ಬೊಜ್ಜಿನ ಸಮಸ್ಯೆಯಿಂದ Team Indiaದಿಂದ ಹೊರಬಿದ್ದ ಸ್ಟಾರ್ ಕ್ರಿಕೆಟರ್’ಗೆ ಕಾಶ್ಮೀರಿ ಯುವತಿ ಜೊತೆ ಕಲ್ಯಾಣ!

Sarfaraz Khan Marriage: ಸರ್ಫರಾಜ್ ಖಾನ್ ಮದುವೆಯ ಕೆಲವು ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಸರ್ಫರಾಜ್ ಖಾನ್ ಭಾರತದ ದೇಶೀಯ ಕ್ರಿಕೆಟ್‌’ನ ಸ್ಟಾರ್ ಆಟಗಾರ.

Written by - Bhavishya Shetty | Last Updated : Aug 7, 2023, 02:00 PM IST
    • ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
    • ಸರ್ಫರಾಜ್ ರೊಮಾನಾ ಜಹೂರ್ ಎಂಬವರನ್ನು ಮದುವೆಯಾಗಿದ್ದಾರೆ.
    • ಇವರ ಮದುವೆ ಕಾಶ್ಮೀರದ ಶೋಪಿಯಾ ಜಿಲ್ಲೆಯ ಪಾಶ್ಪೋರಾ ಗ್ರಾಮದಲ್ಲಿ ನಡೆದಿದೆ.
ಬೊಜ್ಜಿನ ಸಮಸ್ಯೆಯಿಂದ Team Indiaದಿಂದ ಹೊರಬಿದ್ದ ಸ್ಟಾರ್ ಕ್ರಿಕೆಟರ್’ಗೆ ಕಾಶ್ಮೀರಿ ಯುವತಿ ಜೊತೆ ಕಲ್ಯಾಣ!  title=
Sarfaraz Khan marriage

Cricketer Sarfaraz Khan: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಜನಿಸಿದ 25 ವರ್ಷದ ಸರ್ಫರಾಜ್, ಕಾಶ್ಮೀರಿ ಯುವತಿಯನ್ನು ಮದುವೆಯಾಗಿದ್ದಾರೆ. ಸರ್ಫರಾಜ್ ರೊಮಾನಾ ಜಹೂರ್ ಎಂಬವರನ್ನು ಮದುವೆಯಾಗಿದ್ದಾರೆ. ಇವರ ಮದುವೆ ಕಾಶ್ಮೀರದ ಶೋಪಿಯಾ ಜಿಲ್ಲೆಯ ಪಾಶ್ಪೋರಾ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಈ ಐದು ಬ್ಯಾಂಕ್ ಗಳಲ್ಲಿ SB Account ಮೇಲೆಯೇ ಸಿಗುತ್ತಿದೆ ಶೇ.7.5 ರಷ್ಟು ಬಡ್ಡಿ!

ಸರ್ಫರಾಜ್ ಖಾನ್ ಮದುವೆಯ ಕೆಲವು ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಸರ್ಫರಾಜ್ ಖಾನ್ ಭಾರತದ ದೇಶೀಯ ಕ್ರಿಕೆಟ್‌’ನ ಸ್ಟಾರ್ ಆಟಗಾರ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲೂ ಅವರು ಸದ್ದು ಮಾಡಿದ್ದಾರೆ. ಪ್ರಸ್ತುತ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಉತ್ತಮ ಪ್ರದರ್ಶನ ನೀಡಿದರೂ ಭಾರತ ತಂಡದಲ್ಲಿ ಸರ್ಫರಾಜ್ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಸರ್ಫರಾಜ್ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿಲ್ಲ. ಭಾರತೀಯ ಅಂಡರ್-19 ತಂಡಕ್ಕಾಗಿ ಕ್ರಿಕೆಟ್ ಆಡಿದ್ದಾರೆ. ಬೊಜ್ಜಿನ ಸಮಸ್ಯೆಯಿದೆ, ವರ್ತನೆ ಸರಿಯಿಲ್ಲ, ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂಬೆಲ್ಲಾ ಕಾರಣದಿಂದ ಸರ್ಫರಾಜ್’ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ. ಐಪಿಎಲ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗಾಗಿಯೂ ಆಡಿದ್ದಾರೆ.

ಇದನ್ನೂ ಓದಿ: Beauty Tips : ಎಣ್ಣೆಯುಕ್ತ ತ್ವಚೆಯ ಆರೈಕೆಗೆ ಇಲ್ಲಿವೆ ಸುಲಭ ಮನೆಮದ್ದುಗಳು..!

ಇನ್ನು ಮದುವೆಯ ಸಂದರ್ಭದಲ್ಲಿ ಸರ್ಫರಾಜ್ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರೆ, ವಧು ರೆಡ್ ಮತ್ತು ಗೋಲ್ಡನ್ ಕಲರ್ ಮಿಕ್ಸ್ಡ್ ಲೆಹೆಂಗಾವನ್ನು ಧರಿಸಿದ್ದಾರೆ. ಸ್ಟಾರ್ ಕ್ರಿಕೆಟಿಗ ಸರ್ಫರಾಜ್ ಈ ಮದುವೆಯನ್ನು ರಹಸ್ಯವಾಗಿ ಏರ್ಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಅವರ ಮದುವೆಯ ಕೆಲವು ವಿಡಿಯೋಗಳು ಮತ್ತು ಫೋಟೋಗಳು ಮುನ್ನೆಲೆಗೆ ಬಂದಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News