ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ ಧೋನಿಗೆ ಅರ್ಜೆಂಟೀನಾ ಫುಟ್ ಬಾಲ್ ಟೀಮ್ ಕ್ಯಾಪ್ಟನ್ ಲಿಯೊನೆಲ್ ಮೆಸ್ಸಿ ತಮ್ಮ ಜೆರ್ಸಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಫಿಫಾ ವಿಶ್ವಕಪ್ 2022 ಪಂದ್ಯದಲ್ಲಿ ತಾವು ಧರಿಸಿದ್ದ ಶರ್ಟ್ನ್ನು ಸಹಿ ಸಮೇತ ಜೀವಾಗೆ ಉಡುಗೂರೆಯಾಗಿ ನೀಡಿದ್ದು, ಈ ಕುರಿತು ಜೀವಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
FIFA World Cup 2022 Final: FIFA ವಿಶ್ವಕಪ್ ಫೈನಲ್ ಎರಡು ಫುಟ್ಬಾಲ್ ರಾಷ್ಟ್ರಗಳ ನಡುವಿನ ಘರ್ಷಣೆಯಾಗಿದೆ. ಪ್ರಶಸ್ತಿ ಘರ್ಷಣೆಗೆ ಮುಂಚಿತವಾಗಿ ಶಾಂತವಾಗಿರಲು ಪ್ರಯತ್ನಿಸುತ್ತಿರುವಾಗ ವೈಯಕ್ತಿಕ ಆಟಗಾರರು ಗಮನಹರಿಸಬಾರದು ಎಂದು ಹ್ಯೂಗೋ ಲೋರಿಸ್ ಹೇಳುತ್ತಾರೆ.
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಪ್ಲೇ ಆಫ್ ಕದನದಲ್ಲಿ ಮೊರೊಕ್ಕೊ ವಿರುದ್ಧ ಕ್ರೊಯೇಶಿಯಾ 2-1 ಅಂತರದಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫುಟ್ಬಾಲ್ ವಿಶ್ವಕಪ್ನಲ್ಲಿ ಕ್ರೊಯೇಶಿಯಾ 2ನೇ ಬಾರಿ 3ನೇ ಸ್ಥಾನ ಪಡೆದುಕೊಂಡಂತಾಯಿತು.
FIFA World Cup 2022 Prize Money: FIFA ವಿಶ್ವಕಪ್ 2022 ರ ಅಂತಿಮ ಪಂದ್ಯವು ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಡಿಸೆಂಬರ್ 18 ರಂದು ನಡೆಯಲಿದೆ. ಈ ಬಾರಿ ವಿಜೇತ ತಂಡ 18 ಕ್ಯಾರೆಟ್ ಗ್ಲಿಮಿಂಗ್ ಚಿನ್ನದ ಟ್ರೋಫಿ ಜೊತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಬಹುಮಾನವನ್ನು ಪಡೆಯಲಿದೆ. ವಿಶೇಷವೆಂದರೆ ಗ್ರೂಪ್ ಹಂತದಲ್ಲಿಯೇ ಈ ಟೂರ್ನಿಯಿಂದ ಹೊರಬಿದ್ದ ತಂಡಗಳು ಭಾರಿ ಮೊತ್ತದ ಬಹುಮಾನವನ್ನೂ ಪಡೆಯಲಿವೆ.
Lionel Messi Retirement: "ನನ್ನ ಕೊನೆಯ ಪಂದ್ಯವನ್ನು ಫೈನಲ್ನಲ್ಲಿ ಆಡುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಮೆಸ್ಸಿ ಅರ್ಜೆಂಟೀನಾದ ಮಾಧ್ಯಮ ಔಟ್ಲೆಟ್ ಡಿಯಾರಿಯೊ ಡಿಪೋರ್ಟಿವೊ ಓಲೆಗೆ ತಿಳಿಸಿದ್ದಾರೆ.
