ಸನಾತನ ಧರ್ಮ ವಿರೋಧಿಸಿದ್ದೇ ಕಾಂಗ್ರೆಸ್’ಗೆ ಶಾಪ-ಸೋಲಿಗೆ ಕಾರಣ! ಟೀಕಿಸಿದ ಟೀಂ ಇಂಡಿಯಾ ಆಟಗಾರ

Venkatesh Prasad on Sanatan Dharma: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಿಂದುಳಿದಿರುವ ಬಗ್ಗೆ ಪಕ್ಷದ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಮಾತನಾಡಿ, “ಸನಾತನ (ಧರ್ಮ)ವನ್ನು ವಿರೋಧಿಸುವ ಮೂಲಕ ಪಕ್ಷವು ಮುಳುಗಿದೆ. ಧರ್ಮವನ್ನು ವಿರೋಧಿಸಿದ್ದೇ ಶಾಪವಾಗಿದೆ” ಎಂದಿದ್ದಾರೆ.

Written by - Bhavishya Shetty | Last Updated : Dec 3, 2023, 04:58 PM IST
    • ದೇಶದ ಐದು ರಾಜ್ಯಗಳಲ್ಲಿ 2023ರ ವಿಧಾನಸಭಾ ಚುನಾವಣೆ
    • ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಂಡವರು ಕೆಟ್ಟ ಪರಿಣಾಮಗಳನ್ನು ಅನುಭವಿಸುವುದು ಖಚಿತ
    • ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿಕೆ
ಸನಾತನ ಧರ್ಮ ವಿರೋಧಿಸಿದ್ದೇ ಕಾಂಗ್ರೆಸ್’ಗೆ ಶಾಪ-ಸೋಲಿಗೆ ಕಾರಣ! ಟೀಕಿಸಿದ ಟೀಂ ಇಂಡಿಯಾ ಆಟಗಾರ title=
venkatesh prasad

Venkatesh Prasad on Sanatan Dharma: ದೇಶದ ಐದು ರಾಜ್ಯಗಳಲ್ಲಿ 2023ರ ವಿಧಾನಸಭಾ ಚುನಾವಣೆ ನಡೆದಿದ್ದು, ಇಂದು ಫಲಿತಾಂಶಗಳು ಹೊರಬಿದ್ದಿವೆ. ಅಂದಹಾಗೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌’ಗಢದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಚುನಾವಣಾ ಫಲಿತಾಂಶದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ಈ ಹಿಂದೆ ಸನಾತನ ಧರ್ಮವನ್ನು ಅವಮಾನಿಸಿದ ಸುದ್ದಿಯೂ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಆರ್’ಸಿಬಿ ತಂಡ IPL ಟ್ರೋಫಿ ಗೆಲ್ಲದಿರಲು ಇದುವೇ ಪ್ರಮುಖ ಕಾರಣ ಎಂದ ಎಬಿ ಡಿವಿಲಿಯರ್ಸ್

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಿಂದುಳಿದಿರುವ ಬಗ್ಗೆ ಪಕ್ಷದ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಮಾತನಾಡಿ, “ಸನಾತನ (ಧರ್ಮ)ವನ್ನು ವಿರೋಧಿಸುವ ಮೂಲಕ ಪಕ್ಷವು ಮುಳುಗಿದೆ. ಧರ್ಮವನ್ನು ವಿರೋಧಿಸಿದ್ದೇ ಶಾಪವಾಗಿದೆ” ಎಂದಿದ್ದಾರೆ.

“ಇದು ಕಾಂಗ್ರೆಸ್ ಸೋಲಲ್ಲ, ಎಡಪಕ್ಷಗಳ ಸೋಲು ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲವು ದಿನಗಳಿಂದ ಅಂತಹ ಕೆಲವು ನಾಯಕರು ಕಾಂಗ್ರೆಸ್‌’ಗೆ ಎಂಟ್ರಿಕೊಟ್ಟು ಹೆಚ್ಚಿನ ಪ್ರಭಾವ ಬೀರಿದ್ದಾರೆ. ಕಾಂಗ್ರೆಸ್‌’ನ ಎಲ್ಲಾ ನಿರ್ಧಾರಗಳಲ್ಲಿ ಅವರ ಪಾತ್ರ ದೊಡ್ಡದು” ಎಂದರು.

