ಪುರುಷರ ಕ್ರಿಕೆಟ್ ಗೆ ಅಂಪೈರ್ ಆಗುತ್ತಿರುವ ಈ ಮಹಿಳೆಯ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾನ್ಯವಾಗಿ ಪುರುಷರ ಕ್ರಿಕೆಟ್ ಆಟದಲ್ಲಿ ಪುರುಷ ಅಂಪೈರ್ ಗಳನ್ನು ನೋಡುವುದು ಸಾಮಾನ್ಯದ ಸಂಗತಿ. ಈಗ  ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪುರುಷರ ಕ್ರಿಕೆಟ್ ಆಟದಲ್ಲಿ ಅಂಪೈರ್ ಆಗಲು ಹೊರಟಿದ್ದಾರೆ. ಹೌದು ಹಾಗಾದರೆ ಅವರು ಯಾರಂತೀರಾ ? ಅವರೇ ಕ್ಲೇರ್ ಪೊಲೊಸಾಕ್.

Last Updated : Apr 27, 2019, 04:50 PM IST
ಪುರುಷರ ಕ್ರಿಕೆಟ್ ಗೆ ಅಂಪೈರ್ ಆಗುತ್ತಿರುವ ಈ ಮಹಿಳೆಯ ಬಗ್ಗೆ ನಿಮಗೆಷ್ಟು ಗೊತ್ತು? title=
Photo courtesy: Twitter

ನವದೆಹಲಿ: ಸಾಮಾನ್ಯವಾಗಿ ಪುರುಷರ ಕ್ರಿಕೆಟ್ ಆಟದಲ್ಲಿ ಪುರುಷ ಅಂಪೈರ್ ಗಳನ್ನು ನೋಡುವುದು ಸಾಮಾನ್ಯದ ಸಂಗತಿ. ಈಗ  ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪುರುಷರ ಕ್ರಿಕೆಟ್ ಆಟದಲ್ಲಿ ಅಂಪೈರ್ ಆಗಲು ಹೊರಟಿದ್ದಾರೆ. ಹೌದು ಹಾಗಾದರೆ ಅವರು ಯಾರಂತೀರಾ ? ಅವರೇ ಕ್ಲೇರ್ ಪೊಲೊಸಾಕ್.

ಈಗ ಕ್ಲೇರ್ ಪೊಲೊಸಾಕ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಪುರುಷರ ಏಕದಿನದ ಪಂದ್ಯದಲ್ಲಿ ಮೊದಲ ಮಹಿಳಾ ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಒಮನ್ ಮತ್ತು ನಮೀಬಿಯಾ ನಡುವಿನ ವಿಶ್ವ ಕ್ರಿಕೆಟ್ ಲೀಗ್ ವಿಭಾಗ 2 ಪಂದ್ಯದ ಫೈನಲ್ನಲ್ಲಿ 31 ವರ್ಷದ ಈ ಅಂಪೈರ್ ಮೊದಲ ಬಾರಿಗೆ ಲಿಂಗ ತಾರತಮ್ಯದ ಗೋಡೆಯನ್ನು ಮುರಿದಿದ್ದಾರೆ. ಇದೇ ವೇಳೆ ಇದೆಲ್ಲವೂ ಕೂಡ ತಮ್ಮ ಪತಿ ಬೆಂಬಲದಿಂದ ಎಂದು ಕ್ಲೇರ್ ಪೊಲೊಸಾಕ್ ಹೇಳಿಕೊಂಡಿದ್ದಾರೆ.

2017 ರಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ದೇಶಿಯ ಪಂದ್ಯದಲ್ಲಿ ಮೊದಲ ಮಹಿಳಾ ಅಂಪೈರ್ ಆಗಿ ಪೊಲೊಸಾಕ್  ಕಾರ್ಯನಿರ್ವಹಿಸಿದ್ದರು.
 

Trending News