Virat Kohli: ವಿರಾಟ್ RCB ನಾಯಕತ್ವವನ್ನು ದಿಢೀರ್ ಆಗಿ ತೊರೆಯಲು ಕಾರಣವೇನು ಗೊತ್ತಾ?

Virat Kohli On Quitting RCB captaincy: ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ (ಡಬ್ಲ್ಯುಪಿಎಲ್ 2023) ಯುಪಿ ವಾರಿಯರ್ಸ್ ವಿರುದ್ಧದ ಆರ್‌ಸಿಬಿ ಪಂದ್ಯಕ್ಕೂ ಮುನ್ನ ಮಹಿಳಾ ತಂಡದ ಆಟಗಾರರಿಗೆ ಕೊಹ್ಲಿ ಹೀಗೆ ಹೇಳಿದರು, “ನನ್ನ ನಾಯಕತ್ವದ ಅವಧಿ ಮುಗಿಯುತ್ತಿರುವ ಸಮಯದಲ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ನನ್ನ ಮೇಲೆ ಹೆಚ್ಚು ವಿಶ್ವಾಸವಿರಲಿಲ್ಲ. ಈ ಬಗ್ಗೆ ನನ್ನಲ್ಲಿ ಯಾವುದೇ ಭಾವನೆ ಉಳಿದಿರಲಿಲ್ಲ. ಅದು ನನ್ನ ಸ್ವಂತ ದೃಷ್ಟಿಕೋನ, ಆದರೂ ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Mar 16, 2023, 05:11 PM IST
    • ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದರು
    • ವಿರಾಟ್ ಕೊಹ್ಲಿ ಈ ವರ್ಷ ಟೀಂ ಇಂಡಿಯಾ ನಾಯಕತ್ವವನ್ನೂ ತೊರೆದಿದ್ದರು.
    • ಆದರೆ ಇದೀಗ ಆ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
Virat Kohli: ವಿರಾಟ್ RCB ನಾಯಕತ್ವವನ್ನು ದಿಢೀರ್ ಆಗಿ ತೊರೆಯಲು ಕಾರಣವೇನು ಗೊತ್ತಾ?  title=
Virat Kohli Captaincy

Virat Kohli On Quitting RCB captaincy: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯಲು ಭಾರತೀಯ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಿರ್ಧರಿಸಿದ್ದರು. ಆ ಬಳಿಕ ಟೀಂ ಇಂಡಿಯಾ ನಾಯಕತ್ವವನ್ನೂ ತೊರೆದಿದ್ದರು. ಆದರೆ ಇದೀಗ ಆ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: RCB: ಮೈದಾನದಲ್ಲಿಯೇ ಕಣ್ಣೀರು ಹಾಕಿದ RCBಯ ಸ್ಟಾರ್ ಆಟಗಾರ್ತಿ! ಕಾರಣವೇನು ಗೊತ್ತಾ?

ನಾಯಕತ್ವ ತೊರೆಯುವ ನಿರ್ಧಾರದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, “ನನ್ನ ಮೇಲಿನ ನಂಬಿಕೆಯನ್ನು ಕಳೆದುಕೊಂಡೆ ಮತ್ತು ಈ ಕೆಲಸದ ಮೇಲಿನ ಉತ್ಸಾಹವೂ ಕಡಿಮೆಯಾಯಿತು” ಎಂದು ಹೇಳಿದರು. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡ 2017ರಲ್ಲಿ ಮತ್ತು 2019ರಲ್ಲಿ ಐಪಿಎಲ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಭಾರತೀಯ T20 ತಂಡದ ನಾಯಕತ್ವವನ್ನು ತೊರೆದ ನಂತರ, ಕೊಹ್ಲಿ 2021 ರ ಋತುವಿನಲ್ಲಿ RCB ನಾಯಕತ್ವವನ್ನು ಸಹ ತೊರೆದರು. ಅವರ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ತಂಡದ ನಾಯಕರಾದರು.

ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ (ಡಬ್ಲ್ಯುಪಿಎಲ್ 2023) ಯುಪಿ ವಾರಿಯರ್ಸ್ ವಿರುದ್ಧದ ಆರ್‌ಸಿಬಿ ಪಂದ್ಯಕ್ಕೂ ಮುನ್ನ ಮಹಿಳಾ ತಂಡದ ಆಟಗಾರರಿಗೆ ಕೊಹ್ಲಿ ಹೀಗೆ ಹೇಳಿದರು, “ನನ್ನ ನಾಯಕತ್ವದ ಅವಧಿ ಮುಗಿಯುತ್ತಿರುವ ಸಮಯದಲ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ನನ್ನ ಮೇಲೆ ಹೆಚ್ಚು ವಿಶ್ವಾಸವಿರಲಿಲ್ಲ. ಈ ಬಗ್ಗೆ ನನ್ನಲ್ಲಿ ಯಾವುದೇ ಭಾವನೆ ಉಳಿದಿರಲಿಲ್ಲ. ಅದು ನನ್ನ ಸ್ವಂತ ದೃಷ್ಟಿಕೋನ, ಆದರೂ ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ” ಎಂದು ಹೇಳಿದ್ದಾರೆ.

ಆರ್‌ಸಿಬಿ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ!

“RCB ತಂಡವು 2016ರ ನಂತರ 2020 ರಲ್ಲಿ ಮೊದಲ ಬಾರಿಗೆ ಪ್ಲೇಆಫ್ ತಲುಪಿತು. ಮುಂದಿನ ಎರಡು ಋತುಗಳಲ್ಲಿಯೂ ತಂಡವು ಅದೇ ಸಾಧನೆಯನ್ನು ಪುನರಾವರ್ತಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು,

ಇದನ್ನೂ ಓದಿ: ಸ್ಮೃತಿ ಬಿಟ್ಟು ಸಾನಿಯಾರನ್ನು ಹಿಡ್ಕೊಂಡು ಟ್ರೋಲ್: ‘RCB ಮೆಂಟರ್ ಎಲ್ಲಿದ್ದೀಯಮ್ಮಾ?’ ಅಂತಿದ್ದಾರೆ ಫ್ಯಾನ್ಸ್!

“ಮುಂದಿನ ಋತುವಿನಲ್ಲಿ, ಹೊಸ ಆಟಗಾರರು ತಂಡವನ್ನು ಸೇರಿಕೊಂಡರು. ಅವರು ತುಂಬಾ ಉತ್ಸುಕರಾಗಿದ್ದರು. ವೈಯಕ್ತಿಕವಾಗಿ ನಾನು ಉತ್ಸುಕನಾಗಿರಲಿಲ್ಲ. ಆದರೆ ಅವರ ಸಕಾರಾತ್ಮಕ ಶಕ್ತಿಯಿಂದ ನಾವು ಸತತವಾಗಿ ಮೂರು ವರ್ಷಗಳವರೆಗೆ ಪ್ಲೇಆಫ್ ತಲುಪಿದ್ದೇವೆ. ನಾವು ಪ್ರತಿ ಸೀಸನ್ ಅನ್ನು ಮೊದಲಿನಂತೆಯೇ ಉತ್ಸಾಹದಿಂದ ಪ್ರಾರಂಭಿಸುತ್ತೇವೆ. ನಾನು ಇನ್ನೂ ಉತ್ಸುಕನಾಗಿದ್ದೇನೆ. ತಂಡವನ್ನು ಯಶಸ್ವಿಗೊಳಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ, ಯಾರಿಗಾದರೂ ಆತ್ಮವಿಶ್ವಾಸದ ಕೊರತೆಯಿದ್ದರೆ, ಇತರ ಆಟಗಾರರು ಅವರನ್ನು ಪ್ರೋತ್ಸಾಹಿಸುತ್ತಾರೆ” ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News