ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಖ್ಯಾತ ರಾಜಕಾರಣಿ… ಈ ಬಾರಿಯ ಐಪಿಎಲ್’ನಲ್ಲಿ ಮಾಜಿ ರಾಜ್ಯಸಭಾ ಸದಸ್ಯನಿಂದ ಕಾಮೆಂಟರಿ!

Navjot Singh Sidhu Commentary: ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯದಲ್ಲಿ ಕಾಮೆಂಟರಿ ಮಾಡಲಿದ್ದಾರೆ.

Written by - Bhavishya Shetty | Last Updated : Mar 19, 2024, 04:41 PM IST
    • ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ಕ್ರಿಕೆಟ್‌’ಗೆ ಮರಳಲು ಸಜ್ಜಾಗಿದ್ದಾರೆ
    • ಐಪಿಎಲ್‌’ನ 17ನೇ ಋತುವಿನಲ್ಲಿ ಕಾಮೆಂಟರಿ ಮಾಡಲಿದ್ದಾರೆ
    • ಸಿಧು ಅವರು 2019 ರವರೆಗೆ ಕಪಿಲ್ ಶರ್ಮಾ ಶೋ ನಲ್ಲಿ ಕಾಣಿಸಿಕೊಂಡರು
ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಖ್ಯಾತ ರಾಜಕಾರಣಿ… ಈ ಬಾರಿಯ ಐಪಿಎಲ್’ನಲ್ಲಿ ಮಾಜಿ ರಾಜ್ಯಸಭಾ ಸದಸ್ಯನಿಂದ ಕಾಮೆಂಟರಿ! title=
Navjot Singh Sidhu

Navjot Singh Sidhu Commentary: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ಕ್ರಿಕೆಟ್‌’ಗೆ ಮರಳಲು ಸಜ್ಜಾಗಿದ್ದಾರೆ. ಐಪಿಎಲ್‌’ನ 17ನೇ ಋತುವಿನಲ್ಲಿ ಕಾಮೆಂಟರಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯದಲ್ಲಿ ಕಾಮೆಂಟರಿ ಮಾಡಲಿದ್ದಾರೆ.

ಇದನ್ನೂ ಓದಿ: Virat Kohli: ಅಕಾಯ್ ಹುಟ್ಟುತ್ತಿದ್ದಂತೆ ಭಾರತ ತೊರೆದು ಈ ದೇಶದಲ್ಲಿ ನೆಲೆಸಲು ವಿರಾಟ್ ನಿರ್ಧಾರ! ಕೊನೆಯಾಗುತ್ತಾ ಟೀಂ ಇಂಡಿಯಾದ ನಂಟು?

ಕಾಮೆಂಟರಿಯಿಂದ ದೂರವಾದ ನಂತರ ಸಿಧು ಅವರು 2019 ರವರೆಗೆ ಕಪಿಲ್ ಶರ್ಮಾ ಶೋ ನಲ್ಲಿ ಕಾಣಿಸಿಕೊಂಡರು. ವಿವಾದದ ನಂತರ ಅವರನ್ನು ಅಲ್ಲಿಂದ ತೆಗೆದುಹಾಕಲಾಯಿತು. ಅದರ ನಂತರ, ರಾಜಕೀಯದಲ್ಲಿ ಗಮನವನ್ನು ಕೇಂದ್ರೀಕರಿಸಿದ ಅವರು, ಈಗ ಲೋಕಸಭಾ ಚುನಾವಣೆಯ ಘೋಷಣೆಯ ಬಳಿಕ ಮತ್ತೆ ಕಾಮೆಂಟರಿಯತ್ತ ಮುಖ ಮಾಡಿದ್ದಾರೆ.

ಐಪಿಎಲ್ ಅಧಿಕೃತ ಬ್ರಾಡ್‌ ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಸಿಧು ಬಗ್ಗೆ ಮಾಹಿತಿ ನೀಡಿದೆ. ನವಜೋತ್ ಸಿಂಗ್ ಸಿಧು ಸ್ವತಃ ನಮ್ಮ ಕಾಮೆಂಟರಿ ಫಲಕಕ್ಕೆ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ, ಅವರ ನಂಬಲಾಗದ ವ್ಯಾಖ್ಯಾನ ಮತ್ತು ಅದ್ಭುತವಾದ ಒನ್-ಲೈನರ್‌’ಗಳನ್ನು ಮಿಸ್ ಮಾಡಿಕೊಳ್ಳಬೇಡಿ” ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಅನುಷ್ಕಾ ಜೊತೆ ವಿವಾಹಕ್ಕೂ ಮುನ್ನ ಕನ್ನಡದ ಈ ಖ್ಯಾತ ನಟಿ ಜೊತೆ ಡೇಟಿಂಗ್ ಮಾಡಿದ್ರಂತೆ ವಿರಾಟ್ ಕೊಹ್ಲಿ! ಆ ಬ್ಯೂಟಿ ಯಾರು ಗೊತ್ತಾ?

60 -ವರ್ಷದ ಸಿಧು ಭಾರತೀಯ ಕ್ರಿಕೆಟ್‌’ನ ಪ್ರತಿಷ್ಠಿತ ಧ್ವನಿಗಳಲ್ಲಿ ಒಬ್ಬರು. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಧ್ವನಿ ನೀಡುವುದರ ಹೊರತಾಗಿ, ಸಿಧು ಐಪಿಎಲ್‌’ನಲ್ಲಿ ಅನೇಕ ಪ್ರಸಾರಕರಿಗಾಗಿ ಕೆಲಸ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News