FIFA World Cupನಲ್ಲಿ ಮೈತೋರಿಸುವಂತೆ ಬಟ್ಟೆ ಧರಿಸುವಂತಿಲ್ಲ: ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಖಂಡಿತ

FIFA World Cup 2022: ವಿಶ್ವಕಪ್ ವೆಬ್‌ಸೈಟ್ ಹೀಗೆ ಹೇಳುತ್ತದೆ: "ಜನರು ಸಾಮಾನ್ಯವಾಗಿ ತಮ್ಮ ಆಯ್ಕೆಯ ಉಡುಪುಗಳನ್ನು ಧರಿಸಬಹುದು. ವಸ್ತುಸಂಗ್ರಹಾಲಯಗಳು ಮತ್ತು ಇತರ ಸರ್ಕಾರಿ ಕಟ್ಟಡಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಸಂದರ್ಶಕರು ತಮ್ಮ ಭುಜ ಮತ್ತು ಮೊಣಕಾಲುಗಳನ್ನು ಮುಚ್ಚಿಕೊಳ್ಳಬೇಕೆಂದು ನಿರೀಕ್ಷಿಸಲಾಗಿದೆ" ಎಂದು ಹೇಳಿದೆ.

Written by - Bhavishya Shetty | Last Updated : Nov 16, 2022, 04:20 PM IST
    • 2022 ರ FIFA ವಿಶ್ವಕಪ್‌ನಲ್ಲಿ 32 ದೇಶಗಳು ಭಾಗವಹಿಸುತ್ತಿವೆ
    • ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿದೆ
    • ಮಹಿಳಾ ಅಭಿಮಾನಿಗಳು ಮೈ ತೋರಿಸುವಂತಹ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು
FIFA World Cupನಲ್ಲಿ ಮೈತೋರಿಸುವಂತೆ ಬಟ್ಟೆ ಧರಿಸುವಂತಿಲ್ಲ: ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಖಂಡಿತ title=
fifa 2022

FIFA World Cup 2022: 2022 ರ FIFA ವಿಶ್ವಕಪ್‌ನಲ್ಲಿ 32 ದೇಶಗಳು ಭಾಗವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕತಾರ್ ನ ದೋಹಾಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿದೆ.

ವಿಶೇಷವಾಗಿ UK, USA ಮತ್ತು ಪ್ರಪಂಚದ ಇತರ ಭಾಗಗಳಿಂದ ಬರುವ ಮಹಿಳಾ ಅಭಿಮಾನಿಗಳಿಗೆ ಈ ನಿಯಮ ಅನ್ವಯವಾಗುತ್ತಿದೆ. ಮಹಿಳಾ ಅಭಿಮಾನಿಗಳು ಮೈ ತೋರಿಸುವಂತಹ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಕತಾರ್‌ನಲ್ಲಿ ಇರುವ ಕಾನೂನುಗಳ ಬಗ್ಗೆ ಅವರು ಗಮನಹರಿಸಬೇಕು. ಅಲ್ಲಿ ಅಂತಹ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. FIFA ತನ್ನ ವೆಬ್‌ಸೈಟ್‌ನಲ್ಲಿ ಅಭಿಮಾನಿಗಳು ತಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಬಹುದು ಆದರೆ ಅವರು ದೇಶದ ಕಾನೂನುಗಳನ್ನು ಗೌರವಿಸಬೇಕು ಮತ್ತು ತಮ್ಮ ದೇಹದ ಭಾಗಗಳನ್ನು ಮುಚ್ಚಬೇಕು ಎಂದು ಹೇಳಿ ಖಡಕ್ ಸೂಚನೆ ರವಾನಿಸಿದೆ.

ಇದನ್ನೂ ಓದಿ: CSK Retained-Released Players List : ಜಡೇಜಾ ಉಳಿಸಿಕೊಂಡು; ಬ್ರಾವೋ, ರಾಯುಡು ರಿಲೀಸ್ ಮಾಡಿದ CSK 

ವಿಶ್ವಕಪ್ ವೆಬ್‌ಸೈಟ್ ಹೀಗೆ ಹೇಳುತ್ತದೆ: "ಜನರು ಸಾಮಾನ್ಯವಾಗಿ ತಮ್ಮ ಆಯ್ಕೆಯ ಉಡುಪುಗಳನ್ನು ಧರಿಸಬಹುದು. ವಸ್ತುಸಂಗ್ರಹಾಲಯಗಳು ಮತ್ತು ಇತರ ಸರ್ಕಾರಿ ಕಟ್ಟಡಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಸಂದರ್ಶಕರು ತಮ್ಮ ಭುಜ ಮತ್ತು ಮೊಣಕಾಲುಗಳನ್ನು ಮುಚ್ಚಿಕೊಳ್ಳಬೇಕೆಂದು ನಿರೀಕ್ಷಿಸಲಾಗಿದೆ" ಎಂದು ಹೇಳಿದೆ.

ಅತಿಯಾದ ಸೆಖೆಯಿಂದಾಗಿ ಅಭಿಮಾನಿಗಳು ತಮ್ಮ ಬಟ್ಟೆಗಳನ್ನು ತೆಗೆದರೆ, ಕ್ರೀಡಾಂಗಣಗಳಲ್ಲಿ ಅಳವಡಿಸಲಾಗಿರುವ ವಿಶೇಷ ಕ್ಯಾಮೆರಾಗಳ ಮೂಲಕ ಅವುಗಳನ್ನು ಗುರುತಿಸಬಹುದು ಎಂಬುದು ಸಹ ಗಮನಿಸಬೇಕಾದ ಅಂಶವಾಗಿದೆ.

ಮುಖ್ಯ ತಂತ್ರಜ್ಞಾನ ಅಧಿಕಾರಿ ನಿಯಾಸ್ ಅಬುಲ್ರಹಿಮಾನ್ ಹೇಳಿದರು: "ನಾವು ನಿರ್ದಿಷ್ಟ ಆಸನದಲ್ಲಿ ಜೂಮ್ ಮಾಡಲು ಮತ್ತು ಪ್ರೇಕ್ಷಕರನ್ನು ಸ್ಪಷ್ಟವಾಗಿ ನೋಡಲು ಹೆಚ್ಚಿನ ರೆಸಲ್ಯೂಶನ್ ವಿಶೇಷ ಕ್ಯಾಮೆರಾಗಳನ್ನು ಹೊಂದಿದ್ದೇವೆ. ಅದನ್ನು ರೆಕಾರ್ಡ್ ಮಾಡಲಾಗುತ್ತಿದೆ, ಆದ್ದರಿಂದ ಯಾವುದೇ ಘಟನೆಯ ನಂತರದ ತನಿಖೆಯಲ್ಲಿ ನಮಗೆ ಅವುಗಳ ಸಹಾಯ ಮಾಡುತ್ತದೆ" ಎಂದಿದ್ದಾರೆ.

ಇದನ್ನೂ ಓದಿ: Hardik Pandya: ಬೀದಿ ಬೀದಿಯಲ್ಲಿ ರಿಕ್ಷಾ ಓಡಿಸಿದ ಹಾರ್ದಿಕ್ ಪಾಂಡ್ಯ: ಕಾರಣವೇನು ಗೊತ್ತಾ?

ಡ್ರೆಸ್ ಕೋಡ್ ಅನುಸರಿಸದವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಜೈಲು ಶಿಕ್ಷೆಗೆ ಕೂಡ ಗುರಿಯಾಗಬಹುದು ಎಂದು ದಿ ಸನ್ ವರದಿ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News