Cheteshwar Pujara Career: ಭಾರತ ಕ್ರಿಕೆಟ್ ತಂಡಕ್ಕೆ ಮುಂದಿನ ತಿಂಗಳು ಅತ್ಯಂತ ಮಹತ್ವದ್ದಾಗಿದೆ. ಟೀಂ ಇಂಡಿಯಾ ಡಿಸೆಂಬರ್’ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಟಿ20, 3 ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಡಿಸೆಂಬರ್ 10ರಿಂದ ಈ ಪ್ರವಾಸ ಆರಂಭವಾಗಲಿದೆ.
ಟಿ20 ಮತ್ತು ಏಕದಿನ ನಂತರ ಟೆಸ್ಟ್ ಸರಣಿ ನಡೆಯಲಿದೆ. 35ರ ಹರೆಯದ ಚೇತೇಶ್ವರ್ ಪೂಜಾರ ಟೆಸ್ಟ್ ತಂಡಕ್ಕೆ ಮರಳಲು ಸಾಧ್ಯವೇ ಎಂಬುದು ಸದ್ಯದ ದೊಡ್ಡ ಪ್ರಶ್ನೆ. ಈ ವರ್ಷ ವೆಸ್ಟ್ ಇಂಡೀಸ್ ಪ್ರವಾಸದಿಂದ ಪೂಜಾರ ಅವರನ್ನು ಕೈಬಿಡಲಾಗಿತ್ತು. ಇದಾದ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್’ನಲ್ಲಿ ಆಡುವ ಅವಕಾಶ ಸಿಕ್ಕರೂ ಅಲ್ಲಿಯೂ ವಿಫಲರಾದರು. ಸತತ ಸೋಲುಗಳ ನಂತರ ಈಗ ಪೂಜಾರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೈಟಾನ್ಸ್ ತೊರೆಯುವುದು ಖಚಿತ! ಈ ಪ್ಲೇಯರ್’ಗೆ ಸಿಗಲಿದೆ ಗುಜರಾತ್ ತಂಡದ ನಾಯಕತ್ವ
ಒಂದು ಕಾಲದಲ್ಲಿ ಟೀಂ ಇಂಡಿಯಾದ ಟೆಸ್ಟ್ ತಂಡದ 'ಗೋಡೆ' ಎಂದೇ ಕರೆಸಿಕೊಂಡಿದ್ದ ಚೇತೇಶ್ವರ ಪೂಜಾರ ಇಂದು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಪೂಜಾರ ಬಗ್ಗೆ ಹೇಳುವುದಾದರೆ, ಜೂನ್’ನಲ್ಲಿ ಓವಲ್’ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್’ನ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್’ನಲ್ಲಿ 14 ರನ್ ಗಳಿಸಿದರು, ಆದರೆ ಎರಡನೇ ಇನ್ನಿಂಗ್ಸ್’ನಲ್ಲಿ 27 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಈ ಟೆಸ್ಟ್’ನಲ್ಲಿ ಭಾರತವು ಅವರಿಂದ ಹೆಚ್ಚಿನ ಆಟವನ್ನು ನಿರೀಕ್ಷಿಸಿತ್ತು. ಆದರೆ ಅದರಲ್ಲೂ ವಿಫಲರಾದರು. ಇದಾದ ಬಳಿಕ ಪೂಜಾರ ಕೌಂಟಿಗಾಗಿ ಇಂಗ್ಲೆಂಡ್’ಗೆ ತೆರಳಿದ್ದರು. ವಿದೇಶದಲ್ಲೂ ಅವರ ಬ್ಯಾಟ್ ಮೌನವಾಗಿತ್ತು. ಭಾರತ ಪರ 103 ಟೆಸ್ಟ್ ಪಂದ್ಯಗಳನ್ನಾಡಿರುವ ಪೂಜಾರ 19 ಶತಕಗಳ ನೆರವಿನಿಂದ 7195 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಇತಿಹಾಸ ಸೃಷ್ಟಿಗೆ ಒಂದೇ ಹೆಜ್ಜೆ: 2ನೇ ಟಿ20 ಗೆದ್ದರೆ ಈ ಸಾಧನೆ ಮಾಡಿದ ಮೊದಲ ತಂಡವಾಗುತ್ತೆ ಭಾರತ
ಕೌಂಟಿಯಿಂದ ಹಿಂದಿರುಗಿದ ನಂತರ, ಚೇತೇಶ್ವರ ಪೂಜಾರ ಕಳೆದ ತಿಂಗಳು ಅಂದರೆ ಅಕ್ಟೋಬರ್’ನಲ್ಲಿ ಇರಾನಿ ಕಪ್ ಫೈನಲ್’ನಲ್ಲಿ ಭಾಗವಹಿಸಿದರು, ಅಲ್ಲಿ ಸೌರಾಷ್ಟ್ರ ಪರ ಆಡುವಾಗ ಮೊದಲ ಇನ್ನಿಂಗ್ಸ್ನಲ್ಲಿ 29 ರನ್ ಮತ್ತು ರೆಸ್ಟ್ ಆಫ್ ಇಂಡಿಯಾ ವಿರುದ್ಧ ಎರಡನೇ ಇನ್ನಿಂಗ್ಸ್’ನಲ್ಲಿ 7 ರನ್ ಗಳಿಸಿದರು. ಅಂದರೆ ಇಲ್ಲಿಯೂ ಪೂಜಾರ ಬ್ಯಾಟ್’ನಿಂದ ಸಂಪೂರ್ಣ ವಿಫಲರಾದರು. ಪೂಜಾರ ತಂಡಕ್ಕೆ ಮರಳಲು ಮತ್ತೊಂದು ಸುವರ್ಣಾವಕಾಶವಿದೆ. ಆದರೆ ಈ ಹಾದಿ ಅವರಿಗೆ ಸುಲಭವಲ್ಲ. ಪ್ರಸ್ತುತ, ದೇಶದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಪೂಜಾರ ಆಡುತ್ತಿದ್ದಾರೆ. ಈ 50 ಓವರ್ಗಳ ಟೂರ್ನಿಯಲ್ಲಿ ಅವರು ನಿರಂತರವಾಗಿ ಕೆಲವು ದೊಡ್ಡ ಇನಿಂಗ್ಸ್’ಗಳನ್ನು ಆಡಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/-l9UZYUp33o?si=_K0khSS1BDeQ7ypt
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