ನವದೆಹಲಿ: ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಜಗತ್ತು ಕಂಡು ಅದ್ವೀತಿಯ ವೇಗದ ಬೌಲರ್ ಗಳಲ್ಲಿ ಒಬ್ಬರು, ಈಗ ಅವರು ತಮ್ಮ ಕಾಲ ಘಟ್ಟದಲ್ಲಿ ತಾವು ಬೌಲ್ ಮಾಡಿದ ಮೂವರು ಶ್ರೇಷ್ಠ ಬ್ಯಾಟ್ಸಮನ್ ಗಳನ್ನು ಅವರು ಹೆಸರಿಸಿದ್ದಾರೆ.
1999 ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅವರು 2012 ರವರೆಗೆ ಆಡಿದರು. ಈಗ ನಿವೃತ್ತಿಯ ಎಂಟು ವರ್ಷಗಳ ನಂತರ, ತಾವು ಬೌಲ್ ಮಾಡಿದ ಮೂವರು ಕಠಿಣ ಬ್ಯಾಟ್ಸ್ಮನ್ಗಳನ್ನು ಹೆಸರಿಸಿದ್ದಾರೆ.
ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಪೊಮ್ಮಿ ಎಂಬಾಂಗ್ವಾ ಅವರೊಂದಿಗೆ ಕ್ರಿಕ್ಬಜ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು ತಮ್ಮ ಮೊದಲ ಆಯ್ಕೆ ಸಚಿನ್ ತೆಂಡೂಲ್ಕರ್ ಎಂದು ಹೆಸರಿಸಿದರು.ಎರಡನೇಯದಾಗಿ ಅವರು ಬ್ರಿಯಾನ್ ಲಾರಾ ಅವರನ್ನು ಹೆಸರಿಸಿದರು.ಲಾರಾ ಬಗ್ಗೆ ಮಾತನಾಡಿದ ಬ್ರೆಟ್ ಲೀ 'ನೀವು ಒಂದೇ ಸ್ಥಳದಲ್ಲಿ ಆರು ಚೆಂಡುಗಳನ್ನು ಬೌಲ್ ಮಾಡುತ್ತೀರಿ ಮತ್ತು ಅವನು ಆರು ವಿಭಿನ್ನ ಸ್ಥಳಗಳಲ್ಲಿ ಹೊಡೆಯುತ್ತಾನೆ' ಎಂದು ಬ್ರೆಟ್ ಲೀ ಹೇಳಿದರು.
ತಮ್ಮ ಅಂತಿಮ ಆಯ್ಕೆಗೆ ಸಂಬಂಧಿಸಿದಂತೆ, ಬ್ರೆಟ್ ಲೀ ಆಲ್ರೌಂಡರ್ ಜಾಕ್ವೆಸ್ ಕಾಲಿಸ್ ಅವರನ್ನು ಹೆಸರಿಸಿದರು.ತಾವು ಗ್ಯಾರಿ ಸೋಬರ್ಸ್ ವಿರುದ್ಧ ಆಡಲಿಲ್ಲ ಎಂದ ಅವರು ಕಾಲಿಸ್ ಅವರನ್ನು ಶ್ರೇಷ್ಠ ಕ್ರಿಕೆಟಿಗ ಎಂದು ಶ್ಲಾಘಿಸಿದರು. ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಅಥವಾ ಬೌಲರ್ ಆಗಿ ಆಡುವ ಅವರ ಸಾಮರ್ಥ್ಯದಿಂದಾಗಿ ಅವರನ್ನು ಸಂಪೂರ್ಣ ಕ್ರಿಕೆಟರ್ ಎಂದು ಬ್ರೆಟ್ ಲೀ ಮೆಚ್ಚುಗೆ ವ್ಯಕ್ತಪಡಿಸಿದರು.