Tokyo Olympics 2020: ಅನಿಮೇಟೆಡ್ ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ

ಗೂಗಲ್ ಡೂಡಲ್ ವೀಕ್ಷಿಸುವ ಮೂಲಕ ಆಟಗಳನ್ನೂ ಆಡಬಹುದು.

Written by - Puttaraj K Alur | Last Updated : Jul 23, 2021, 10:26 AM IST
  • ಕೊವಿಡ್-19 ಭೀತಿಯ ಮಧ್ಯೆಯೇ ಟೋಕಿಯೊ ಒಲಂಪಿಕ್ಸ್ 2020ಕ್ಕೆ ಅದ್ದೂರಿ ಚಾಲನೆ
  • ವಿಶೇಷ ಡೂಡಲ್ ಮೂಲಕ ಟೋಕಿಯೊ ಒಲಂಪಿಕ್ಸ್ 2020ರ ಕ್ರೀಡಾಕೂಡಕ್ಕೆ ಗೂಗಲ್ ನಮನ
  • ಅನಿಮೇಟೆಡ್ ಐಸ್ಲ್ಯಾಂಡ್ ಚಾಂಪಿಯನ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ
Tokyo Olympics 2020: ಅನಿಮೇಟೆಡ್ ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ  title=
ಟೋಕಿಯೊ ಒಲಂಪಿಕ್ಸ್ ಗೂಗಲ್ ಡೂಡಲ್ (Photo Courtesy: Google)

ಟೋಕಿಯೊ: ಟೋಕಿಯೊ ಒಲಂಪಿಕ್ಸ್ 2020ಕ್ಕೆ ಇಂದು ಅದ್ದೂರಿ ಚಾಲನೆ ದೊರೆತಿದೆ. ಭಾರತ ಸೇರಿದಂತೆ ವಿವಿಧ ದೇಶಗಳ ಸಾವಿರಾರು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್-19 ಭೀತಿಯ ಮಧ್ಯೆಯೇ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಶುಕ್ರವಾರ ಒಲಂಪಿಕ್ಸ್ ಗೆ ಸಂಭ್ರಮದ ಚಾಲನೆ ದೊರೆಯಿತು.

ಪ್ರತಿಯೊಂದು ವಿಶೇಷ ಸಂದರ್ಭಗಳನ್ನು ತನ್ನ ಡೂಡಲ್ ಮೂಲಕ ಗೂಗಲ್ ಸ್ಮರಣೀಯವಾಗಿಸುತ್ತದೆ. ಅದೇ ರೀತಿ ವಿಶೇವಾದ ಅನಿಮೇಟೆಡ್ ಗೂಗಲ್ ಡೂಡಲ್(Google Doodles) ರಚಿಸುವ ಮೂಲಕ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಇದನ್ನು ‘ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್’ ಎಂದು ಹೆಸರಿಸಿದೆ. ಗೂಗಲ್ ಡೂಡಲ್ ಪೇಜ್ ನಲ್ಲಿ ‘ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್’ ಗಳನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ: Viral Video: ಮೊಹಮ್ಮದ್ ಶಮಿಗೆ ಬಕ್ರೀದ್ ಶುಭಾಶಯ ತಿಳಿಸಿದ ಇಶಾಂತ್ ಶರ್ಮಾ

ಗೂಗಲ್ ಡೂಡಲ್(Google Doodles) ಪೇಜ್ ತೆರೆದ ಬಳಿಕ ನಿಮಗೆ ಅನಿಮೇಟೆಡ್ ಟೆಬಲ್ ಟೆನ್ನಿಸ್, ಸ್ಕೇಟ್ ಬೋರ್ಡಿಂಗ್, ಅರ್ಚರಿ, ರಗ್ಬಿ, ಸ್ವಿಮ್ಮಿಂಗ್, ಕ್ಲೈಮಿಂಗ್ ಮತ್ತು ಮ್ಯಾರಥಾನ್ ಗೇಮ್ ಗಳು ಕಾಣಿಸಿಕೊಳ್ಳುತ್ತವೆ.

ಹೇಗೆ ವೀಕ್ಷಿಸುವುದು..?

