Happy Birthday Rohit Sharma: ದ್ವಿಶತಕ ವೀರ ರೋಹಿತ್‌ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ

ಶತಕ ವೀರನ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ರೋಹಿತ್‌ ಶರ್ಮಾ ಜನಿಸಿದ್ದು, 1987ರ ಏಪ್ರಿಲ್‌ 30ರಂದು. ಮಹಾರಾಷ್ಟ್ರದ ನಾಗ್ಪುರದ ಬನ್ಸೋಡಾದಲ್ಲಿ ಜನಿಸಿದ ಅವರು ಪೂರ್ಣಿಮಾ ಶರ್ಮಾ ಮತ್ತು ಗುರುನಾಥ್‌ ದಂಪತಿಯ ಪ್ರೀತಿಯ ಪುತ್ರ. 

Written by - Bhavishya Shetty | Last Updated : Apr 30, 2022, 09:48 AM IST
  • ಇಂದು ಕ್ರಿಕೆಟರ್‌ ರೋಹಿತ್‌ ಶರ್ಮಾ ಹುಟ್ಟುಹಬ್ಬ
  • 35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕ್ರಿಕೆಟಿಗ
  • ದ್ವಿಶತಕ ವೀರನಿಗೆ ಹುಟ್ಟುಹಬ್ಬದ ಶುಭಾಶಯಗಳು
Happy Birthday Rohit Sharma: ದ್ವಿಶತಕ ವೀರ ರೋಹಿತ್‌ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ title=
Rohit Sharma

ನವದೆಹಲಿ: ಭಾರತ ಕ್ರಿಕೆಟ್‌ ಟೀಂನ ಹಿಟ್‌ಮ್ಯಾನ್‌ ಎಂದೇ ಪ್ರಖ್ಯಾತಿ ಗಳಿಸಿರುವ ರೋಹಿತ್‌ ಶರ್ಮಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ದಾಖಲೆ ವೀರನಿಗೆ ಶುಭಾಶಯಗಳು. 

ಇದನ್ನು ಓದಿ: ನಿಮ್ಮ ಅಧಿನಾಯಕಿ ಮತ್ತು ಯುವರಾಜ ಕನ್ನಡ ಮಾತನಾಡುತ್ತಾರೆಯೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಶತಕ ವೀರನ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ರೋಹಿತ್‌ ಶರ್ಮಾ ಜನಿಸಿದ್ದು, 1987ರ ಏಪ್ರಿಲ್‌ 30ರಂದು. ಮಹಾರಾಷ್ಟ್ರದ ನಾಗ್ಪುರದ ಬನ್ಸೋಡಾದಲ್ಲಿ ಜನಿಸಿದ ಅವರು ಪೂರ್ಣಿಮಾ ಶರ್ಮಾ ಮತ್ತು ಗುರುನಾಥ್‌ ದಂಪತಿಯ ಪ್ರೀತಿಯ ಪುತ್ರ. ಇನ್ನು ರೋಹಿತ್‌ ಅವರು ಮಾರ್ಚ್ 2005 ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ದಿಯೋಧರ್ ಟ್ರೋಫಿಯಲ್ಲಿ ಸೆಂಟ್ರಲ್‌ ಝೋನ್‌ ವಿರುದ್ಧ ಪಶ್ಚಿಮ ವಲಯದ ಲಿಸ್ಟ್ ʼಎʼಗೆ ಪಾದಾರ್ಪಣೆ ಮಾಡಿದರು. ತನ್ನ ಚೊಚ್ಚಲ ಪಂದ್ಯ ಉದಯ್‌ಪುರದ ಉತ್ತರ ವಲಯ ವಿರುದ್ಧ 123 ಎಸೆತಗಳಲ್ಲಿ 142 ರನ್ ಗಳಿಸಿ ಸಾಧನೆ ಮಾಡಿದ್ದರು. 

ಬಲಗೈ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನವೆಂಬರ್‌ 2013ರಂದು ತಮ್ಮ ಟೆಸ್ಟ್‌ ಕ್ರಿಕೆಟ್‌ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸದ್ಯ ದಾಖಲೆ ವೀರ ಎಂದೇ ಖ್ಯಾತಿ ಪಡೆದ ರೋಹಿತ್‌ ಶರ್ಮಾ ಟೀಂ ಇಂಡಿಯಾದ 3 ಮಾದರಿಯ ನಾಯಕರಾಗಿದ್ದಾರೆ.

