ಐಪಿಎಲ್’ನಲ್ಲಿ CSK ಪರ ಆಡಲಿದ್ದಾರೆ ರಿಷಬ್ ಪಂತ್! ಸಂಚಲನ ಖ್ಯಾತ ಕ್ರಿಕೆಟ್ ವಿಶ್ಲೇಷಕನ ಹೇಳಿಕೆ

Will Rishabh Pant play for CSK: ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಐಪಿಎಲ್ 2025ರಲ್ಲಿ ರಿಷಬ್ ಪಂತ್ ಸಿಎಸ್‌’ಕೆ ಪರ ಆಡಲಿದ್ದಾರೆ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Dec 3, 2023, 04:13 PM IST
    • ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ದೀಪ್ ದಾಸ್ ಗುಪ್ತಾ
    • ‘ಐಪಿಎಲ್ 2025ರಲ್ಲಿ ರಿಷಬ್ ಪಂತ್ ಸಿಎಸ್‌’ಕೆ ಪರ ಆಡಲಿದ್ದಾರೆ‘
    • ರಿಷಬ್ ಪಂತ್ ಸಿಎಸ್‌’ಕೆ ತಂಡ ಸೇರಿದರೆ ಆಶ್ಚರ್ಯಪಡಬೇಡಿ ಎಂದು ದೀಪ್
ಐಪಿಎಲ್’ನಲ್ಲಿ CSK ಪರ ಆಡಲಿದ್ದಾರೆ ರಿಷಬ್ ಪಂತ್! ಸಂಚಲನ ಖ್ಯಾತ ಕ್ರಿಕೆಟ್ ವಿಶ್ಲೇಷಕನ ಹೇಳಿಕೆ  title=
Will Rishabh Pant play for CSK?

Will Rishabh Pant play for CSK: ಕಳೆದ ವರ್ಷ ಡಿಸೆಂಬರ್‌’ನಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತದ ವಿಕೆಟ್‌ ಕೀಪರ್-ಬ್ಯಾಟ್ಸ್‌’ಮನ್ ರಿಷಬ್ ಪಂತ್ ತೀವ್ರವಾಗಿ ಗಾಯಗೊಂಡಿದ್ದರು. ಇದೇ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಸೀಸನ್‌’ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಜೊತೆಗೆ ವಿಶ್ವಕಪ್ 2023ರಿಂದಲೂ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ವಿಶ್ವ ಕ್ರಿಕೆಟ್‌ ಇತಿಹಾಸದಲ್ಲಿನ ಭಯಾನಕ ವೇಗದ ಬೌಲರ್‌ಗಳು ಯಾರು ಗೊತ್ತೆ..? ಇವರೇ ನೋಡಿ

ಆದರೆ, ಇದೀಗ ಚೇತರಿಸಿಕೊಂಡಿದ್ದು ಮತ್ತೆ ಫಿಟ್ನೆಸ್ ಪಡೆಯುವಲ್ಲಿ ನಿರತರಾಗಿದ್ದಾರೆ. ಪಂತ್ ವಾಪಸ್ ಬರುತ್ತಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಐಪಿಎಲ್ 2025ರಲ್ಲಿ ರಿಷಬ್ ಪಂತ್ ಸಿಎಸ್‌’ಕೆ ಪರ ಆಡಲಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ದೀಪ್ ದಾಸ್ ಗುಪ್ತಾ ಅವರು ಮಹತ್ವದ ಭವಿಷ್ಯ ನುಡಿಯುವ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಐಪಿಎಲ್ 2025ರಲ್ಲಿ ರಿಷಬ್ ಪಂತ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಮ್ಮ ಎಲ್ಲಾ ಶಕ್ತಿಯನ್ನು ಬಳಸುತ್ತದೆ ಎಂದು ಅವರು ನಂಬಿದ್ದಾರೆ.

ಐಪಿಎಲ್ 2025ರಲ್ಲಿ ರಿಷಬ್ ಪಂತ್ ಅವರನ್ನು ಸಿಎಸ್‌’ಕೆ ತನ್ನ ತಂಡಕ್ಕೆ ಸೇರಿಸಿಕೊಂಡರೆ ಆಶ್ಚರ್ಯಪಡಬೇಡಿ ಎಂದು ದೀಪ್ ದಾಸ್‌ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ಆರ್’ಸಿಬಿ ತಂಡ IPL ಟ್ರೋಫಿ ಗೆಲ್ಲದಿರಲು ಇದುವೇ ಪ್ರಮುಖ ಕಾರಣ ಎಂದ ಎಬಿ ಡಿವಿಲಿಯರ್ಸ್

“ಎಂಎಸ್ ಧೋನಿ ಮತ್ತು ರಿಷಬ್ ನಡುವೆ ವಿಶೇಷ ಬಾಂಧವ್ಯವಿದೆ. ಪಂತ್ ಧೋನಿಯನ್ನು ತುಂಬಾ ಗೌರವಿಸುತ್ತಾರೆ. ಒಟ್ಟಿಗೆ ಕಳೆದ ಅವರ ಸಮಯವು ಆಳವಾದ ಬಂಧವನ್ನು ಸೃಷ್ಟಿಸಿದೆ. ರಿಷಭ್ ಆಟದ ಬಗೆಗಿನ ವಿಧಾನವು MS ಧೋನಿಯಂತೆಯೇ ಇದೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News