“ಮಹಾತ್ಮ ಗಾಂಧೀಜಿಯವರು ‘ರಘುಪತಿ ರಾಘವ ರಾಜ ರಾಮ್, ಪತಿತ ಸಂತ ಸೀತಾರಾಮ್’ ಎಂದು ಹೇಳಿದ್ದರು. ಆದರೆ ಇಂದು ಆ ಕಾಂಗ್ರೆಸ್ ಅನ್ನು ಸನಾತನ ಸಂಸ್ಥೆಯ ವಿರೋಧ ಪಕ್ಷವಾಗಿ ನೋಡಲಾಗುತ್ತಿದೆ. ಇದು ದುರದೃಷ್ಟಕರ. ಕಾಂಗ್ರೆಸ್ ಪಕ್ಷವು ಅಂತಹ ನಾಯಕರನ್ನು ತೆಗೆದುಹಾಕದಿದ್ದರೆ ಪಕ್ಷದ ಸ್ಥಿತಿ ಶೀಘ್ರದಲ್ಲೇ ಎಐಎಂಐಎಂನಂತೆಯೇ ಆಗುತ್ತದೆ. ಕಾಂಗ್ರೆಸ್ ನಾಯಕತ್ವವು ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದಿದ್ದಾರೆ.

“ಮಹಾತ್ಮ ಗಾಂಧಿ, ಪಂಡಿತ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಆಗಿ ಉಳಿಯಲು ಕಾಂಗ್ರೆಸ್‌ಗೆ ಅವಕಾಶ ನೀಡಬೇಕು. ಈ ಸೋಲಿನ ಸಂಪೂರ್ಣ ವಿಶ್ಲೇಷಣೆ ನಡೆಯಲಿದೆ. ಸದ್ಯಕ್ಕೆ ಈ ರಾಜ್ಯಗಳ ಪಕ್ಷದ ಉಸ್ತುವಾರಿಗಳು ಕೂಡಲೇ ರಾಜೀನಾಮೆ ನೀಡಬೇಕು” ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್’ನಲ್ಲಿ CSK ಪರ ಆಡಲಿದ್ದಾರೆ ರಿಷಬ್ ಪಂತ್! ಸಂಚಲನ ಖ್ಯಾತ ಕ್ರಿಕೆಟ್ ವಿಶ್ಲೇಷಕನ ಹೇಳಿಕೆ

ಇನ್ನೊಂದೆಡೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಸನಾತನ ಧರ್ಮವನ್ನು ವಿರೋಧಿಸಿದ ಕಾಂಗ್ರೆಸ್ ಬಗ್ಗೆ ಕಿಡಿಕಾರಿದ್ದಾರೆ. ತಮ್ಮ ಎಕ್ಸ್ ಹ್ಯಾಂಡಲ್‌’ನಲ್ಲಿ ಟ್ವೀಟ್ ಮಾಡಿದ ಅವರು, “ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಂಡವರು ಕೆಟ್ಟ ಪರಿಣಾಮಗಳನ್ನು ಅನುಭವಿಸುವುದು ಖಚಿತ. ಬಿಜೆಪಿಯ ಪ್ರಚಂಡ ವಿಜಯಕ್ಕಾಗಿ ಅಭಿನಂದನೆಗಳು. ಈ ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅದ್ಭುತ ನಾಯಕತ್ವ ಮತ್ತು ಪಕ್ಷದ ಕಾರ್ಯಕರ್ತರ ಅದ್ಭುತ ಕಾರ್ಯಕ್ಕೆ ಮತ್ತೊಂದು ಪುರಾವೆಯಾಗಿದೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News