CSK ಪ್ಲೇಯಿಂಗ್-11ಗೆ ಈ ಮಾರಕ ಬೌಲರ್ ಎಂಟ್ರಿ !ಕಳೆದ ಸೀಸನ್ ನಲ್ಲಿ ಕಪ್ ಗೆದ್ದಿರುವ ಹಿಂದಿನ ರೂವಾರಿ ಈತ !

CSK vs GT IPL 2024: ಈ ಬೌಲರ್ ಕಳೆದ ಋತುವಿನಲ್ಲಿ  ತನ್ನ ಬೌಲಿಂಗ್ ಕಮಾಲ್ ತೋರಿದ್ದರು. ಇದೀಗ ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11ರಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. 

Written by - Ranjitha R K | Last Updated : Mar 26, 2024, 12:17 PM IST
  • ಗುಜರಾತ್ ಟೈಟಾನ್ಸ್ ಸಿಎಸ್ ಕೆ ಮುಖಾಮುಖಿ
  • ಚೆನ್ನೈ ತಂಡದಲ್ಲಿ ಈ ಬದಲಾವಣೆ
  • ಪ್ಲೇಯಿಂಗ್-11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಬೌಲರ್
CSK ಪ್ಲೇಯಿಂಗ್-11ಗೆ ಈ ಮಾರಕ ಬೌಲರ್ ಎಂಟ್ರಿ !ಕಳೆದ ಸೀಸನ್ ನಲ್ಲಿ ಕಪ್  ಗೆದ್ದಿರುವ ಹಿಂದಿನ ರೂವಾರಿ ಈತ !   title=

CSK vs GT IPL 2024: IPL 2024ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಾವಳಿಯನ್ನು ಪ್ರಾರಂಭಿಸಿತು. ಇದೀಗ ತಂಡವು ಗುಜರಾತ್ ಟೈಟಾನ್ಸ್ ಜೊತೆ ಮುಖಾಮುಖಿಯಾಗಲಿದೆ. ಗುಜರಾತ್ ಕೂಡಾ ಈ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಶುಭಮನ್ ಗಿಲ್ ಸಾರಥ್ಯದ ಗುಜರಾತ್ ತಂಡ ಮುಂಬೈ ವಿರುದ್ದ ಗೆಲುವು ಸಾಧಿಸಿದೆ. ಇದೀಗ ಗುಜರಾತ್ ತಂಡದ ಆತಂಕ ಹೆಚ್ಚಾಗಿದೆ. ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ಸ್‌ನ  ಆಕ್ರಮಣಕಾರಿ ಬೌಲರ್ ಫಿಟ್ ಆಗಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ಬೌಲರ್ ಕಳೆದ ಋತುವಿನಲ್ಲಿ  ತನ್ನ ಬೌಲಿಂಗ್ ಕಮಾಲ್ ತೋರಿದ್ದರು. ಇದೀಗ ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11ರಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. 

ಮೈದಾನದಲ್ಲಿ ಅಬ್ಬರಿಸಲು ಸಿದ್ದ : 
ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನ ಮೈದಾನದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಪತಿರಾನ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡುವುದು ಸಾಧ್ಯವಾಗಿರಲಿಲ್ಲ. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈನ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಡೆತ್ ಓವರ್‌ಗಳಲ್ಲಿ ಪತಿರಾನ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ ಎನ್ನುವುದು ವಿಶೇಷ. 

ಇದನ್ನೂ ಓದಿ : RCB ಗೆಲುವಿನ ಬಳಿಕ ಮಡದಿ-ಮಕ್ಕಳೊಂದಿಗೆ ವಿರಾಟ್ ಕೊಹ್ಲಿ ವಿಡಿಯೋ ಕಾಲ್: ವಾಚ್ ಕ್ಯೂಟ್ ವಿಡಿಯೋ

ಕಳೆದ ಋತುವಿನಲ್ಲಿ ಸಂಚಲನ :
ಕಳೆದ ವರ್ಷ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದ ಪತಿರಾನಾ ಸಿಎಸ್‌ಕೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 21 ವರ್ಷದ ಈ ವೇಗಿ ಇತ್ತೀಚೆಗೆ ಬಾಂಗ್ಲಾದೇಶ-ಶ್ರೀಲಂಕಾ ಟಿ 20 ಸರಣಿಯ ಎರಡನೇ ಪಂದ್ಯದ ವೇಳೆ ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದರು. ಪತಿರಾನ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ 12 ಪಂದ್ಯಗಳಲ್ಲಿ 8 ಎಕಾನಮಿ  ರೇಟ್ ನಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ನಂತರ ಈ ಋತುವಿನಲ್ಲಿ ಚೆನ್ನೈ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿ ಹೊರ ಹೊಮ್ಮಿದ್ದರು. 

ಯಾರಿಗೆ ಸಿಗಲಿದೆ ಕೊಕ್ ? :  
ಪತಿರಾನ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿದರೆ, ಯಾರು ತಂಡದಿಂದ ಹೊರಗುಳಿಯಬೇಕಾಗುತ್ತದೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ಮೊದಲ ಪಂದ್ಯದಲ್ಲಿ ಮುತಾಫಿಜುರ್ ರೆಹಮಾನ್ ಅದ್ಭುತ ಬೌಲಿಂಗ್ ಮಾಡಿ 4 ಬ್ಯಾಟ್ಸ್‌ಮನ್‌ಗಳನ್ನು  ಪೆವಿಲಿಯನ್ ಗೆ ಅಟ್ಟಿದ್ದರು. ಪರಿಸ್ಥಿತಿ ಹೀಗಿರುವಾಗ  ರಿತುರಾಜ್, ಪತಿರಾನ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.ಪತಿರಾನ ಅವರ ಐಪಿಎಲ್ ಅಂಕಿಅಂಶಗಳನ್ನು ನೋಡಿದರೆ, ಅವರು 14 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು  ಕಬಳಿಸಿದ್ದಾರೆ.ಈ ಪೈಕಿ 2023ರಲ್ಲಿ 12 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು  ಪಡೆದಿದ್ದಾರೆ. 

ಇದನ್ನೂ ಓದಿ : ಹೇಯ್ ಪ್ರಭು ಯೇ ಕ್ಯಾ ಹುವಾ.. ಓಡಿಬಂದು ರೋಹಿತ್‌ ಶರ್ಮಾ ಪತ್ನಿ ರಿತಿಕಾ ಅವರನ್ನ ಅಪ್ಪಿಕೊಂಡ ಹಾರ್ದಿಕ್ ಪಾಂಡ್ಯ.. ವಿಡಿಯೋ ವೈರಲ್!!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News