Umpire save David Miller video: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯನ್ನು 1-1 ಡ್ರಾದೊಂದಿಗೆ ಕೊನೆಗೊಳಿಸಿದೆ. ಈ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಸೂರ್ಯಕುಮಾರ್ ಯಾದವ್ (100 ರನ್) ಅವರ ಬಿರುಸಿನ ಶತ ಕದ ಆಧಾರದ ಮೇಲೆ 20 ಓವರ್’ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಸೂರ್ಯ ಹೊರತುಪಡಿಸಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 60 ರನ್’ಗಳ ತ್ವರಿತ ಇನ್ನಿಂಗ್ಸ್ ಆಡಿದರು.
ಇದನ್ನೂ ಓದಿ: ಧೋನಿ ಜೆರ್ಸಿ ‘ನಂಬರ್ 7’ಗೆ ನಿವೃತ್ತಿ.. ಭವಿಷ್ಯದಲ್ಲಿ ಈ ಆಟಗಾರನಿಗೂ ಸಿಗಲಿದೆ ಇದೇ ಗೌರವ
ನಂತರದಲ್ಲಿ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್’ಗಳು ಕೇವಲ 95 ರನ್’ಗಳಿಗೆ ಆಲೌಟ್ ಆದರು. ಈ ಪಂದ್ಯವನ್ನು ಭಾರತ 106 ರನ್’ಗಳಿಂದ ಗೆದ್ದುಕೊಂಡಿತು. ಆದರೆ ಸೌತ್ ಆಫ್ರಿಕಾದ ಬ್ಯಾಟ್ಸ್’ಮನ್ ಸ್ಪಷ್ಟವಾಗಿ ಔಟಾಗಿದ್ದರೂ ಸಹ ಅಂಪೈರ್ ಮಾತ್ರ ನಾಟೌಟ್ ಎಂದು ಘೋಷಿಸಿದ್ದರು.
ಎರಡನೇ ಇನಿಂಗ್ಸ್‌ನ 9ನೇ ಓವರ್’ನ ನಾಲ್ಕನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಬ್ಯಾಟ್’ನಿಂದ ರವೀಂದ್ರ ಜಡೇಜಾ ಎಸೆದ ಚೆಂಡು ಅಂಚಿಗೆ ಬಂದು ವಿಕೆಟ್ ಕೀಪರ್’ನ ಕೈಗೆ ಬಿದ್ದಿತ್ತು. ಈ ವೇಳೆ ಭಾರತೀಯ ಆಟಗಾರರು ಔಟ್ ಎಂದು ಮನವಿ ಮಾಡಿದರು, ಆದರೆ ಮೈದಾನದ ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಆಗ ಗಾಯದ ಸಮಸ್ಯೆಯಿಂದ ಸೂರ್ಯಕುಮಾರ್ ಮೈದಾನದಿಂದ ಹೊರಗುಳಿದಿದ್ದರು. ಜಡೇಜಾ ತಂಡದ ನಾಯಕರಾಗಿದ್ದರು. ಹೀಗಾಗಿ ಕೀಪರ್ ಜಿತೇಶ್ ಅವರು ಡಿಆರ್‌ಎಸ್ ತೆಗೆದುಕೊಳ್ಳುವಂತೆ ಜಡೇಜಾಗೆ ಮನವಿ ಮಾಡಿದ್ದರು. ಆದರೆ ಕೆಲವು ತಾಂತ್ರಿಕ ದೋಷದ ಕಾರಣ DRS ಅನ್ನು ಬಳಸಲಾಗುತ್ತಿಲ್ಲ ಎಂದು ಹೇಳಲಾಯಿತು.
— Virat Sharma (@ViratSharm39743) December 14, 2023
ಇದನ್ನೂ ಓದಿ: ಬಿಗ್ ಬಾಸ್ ಕನ್ನಡನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ?
ತಾಂತ್ರಿಕ ದೋಷದಿಂದ ಡಿಆರ್‌ಎಸ್ ಸ್ಥಗಿತಗೊಂಡಿದೆ ಎಂದು ಗ್ರೌಂಡ್ ರಿಪೋರ್ಟ್ ಬಹಿರಂಗಪಡಿಸಿತು. ಆದರೆ ಹೀಗಾದ ಬಳಿಕ ಮಿಲ್ಲರ್ ಬ್ಯಾಟಿಂಗ್ ಮಾಡಲು ಮುಂದಾಗುತ್ತಿದ್ದಂತೆ, ಸಿಸ್ಟಮ್ ತಕ್ಷಣವೇ ಕೆಲಸ ಮಾಡಲು ಪ್ರಾರಂಭಿಸಿತು. ಈ ಘಟನೆಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಅಂಪೈರ್ ವಂಚನೆ ಎಸಗಿದ್ದಾರೆಯೇ ಎಂಬ ಪ್ರಶ್ನೆಗಳು ಭುಗಿಲೆದ್ದಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