತಾಹಿರ್ ಅವರು ನಾಲ್ಕು ವಿಕೆಟ್ ಕಬಳಿಸುವ ಮೂಲಕ ಕೊಲ್ಕತ್ತಾ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
 

Trending News