ಈಗಾಗಲೇ ಹೇಳಿರುವಂತೆ ನೀವು ಗೂಗಲ್ ಡೂಡಲ್ ಪೇಜ್ ಓಪನ್ ಮಾಡಬೇಕು. ಅಲ್ಲಿ ನಿಮಗೆ ‘ವೆಲ್ ಕಮ್ ಟು ದಿ ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್!’ ಎಂದು ಕಾಣುತ್ತದೆ. ಈಗ ನೀವು ಪ್ಲೇ ಬಟನ್ ಒತ್ತುವ ಮೂಲಕ ಅನಿಮೇಟೆಡ್ ಗೂಗಲ್ ಡೂಡಲ್ ವೀಕ್ಷಿಸಬಹುದಾಗಿದೆ. ಯಾವಾಗ ನೀವು ಗೂಗಲ್ ಡೂಡಲ್ ಓಪನ್ ಮಾಡುತ್ತಿರೋ ಆವಾಗ ನಿಮಗೆ ಸುಂದರವಾದ ಜಗತ್ತೊಂದು ನೋಡಲು ಸಿಗುತ್ತದೆ. ಅನಿಮೇಟೆಡ್ ಮೂಲಕ ಸೃಷ್ಟಿಸಲಾಗಿರುವ ಟೋಕಿಯೊ ಒಲಂಪಿಕ್ಸ್(Tokyo Olympic Games) ನ ವಿಶೇಷತೆಗಳನ್ನು ಡೂಡಲ್ ನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Viral News: ಬೀಡಿ ಪ್ಯಾಕೆಟ್ ಮೇಲಿನ ಲಿಯೊನೆಲ್‌ ಮೆಸ್ಸಿ ಫೋಟೋ ವೈರಲ್!

ಡೂಡಲ್ ನಲ್ಲಿ ನೀವು ವಿವಿಧ ಗೇಮ್ ಗಳನ್ನು ಕೂಡ ಆಡಬಹುದಾಗಿದೆ. ಅಲ್ಲಿ ನಿಮಗೆ ಸೆಟ್ಟಿಂಗ್ಸ್, ಕಂಟ್ರೋಲ್ಸ್, ಲೀಡರ್ ಬೋರ್ಡ್ ಮತ್ತು ಶೇರ್ ಆಪ್ಶನ್ ದೊರೆಯುತ್ತದೆ. ನೀವು ವಿವಿಧ ರೀತಿಯ ಆಟಗಳನ್ನು ಆಡಲು ಮೊದಲು ಸೆಟ್ಟಿಂಗ್ಸ್ ಮಾಡಿಕೊಂಡು, ಕಂಟ್ರೋಲ್ಸ್ ಆಪ್ಶನ್ ಬಳಸಿ ಗೇಮ್ಸ್ ಗಳನ್ನು ಕಂಟ್ರೋಲ್ ಮಾಡಬಹುದು. ಅಲ್ಲದೇ ಲೀಡರ್ ಬೋರ್ಡ್ ಕೂಡ ವೀಕ್ಷಿಸಬಹುದಾಗಿದೆ. ಈ ಆಟಗಳನ್ನು ನೀವು ಶೇರ್ ಕೂಡ ಮಾಡಬಹುದಾಗಿದೆ.

ಇಂದಿನ ವಿಶೇಷ ‘ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್’ನ ಕಟ್‌ಸ್ಕೀನ್ ಅನಿಮೇಷನ್‌ ಮತ್ತು ಪಾತ್ರಗಳನ್ನು ಜಪಾನ್(Japan) ಮೂಲದ ಆನಿಮೇಷನ್ ಸ್ಟುಡಿಯೋ STUDIO4 by C ನಿಂದ ಸೃಷ್ಟಿಸಲಾಗಿದೆ. ನೀವು ಗೂಗಲ್ ಡೂಡಲ್ ವೀಕ್ಷಿಸುವ ಮೂಲಕ ಅದರಲ್ಲಿರುವ ಆಟಗಳನ್ನು ಆಡಿ ನೋಡಿ…  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News