ಮುಂಬೈ ಇಂಡಿಯನ್ಸ್ ತಂಡದಿಂದ ಯಾವುದೇ ಹಣಕಾಸಿನ ಲಾಭ ಪಡೆದಿಲ್ಲ-ತೆಂಡೂಲ್ಕರ್

ಐಪಿಎಲ್ ಫ್ರಾಂಚೈಸ್ ಮುಂಬೈ ಇಂಡಿಯನ್ಸ್  ತಂಡದಲ್ಲಿ ತಾವು ಯಾವುದೇ ರೀತಿಯ ಹಣಕಾಸಿನ ಲಾಭ ಪಡೆದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಸ್ಪಷ್ಟನೆ ನೀಡಿದ್ದಾರೆ.

Last Updated : Apr 28, 2019, 04:52 PM IST
ಮುಂಬೈ ಇಂಡಿಯನ್ಸ್ ತಂಡದಿಂದ ಯಾವುದೇ ಹಣಕಾಸಿನ ಲಾಭ ಪಡೆದಿಲ್ಲ-ತೆಂಡೂಲ್ಕರ್  title=
file photo

ನವದೆಹಲಿ: ಐಪಿಎಲ್ ಫ್ರಾಂಚೈಸ್ ಮುಂಬೈ ಇಂಡಿಯನ್ಸ್  ತಂಡದಲ್ಲಿ ತಾವು ಯಾವುದೇ ರೀತಿಯ ಲಾಭ ಪಡೆದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಸ್ಪಷ್ಟನೆ ನೀಡಿದ್ದಾರೆ.

ಈಗ ಸಚಿನ್ ಮೇಲೆ ಹಿತಾಸಕ್ತಿ ವಿಚಾರವಾಗಿ ಬಂದಿರುವ ಆರೋಪಗಳ ಹಿನ್ನಲೆಯಲ್ಲಿ  ಓಂಬುಡ್ಸ್ಮನ್ ಕಮ್ ಎಥಿಕ್ಸ್ ಅಧಿಕಾರಿ ನ್ಯಾಯಮೂರ್ತಿ (ನಿವೃತ್ತ ) ಡಿ.ಕೆ. ಜೈನ್ ಅವರು ನೀಡಿದ ನೋಟಿಸ್ ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ರೀತಿಯ ಪರಿಹಾರವಾಗಲಿ ಅಥವಾ ನಿರ್ಣಾಯಕ ಪಾತ್ರವನ್ನು ತಾವು ವಹಿಸಿಲ್ಲ ಎಂದು 14 ಅಂಶಗಳ ಲಿಖಿತ ಉತ್ತರದಲ್ಲಿ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(ಎಂಪಿಸಿಎ) ಸದಸ್ಯ ಸಂಜೀವ್ ಗುಪ್ತಾ ಅವರು ಸಲ್ಲಿಸಿದ ದೂರಿನಲ್ಲಿ ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರು ಒಂದು ಕಡೆ ಐಪಿಎಲ್ ಫ್ರಾಂಚೈಸಿಸ್ ನ ಸಿಬ್ಬಂದಿಯಾಗಿ ಇನ್ನೊಂದು ಕಡೆ ಕ್ರಿಕೆಟ್ ಸಲಹಾ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನಲೆಯಲ್ಲಿ ಈಗ ಈ ದೂರಿಗೆ ಸಚಿನ್ ಲಿಖಿತವಾಗಿ ಉತ್ತರ ನೀಡಿರುವ ಅವರು ಮುಂಬೈ ಇಂಡಿಯನ್ಸ್ ಐಪಿಎಲ್ ಫ್ರಾಂಚೈಸಿಯಿಂದ ನಿವೃತ್ತಿಯ ಬಳಿಕ ತಮಗೆ ಯಾವುದೇ ಲಾಭಾಂಶ / ಪರಿಹಾರವನ್ನು ನೀಡಿಲ್ಲ. ತಾವು ಫ್ರ್ಯಾಂಚೈಸ್ನೊಂದಿಗೆ ಯಾವುದೇ ರೀತಿಯಿಂದಲೂ ನೇಮಕವಾಗಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
 

Trending News