ಪಂದ್ಯದ ವೇಳೆ ಆಟಗಾರನಿಗೆ ಫ್ಯಾನ್ಸ್ ಸ್ಲೆಡ್ಜಿಂಗ್ ಮಾಡಿದರೆ ಐಸಿಸಿ ವಿಧಿಸುವ ಶಿಕ್ಷೆ ಯಾವುದು ಗೊತ್ತಾ?

ICC rules on sledging: ಪಂದ್ಯದ ವೇಳೆ ಅಭಿಮಾನಿಗಳು ಅಥವಾ ಪ್ರೇಕ್ಷಕರು ಆಟಗಾರರ ಮೇಲೆ ಏನನ್ನಾದರೂ ಎಸೆದರೆ ಅಥವಾ ಸ್ಲೆಡ್ಜಿಂಗ್ ಮಾಡಿದರೆ, ಮೊದಲು ಅವರನ್ನು ಕ್ರೀಡಾಂಗಣದಲ್ಲಿರುವ ಪೊಲೀಸರು ಅಥವಾ ಸ್ಥಳೀಯ ಪೊಲೀಸರ ಸಹಾಯದಿಂದ ಹೊರಹಾಕಲಾಗುತ್ತದೆ.

Written by - Bhavishya Shetty | Last Updated : Oct 20, 2023, 04:54 PM IST
    • ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಅನುಚಿತ ಘಟನೆಗಳು ನಡೆಯುವುದನ್ನು ನೋಡಿರುತ್ತೇವೆ.
    • ಫ್ಯಾನ್ಸ್ ಸ್ಲೆಡ್ಜಿಂಗ್ ಮಾಡಿದರೆ ಐಸಿಸಿ ವಿಧಿಸುವ ಶಿಕ್ಷೆ ಯಾವುದು?
    • ಸಮಸ್ಯೆ ಹೆಚ್ಚು ಗಂಭೀರವಾಗಿದ್ದರೆ ಅವರನ್ನು ಐಸಿಸಿ ನಿಷೇಧಿಸುತ್ತದೆ.
ಪಂದ್ಯದ ವೇಳೆ ಆಟಗಾರನಿಗೆ ಫ್ಯಾನ್ಸ್ ಸ್ಲೆಡ್ಜಿಂಗ್ ಮಾಡಿದರೆ ಐಸಿಸಿ ವಿಧಿಸುವ ಶಿಕ್ಷೆ ಯಾವುದು ಗೊತ್ತಾ? title=
ICC rules on sledging

World Cup 2023, ICC rules on sledging: ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಅಸಹ್ಯಕರವಾದ, ಅನುಚಿತ ಘಟನೆಗಳು ನಡೆಯುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಪಂದ್ಯದ ಸಮಯದಲ್ಲಿ ಆಟಗಾರರ ಮೇಲೆ ಏನನ್ನಾದರೂ ಎಸೆಯುವುದು ಅಥವಾ ಸ್ಲೆಡ್ಜ್ ಮಾಡುವುದು ಹೀಗೆ ಅನೇಕ ಘಟನೆಗಳು ಕಂಡುಬರುತ್ತವೆ.

ಇದನ್ನೂ ಓದಿ: ಚಿರತೆಯಂತೆ ಹಾರಿ ಕ್ಯಾಚ್ ಹಿಡಿಯುತ್ತಿದ್ದಂತೆ ಮ್ಯಾನೇಜ್ಮೆಂಟ್ ಮುಂದೆ ಈ ಡಿಮ್ಯಾಂಡ್ ಇಟ್ಟ ಜಡೇಜಾ!