FIFA World Cup 2022: ಇದೇ ಭಾನುವಾರ ಲಿಯೋನೆಲ್ ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೆಣಸಾಡಲಿದೆ. ಕಳೆದ ದಿನ ನಡೆದ ಪಂದ್ಯದಲ್ಲಿ ಅಲ್ ಬೇಟ್ ಸ್ಟೇಡಿಯಂನಲ್ಲಿ ಫ್ರಾನ್ಸ್ ತಂಡದ ಹೆರ್ನಾಂಡೆಜ್ ಐದು ನಿಮಿಷಗಳಲ್ಲಿ ಗೋಲು ಗಳಿಸಿದರು. ಈ ಮೂಲಕ ಎದುರಾಳಿ ತಂಡ ಮೊರೊಕೊವನ್ನು ಕಟ್ಟಿ ಹಾಕಿತು.
ಪುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡವು ಭರ್ಜರಿ ಪ್ರದರ್ಶನದಿಂದಾಗಿ ಈಗ ಫೈನಲ್ ತಲುಪಿದ್ದು, ಈ ಸಂದರ್ಭದಲ್ಲಿ ಅರ್ಜೆಂಟಿನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಫೈನಲ್ ಪಂದ್ಯವೇ ತಮಗೆ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಲಿದೆ ಎಂದು ಹೇಳಿದ್ದಾರೆ.
Morocco Beat Portugal: ಕತಾರ್ ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಫಿಫಾ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
FIFA World Cup 2022: Troll Football ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ‘This cat cursed Brazil’ ಅಂತಾ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
FIFA WORLD CUP 2022: ಪ್ರಸ್ತುತ ಎಲ್ಲಿ ನೋಡಿದರೂ ಫೀಫಾ ವರ್ಲ್ಡ್ ಕಪ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಕೇವಲ ಭೂಮಿಯ ಮೇಲೆ ಮಾತ್ರವಲ್ಲ 40,000 ಅಡಿಗಳಷ್ಟು ಎತ್ತರದ ಆಗಸದಲ್ಲಿಯೂ ಫೀಫಾ ವಿಶ್ವಕಪ್ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತಿರಾ... ಈ ವೈರಲ್ ವಿಡಿಯೋ ಒಮ್ಮೆ ವೀಕ್ಷಿಸಿ...
FIFA World Cup: ಕತಾರ್ನಲ್ಲಿ ಬೆಲ್ಜಿಯಂ ಸೋಲನುಭವಿಸುತ್ತಿದ್ದಂತೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿಯಾಯಿತು. ಬೆಲ್ಜಿಯಂ ಸೋಲಿನ ನಂತರ ಬ್ರಸೆಲ್ಸ್ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರು ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.
ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ.
FIFA Japanese Fans Video: ಫಿಫಾ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೊವನ್ನು 125.4K ಮಂದಿ ವೀಕ್ಷಣೆ ಮಾಡಿದ್ದಾರೆ. ಪಂದ್ಯದ ನಂತರ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಖಾಲಿ ಬಾಟಲಿ, ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಘಾನಾ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ಪರವಾಗಿ ಕ್ರಿಸ್ಟಿಯಾನೋ ರೊನಾಲ್ಡೊ ಪೆನಾಲ್ಟಿ ಗೋಲು ಗಳಿಸಿದರು.ಆ ಮೂಲಕ ಅವರು ಈಗ ಐದು ವಿಶ್ವಕಪ್ಗಳಲ್ಲಿ ಸ್ಕೋರ್ ಮಾಡಿದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
FIFA World Cup 2022 : ಫಿಫಾ ವಿಶ್ವಕಪ್ 2022 ರ ಪಂದ್ಯ ನಡೆಯುತ್ತಿದೆ. ಕೆನಡಾ ತಂಡದ ಪರ ಆಡಲು ತೆರಳಿದ ತನ್ನ ಮಗನನ್ನು ಟಿವಿಯಲ್ಲಿ ನೋಡಿದ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲ. ಈ ವಿಡಿಯೋ ಕ್ಲಿಪ್ನಲ್ಲಿ ಆಟಗಾರನ ತಾಯಿಯ ಸಂತಸವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.