ರೋಹಿತ್‌ ಶರ್ಮಾ ಪಂದ್ಯಗಳ ವಿವರ:
ಶರ್ಮಾ ಇದುವರೆಗೆ 228 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 299 ಶತಕ ಮತ್ತು 44 ಅರ್ಧಶತಕ ಸೇರಿ ಒಟ್ಟು 9,283 ರನ್ ಕಲೆಹಾಕಿದ್ದಾರೆ. 3 ಬಾರಿ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ ರೋಹಿತ್‌. ಇನ್ನು ಏಕದಿನ ಪಂದ್ಯದಲ್ಲಿ 264 ರನ್ ಗಳಿಸುವ ಮೂಲಕ ವಿಶ್ವದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ ಅತೀಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಜೊತೆಗೆ ಈವರೆಗೆ 44 ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಗಳನ್ನಾಡಿರುವ ಶರ್ಮಾ 46.60 ರನ್‌ರೇಟ್‌ನಲ್ಲಿ 3,076 ರನ್‌ಗಳನ್ನು ಕಲೆಹಾಕಿದ್ದಾರೆ.  ಇದರಲ್ಲಿ 8 ಶತಕ ಮತ್ತು 14 ಅರ್ಧಶತಕ. ಟೆಸ್ಟ್‌ನಲ್ಲಿ 212 ರನ್‌ ಕಲೆ ಹಾಕಿದ್ದು, ಇದು ಅವರ ಬೆಸ್ಟ್‌ ಸ್ಕೋರ್‌. 

ಐಪಿಎಲ್‌ ಮತ್ತು ಶರ್ಮಾ: 
ಸದ್ಯ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಆದರೆ ಕಳೆದ ಐಪಿಎಲ್‌ ಟೂರ್ನಿಗಳಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಪಟ್ಟ ಪಡೆದ ತಂಡವಾಗಿ ಮುಂಬೈ ಇಂಡಿಯನ್ಸ್‌ ಹೊರಹೊಮ್ಮಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 221 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ನಲ್ಲಿ ಆಡಿದೆ. ಇನ್ನು ಶರ್ಮಾ 1 ಶತಕ ಮತ್ತು 40 ಅರ್ಧಶತಕದ ಸಹಾಯದಿಂದ ಒಟ್ಟು 5764 ರನ್ ಗಳಿಸಿದ್ದು,. 109 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

ಇದನ್ನು ಓದಿ: RCB vs GT: ಇಂದು ಬೆಂಗಳೂರು - ಗುಜರಾತ್‌ ಹಣಾಹಣಿ : ಇಲ್ಲಿದೆ ಪಿಚ್‌ ರಿಪೋರ್ಟ್‌

ವಿಸ್ಡನ್‌ ವರ್ಷದ ಕ್ರಿಕೆಟರ್‌ ಪ್ರಶಸ್ತಿ ಪಡೆದ ರೋಹಿತ್‌: 
ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಸೇರಿದಂತೆ ಐವರು ಕ್ರಿಕೆಟಿಗರು 2022ರ ವಿಸ್ಡನ್‌ ವರ್ಷದ ಕ್ರಿಕೆಟರ್‌ ಗೌರವ ಪಡೆದಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್‌ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರೋಹಿತ್‌ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಐಪಿಎಲ್‌ 2022ರಲ್ಲಿ ಸಾಧನೆ: 
ಟಿ-20 ಕ್ರಿಕೆಟ್‌ ಮಾದರಿಯಲ್ಲಿ ರೋಹಿತ್‌ ಮತ್ತೊಂದು ಸಾಧನೆ ಮಾಡಿದ್ದರು, 150 ಕ್ಯಾಚ್‌ ಹಿಡಿದಿದ್ದಾರೆ. ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಫೀಲ್ಡರ್ ಹಾಗೂ ಒಟ್ಟಾರೆಯಾಗಿ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. 

ಒಟ್ಟಾರೆ ದಾಖಲೆ ವೀರ, ಶತಕ ವೀರ ಎಂದೇ ಹೆಸರುವಾಸಿಯಾಗಿರುವ ರೋಹಿತ್‌ ಶರ್ಮಾ ಇಂದು ತಮ್ಮ 35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನಷ್ಟು ಸಾಧನೆ ಮಾಡುವ ಮೂಲಕ ದೇಶದ ಕೀರ್ತಿಯನ್ನು ಪಸರಿಸಲಿ ಎಂಬುದೇ ನಮ್ಮ ಆಶಯ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News