ಇನ್ನು ವಿಶ್ವಕಪ್ ಪಂದ್ಯದ ಸಮಯದಲ್ಲಿ ಅಥವಾ ಯಾವುದೇ ಐಸಿಸಿ ಪಂದ್ಯಾವಳಿಗಳಲ್ಲಿ ಸ್ಲೆಡ್ಜ್ ಮಾಡುವುದು ಕಂಡುಬಂದರೆ, ಐಸಿಸಿ ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ನಿಮಗೆ ಅರಿವಿದೆಯೇ? ಇಲ್ಲವಾದಲ್ಲಿ ಈ ವರದಿಯನ್ನು ಓದಿ.

ಪಂದ್ಯದ ವೇಳೆ ಅಭಿಮಾನಿಗಳು ಅಥವಾ ಪ್ರೇಕ್ಷಕರು ಆಟಗಾರರ ಮೇಲೆ ಏನನ್ನಾದರೂ ಎಸೆದರೆ ಅಥವಾ ಸ್ಲೆಡ್ಜಿಂಗ್ ಮಾಡಿದರೆ, ಮೊದಲು ಅವರನ್ನು ಕ್ರೀಡಾಂಗಣದಲ್ಲಿರುವ ಪೊಲೀಸರು ಅಥವಾ ಸ್ಥಳೀಯ ಪೊಲೀಸರ ಸಹಾಯದಿಂದ ಹೊರಹಾಕಲಾಗುತ್ತದೆ. ನಂತರ ಅವರಿಗೆ ಕ್ರೀಡಾಂಗಣದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ. ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಾರೆ. ಇನ್ನು ಯಾವುದೇ ವ್ಯಕ್ತಿ ಆಟಗಾರನನ್ನು ಭೇಟಿಯಾಗಲು ಮೈದಾನಕ್ಕೆ ಬಂದರೆ, ತಕ್ಷಣವೇ ಆತನ ವಿರುದ್ಧ ಕ್ರಮ ಕೈಗೊಂಡು, ಅವನನ್ನು ಅಲ್ಲಿಂದ ಹೊರಹಾಕಲಾಗುತ್ತದೆ.

ಐಸಿಸಿ ಕ್ರಮ ಕೈಗೊಳ್ಳುತ್ತದೆಯೇ?

ಈ ವಿಷಯದಲ್ಲಿ ಐಸಿಸಿಯ ಯಾವುದೇ ನಿಯಮವಿಲ್ಲ. ಆದರೆ ಸಮಸ್ಯೆ ಹೆಚ್ಚು ಗಂಭೀರವಾಗಿದ್ದರೆ, ಅಂತಹ ಜನರನ್ನು ಐಸಿಸಿ ನಿಷೇಧಿಸುತ್ತದೆ.

ಇದನ್ನೂ ಓದಿ: ಸತತ ಗೆಲುವು ಕಂಡ ಭಾರತ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಸ್ಲೆಡ್ಜಿಂಗ್ ವಿಷಯಕ್ಕೆ ಸಂಬಂಧಿಸಿದಂತೆ, ಟೀಂ ಇಂಡಿಯಾದ ಮಾಜಿ ಆಲ್‌’ರೌಂಡರ್ ಇರ್ಫಾನ್ ಪಠಾಣ್ ಕಾಮೆಂಟರಿ ವೇಳೆ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. “ನಾವು ಪೇಶಾವರದಲ್ಲಿ ಆಡಲು ಹೋಗಿದ್ದಾಗ ಪಾಕಿಸ್ತಾನದ ಅಭಿಮಾನಿಯೊಬ್ಬ ನನ್ನ ಕಣ್ಣಿಗೆ ಮೊಳೆಯೊಂದನ್ನು ಎಸೆದಿದ್ದ. ಆದರೆ ನಾವು ಅದರ ಬಗ್ಗೆ ಗಲಾಟೆ ಮಾಡಲಿಲ್ಲ. ನಾನು ಗಂಭೀರವಾಗಿ ಗಾಯಗೊಂಡಿರಬಹುದು. 10 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಆದರೆ ನಾವು ಅದರತ್ತ ಗಮನ ಹರಿಸಲಿಲ್ಲ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೆವು” ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News